ಮೊಬೈಲ್‌ ಬಳಕೆದಾರರೇ ಎಚ್ಚರ : ನಿಮ್ಮ ಫೋನ್ʼನಲ್ಲಿ ʼಈ ಏಳು ಅಪ್ಲಿಕೇಶನ್ʼಗ..!ಳಿದ್ರೆ, ತಕ್ಷಣವೇ ಡಿಲೀಟ್‌ ಮಾಡಿ

ಮೊಬೈಲ್‌ ಬಳಕೆದಾರರೇ ಎಚ್ಚರ : ನಿಮ್ಮ ಫೋನ್ʼನಲ್ಲಿ ʼಈ ಏಳು ಅಪ್ಲಿಕೇಶನ್ʼಗಳಿದ್ರೆ, ತಕ್ಷಣವೇ ಡಿಲೀಟ್‌ ಮಾಡಿ..!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಪ್ರಪಂಚದಾದ್ಯಂತದ ಸೈಬರ್ ಅಪರಾಧಿಗಳು ವಿಭಿನ್ನ ವಿಧಾನಗಳನ್ನ ಬಳಸಿ, ಜನರನ್ನ ವಂಚಿಸ್ತಾರೆ. ಇದರಲ್ಲಿ ಒಂದು ಜೋಕರ್ ಮಾಲ್ ವೇರ್ ಆಗಿದ್ದು, ಇದು ಅಧಿಕೃತ ಗೂಗಲ್ ಪ್ಲೇ ಸ್ಟೋರ್ʼನಲ್ಲಿ ಹೊಸ ಅಪ್ಲಿಕೇಶನ್ʼಗಳನ್ನ ಸೋಂಕಿಸುತ್ತಿದೆ.

ಮೊಬೈಲ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆ ಪ್ರಡಿಯೋ ಈಗಾಗಲೇ 15 ಜನಪ್ರಿಯ ಅಪ್ಲಿಕೇಶನ್ʼಗಳಿಗೆ ವೈರಸ್‌ ತಗುಲಿರುವ ಮಾಲ್ ವೇರ್ ಬಗ್ಗೆ ಆಂಡ್ರಾಯ್ಡ್ ಫೋನ್ ಬಳಕೆದಾರರನ್ನ ಎಚ್ಚರಿಸಿದೆ.

ಮೊಬೈಲ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆ ಪ್ರಡಿಯೋ ಈ ಬಗ್ಗೆ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅವರ ವರದಿಯ ಪ್ರಕಾರ, 5 ಲಕ್ಷ ಬಳಕೆದಾರರು ಬಳಸುವ ಕಲರ್ ಮೆಸೇಜ್ ಎಂಬ ಜನಪ್ರಿಯ ಅಪ್ಲಿಕೇಶನ್ ಜೋಕರ್ ಮಾಲ್ ವೇರ್ʼನಿಂದ ಸೋಂಕಿಗೆ ಒಳಗಾಗಿದೆ. ‘ಅಪ್ಲಿಕೇಶನ್ ರಷ್ಯಾದ ಸರ್ವರ್ʼಗಳಿಗೆ ಸಂಪರ್ಕಗಳನ್ನ ಮಾಡುತ್ತಿದೆ ಎಂದು ತೋರುತ್ತದೆ’ ಎಂದು ವರದಿ ಹೇಳಿದೆ.

1. ಲೆಜಿಟ್ ಆಂಡ್ರಾಯ್ಡ್ ಅಪ್ಲಿಕೇಶನ್ʼಗಳು : ಜೋಕರ್ ಮಾಲ್ ವೇರ್ ಕಳೆದ ವರ್ಷ ಪ್ರಮುಖ ಮೊಬೈಲ್ ಭದ್ರತಾ ಅಪಾಯವನ್ನ ಸೃಷ್ಟಿಸಿತ್ತು. ಆ ಸಮಯದಲ್ಲಿ ಇದು ಗೂಗಲ್ ಪ್ಲೇ ಸ್ಟೋರ್ʼನಲ್ಲಿ ಲೆಜಿಟ್ ಆಂಡ್ರಾಯ್ಡ್ ಅಪ್ಲಿಕೇಶನ್ʼಗಳನ್ನ ಸೋಂಕಿಸುತ್ತಿತ್ತು. ಗೂಗಲ್ʼನ ಪ್ರಯತ್ನಗಳ ಹೊರತಾಗಿಯೂ, ಜೋಕರ್ ಮಾಲ್ ವೇರ್ ಗೂಗಲ್ʼನ ಭದ್ರತೆಯನ್ನು ಬೈಪಾಸ್ ಮಾಡಲು ತನ್ನ ಕೋಡ್ʼನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಯಶಸ್ವಿಯಾಗಿ ಮರಳಿದೆ.

2. ಕಲರ್ ಮೆಸೇಜ್ ಅಪ್ಲಿಕೇಶನ್ : ಮೊಬೈಲ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆ ಪ್ರಡಿಯೋದ ಸಂಶೋಧಕರ ತಂಡವು, ಪ್ಲೇ ಸ್ಟೋರ್ʼನಲ್ಲಿ ಐದು ಲಕ್ಷಕ್ಕೂ ಹೆಚ್ಚು ಡೌನ್ಲೋಡ್ʼಗಳನ್ನು ಹೊಂದಿರುವ ಕಲರ್ ಮೆಸೇಜ್ ಎಂಬ ಗೂಗಲ್ ಪ್ಲೇ ಸ್ಟೋರ್ʼನಲ್ಲಿರುವ ಅಪ್ಲಿಕೇಶನ್ ಕೂಡ ಜೋಕರ್ ಮಾಲ್ ವೇರ್ʼನಿಂದ ಸೋಂಕಿಗೆ ಒಳಗಾಗಿದೆ ಎಂದು ಕಂಡುಹಿಡಿದಿದೆ.

3. ಕಲರ್‌ ಮೆಸೇಜ್‌ ಅಪ್ಲಿಕೇಶನ್‌ : ಹೊಸ ಎಮೋಜಿಗಳೊಂದಿಗೆ ನಿಮ್ಮ ಎಸ್ ಎಂಎಸ್ ಟೆಕ್ಸ್ಟಿಂಗ್ʼನ್ನ ಹೆಚ್ಚು ಮೋಜು ಮಾಡುತ್ತೆ ಎಂದು ಈ ಅಪ್ಲಿಕೇಶನ್ ಹೇಳಿಕೊಂಡಿದೆ. ಆದ್ರೆ, ವಿನೋದ ಮತ್ತು ಸುಂದರ ಸಂದೇಶ ಅನುಭವ ನೀಡುವ ಈ ಅಪ್ಲಿಕೇಶನ್ ನಿಜವಾಗಿಯೂ ಜೋಕರ್ ಮಾಲ್ ವೇರ್ʼನಿಂದ ಸೋಂಕಿಗೆ ಒಳಗಾಗಿದೆ ಎಂದು ಪ್ರಡಿಯೋದ ಸಂಶೋಧಕರ ತಂಡವು ಕಂಡುಕೊಂಡಿದೆ. ಗೂಗಲ್ ಪ್ಲೇ ಸ್ಟೋರ್ ಈಗಾಗಲೇ ಅಪ್ಲಿಕೇಶನ್ʼನನ್ನ ಸ್ಟೋರ್‌ನಿಂದ ನಿಷೇಧಿಸಿದೆ.

4. ಜೋಕರ್ ಮಾಲ್ ವೇರ್ ಸೋಂಕಿತ 14 ಆಂಡ್ರಾಯ್ಡ್ ಅಪ್ಲಿಕೇಶನ್ʼಗಳು
ಇತ್ತೀಚೆಗೆ, ಸೈಬರ್ ಸೆಕ್ಯುರಿಟಿ ಸಂಸ್ಥೆ ಕಾಸ್ಪರ್ಸ್ಕಿಯ ವಿಶ್ಲೇಷಕರಾದ ಟಾಟ್ಯಾನಾ ಶಿಶ್ಕೋವಾ, ಜೋಕರ್ ಮಾಲ್ ವೇರ್ ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್ʼಗಳನ್ನು ಸೋಂಕಿಸುತ್ತಿದೆ ಎಂದು ಕಂಡುಕೊಂಡರು. ಜೋಕರ್ ಮಾಲ್ ವೇರ್ʼನ್ನ ಮೊದಲು 2017ರಲ್ಲಿ ಕಂಡುಹಿಡಿಯಲಾಯಿತು ಮತ್ತು ಅಂದಿನಿಂದ ಗೂಗಲ್ʼಗೆ ಪ್ರಮುಖ ಸವಾಲಾಗಿ ಉಳಿದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೇ ಪ್ರಯಾಣಿಕರ ಗಮನಕ್ಕೆ : ಈ ಭಾಗದಲ್ಲಿ ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ

Wed Dec 22 , 2021
ಹುಬ್ಬಳ್ಳಿ : ದಕ್ಷಿಣ ರೈಲ್ವೇಯ ಸೇಲಂ ವಿಭಾಗದ ಓಮಲೂರ್ ಮತ್ತು ಮೆಟ್ಟೂರ್‌ಡ್ಯಾಮ್ ನಡುವೆ ಹಳಿಗಳ ಪಥ ದ್ವಿಗುಣಗೊಳಿಸುವ ಸಂಬಂಧ ಸಿಗ್ನಲಿಂಗ್ ವ್ಯವಸ್ಥೆಗಳ ಸಂಪರ್ಕ ಕಡಿತಗೊಳಿಸುವ ಕಾರಣದಿಂದ ರೈಲುಗಳನ್ನು ಬೇರೆ ಮಾರ್ಗಕ್ಕೆ ಬದಲಾವಣೆ ಮಾಡಲಾಗಿದೆ. ಈ ಕುರಿತು ಅನೀಶ ಹೆಗಡೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ, ಹುಬ್ಬಳ್ಳಿ ಇವರು ಪ್ರಕಟಣೆ ಹೊರಡಿಸಿದ್ದಾರೆ. ಏನಿದು ಬದಲಾವಣೆ..? 1) ದಿನಾಂಕ 02.01.2022 ಹಾಗೂ 02.03.2022 ರ ರೈಲು ಸಂಖ್ಯೆ. 11014 ಕೊಯಮತ್ತೂರು […]

Advertisement

Wordpress Social Share Plugin powered by Ultimatelysocial