ಮಹಿಳಾ ಪೊಲೀಸ್ ರಾಜೀನಾಮೆ

ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಗುಜರಾತ್ ಸಚಿವರ ಮಗನನ್ನು ಬಂಧಿಸಿದ್ದ ಗುಜರಾತ್ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿದ್ದು, ಇದೀಗ ಅದೇ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಗುಜರಾತ್ ನ ಆರೋಗ್ಯ ಸಚಿವರ ಪುತ್ರ ಪ್ರಕಾಶ್ ಕನಾನಿ ಹಾಗೂ ಅವರ ಇಬ್ಬರು ಸ್ನೇಹಿತರನ್ನು ಮಹಿಳಾ ಪೊಲೀಸ್ ಪೇದೆ ಸುನಿತಾ ಯಾದವ್ ಲಾಕ್ ಡೌನ್ ನನ್ನು ಉಲ್ಲಂಘಿಸಿದ್ದಕ್ಕಾಗಿ ಸೂರತ್ ನಲ್ಲಿ ಬಂಧಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಆಕೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ , ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ, ಆದರೆ ನನ್ನ ಹಿರಿಯ ಅಧಿಕಾರಿಗಳಿಂದ ನನಗೆ ಬೆಂಬಲ ಸಿಗಲಿಲ್ಲ. ಈ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಸುನಿತಾ ಯಾದವ್ ರಾಜೀನಾಮೆ ನೀಡಿಲ್ಲ ಎಂದು ಸೂರತ್ ಪೊಲೀಸ್ ಆಯುಕ್ತರಾದ ಆರ್ ಬಿ ಬ್ರಹ್ಮಭಟ್ ಹೇಳಿದ್ದಾರೆ.

 

 

 

Please follow and like us:

Leave a Reply

Your email address will not be published. Required fields are marked *

Next Post

ಬಾಣಂತಿ, ಹಸುಗೂಸನ್ನು ಸ್ವಗ್ರಾಮಕ್ಕೆ ತಲುಪಿಸಿದ ಪೊಲೀಸರು

Thu Jul 16 , 2020
ನವಜಾತ ಶಿಶುವನ್ನು ಹೊತ್ತುಕೊಂಡು ಊರಿಗೆ ತೆರಳಲಾಗದ ಬಾಣಂತಿ ಹಾಗೂ ಅವರ ಪೋಷಕರಿಗೆ ಪೊಲೀಸರು ಊರಿಗೆ ತಲುಪಲು ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಿತ್ತೂರಿನ ಮಹಿಳೆಯೊಬ್ಬರು ಹೆರಿಗೆಗೆಂದು ನಗರ ಸಿಟಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಹೆರಿಗೆಯಾಗಿ ಮೂರು ದಿನವಾದ ನಂತರ ಇಂದು ಕ್ಲಿನಿಕ್ ನವರು ಏಕಾಏಕಿ ಡಿಸ್ಚಾರ್ಜ್ ಮಾಡಿದ್ದಾರೆ. ಆದ್ರೆ ಲಾಕ್‌ಡೌನ್ ಆಗಿದ್ದರಿಂದ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಾಳೆ ಡಿಸ್ಚಾರ್ಜ್ ಮಾಡುವಂತೆ ಮಹಿಳೆ […]

Advertisement

Wordpress Social Share Plugin powered by Ultimatelysocial