ಕಾರವಾರದ ಬೈತಖೋಲ್ ಮೀನುಗಾರರ ಬಲೆಗೆ ಅಪರೂಪದ ಅತಿಥಿ

ಕಾರವಾರದ ಬೈತಖೋಲ್ ಬಳಿ ಮೀನುಗಾರ ಬಲೆಗೆ ಅತಿ ಅಪರೂಪದ ಜಲಚರ ಸಿಕ್ಕಿದೆ ಈ ಮೀನಿನ ಹೆಸರು ಕೊಂಕಣಿಯಲ್ಲಿ ತೊರ್ಕೆ ಮೀನು ಎಂದು ಕರೆಯುತ್ತಾರೆ. ಈ ಮೀನು ನೋಡಲು ಆಕಳಿನ ಮೂಗಿನ ರೀತಿ ಕಾಣುತ್ತದೆ.ಇದು ಅಳಿವಿನಂಚಿನ ಅಪರೂಪದ ಮೀನು ಆಗಿದೆ. ನಗರದ ಬೈತಖೋಲ್ ಸಮೀಪದ ಲೇಡಿ ಬೀಚ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರ ಬಲೆಗೆ ಬರೊಬ್ಬರಿ ಅರ್ಧ ಕ್ವಿಂಟಲ್ ತೂಕದ ಆಕಳ ಮೂಗಿನ ತೊರ್ಕೆ ಮೀನು ಸಿಕ್ಕಿದೆ ಇದು ಅಳಿವಿನಂಚಿನ ಅಪರೂಪದ ಮೀನು ಆಗಿದೆ. ಈ ಮೀನು ಶಾರ್ಕ್ ಜಾತಿಯ ಪ್ರಭೇದಕ್ಕೆ ಸೇರಿದೆ. ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನು ಎರಡು ಮೀಟರ್ ವರೆಗೂ ಬೆಳೆಯುತ್ತದೆ. ಇದರ ಬಾಲ ಉದ್ದವಾದ ಎರಡು ಮುಳ್ಳುಗಳನ್ನು ಹೊಂದಿರುತ್ತದೆ. ಗರಿಷ್ಠ ೧೬ ವರ್ಷಗಳ ಕಾಲ ಬದುಕುವ ಈ ಮೀನು ಅಳವಿನಂಚಿನಲ್ಲಿರುವ ಪ್ರಭೇದ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ನಿಯಂತ್ರಿಸಲು ಕಾಂಗ್ರೆಸ್‌ನ ಆರೋಗ್ಯ ಹಸ್ತ ಯೋಜನೆ

Sun Jul 26 , 2020
ಕೊರೊನಾ ನಿಯಂತ್ರಿಸಲು ಕಾಂಗ್ರೆಸ್ ಹಮ್ಮಿಕೊಂಡಿರುವ ಆರೋಗ್ಯ ಹಸ್ತೆ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಶಾಸಕರು ಅಥವಾ ೨೦೧೮ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಕಾಂಗ್ರೆಸ್ ಕೊರೊನಾ ವಾರಿಯರ್ಸ್ ಪಟ್ಟಿ ತಯಾರಿಸಲು ಮತ್ತು ಈ ಸಂಬAಧ ಕಾರ್ಯನಿರ್ವಹಿಸುವ ಸಲುವಾಗಿ ಶಾಸಕ ಅಜಯ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕೋವಿಡ್ -೧೯ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡುವುದು […]

Advertisement

Wordpress Social Share Plugin powered by Ultimatelysocial