ರೈಲ್ವೇ ಪ್ರಯಾಣಿಕರ ಗಮನಕ್ಕೆ : ಈ ಭಾಗದಲ್ಲಿ ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ

BIGG NEWS : ರೈಲ್ವೇ ಪ್ರಯಾಣಿಕರ ಗಮನಕ್ಕೆ : ಈ ಭಾಗದಲ್ಲಿ ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ

ಹುಬ್ಬಳ್ಳಿ : ದಕ್ಷಿಣ ರೈಲ್ವೇಯ ಸೇಲಂ ವಿಭಾಗದ ಓಮಲೂರ್ ಮತ್ತು ಮೆಟ್ಟೂರ್‌ಡ್ಯಾಮ್ ನಡುವೆ ಹಳಿಗಳ ಪಥ ದ್ವಿಗುಣಗೊಳಿಸುವ ಸಂಬಂಧ ಸಿಗ್ನಲಿಂಗ್ ವ್ಯವಸ್ಥೆಗಳ ಸಂಪರ್ಕ ಕಡಿತಗೊಳಿಸುವ ಕಾರಣದಿಂದ ರೈಲುಗಳನ್ನು ಬೇರೆ ಮಾರ್ಗಕ್ಕೆ ಬದಲಾವಣೆ ಮಾಡಲಾಗಿದೆ.

ಈ ಕುರಿತು ಅನೀಶ ಹೆಗಡೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ, ಹುಬ್ಬಳ್ಳಿ ಇವರು ಪ್ರಕಟಣೆ ಹೊರಡಿಸಿದ್ದಾರೆ.

ಏನಿದು ಬದಲಾವಣೆ..?

1) ದಿನಾಂಕ 02.01.2022 ಹಾಗೂ 02.03.2022 ರ ರೈಲು ಸಂಖ್ಯೆ. 11014 ಕೊಯಮತ್ತೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ನಿತ್ಯಸೇವೆಯ ಎಕ್ಸ್ ಪ್ರೆಸ್ ರೈಲು ಸೇಲಂ, ಮ್ಯಾಗ್ನಸೈಟ್ ಜಂಕ್ಷನ್, ಜೋಲಾರಪೆಟ್ಟೈ ‘ಬಿ’ ಕ್ಯಾಬಿನ್, ಕುಪ್ಪಮ್, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಧರ್ಮಪುರಿ ಮತ್ತು ಹೊಸುರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

2) ದಿನಾಂಕ 02.03.2022 ರ ರೈಲು ಸಂಖ್ಯೆ. 12678 ಎರ್ನಾಕುಲಮ್ – ಕೆ.ಎಸ್.ಆರ್ ಬೆಂಗಳೂರು ನಿತ್ಯಸೇವೆಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಸೇಲಂ, ಮ್ಯಾಗ್ನಸೈಟ್ ಜಂಕ್ಷನ್, ಜೋಲಾರಪೆಟ್ಟೈ ‘ಬಿ’ ಕ್ಯಾಬಿನ್, ಕುಪ್ಪಮ್, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಧರ್ಮಪುರಿ, ಹೊಸುರ ಮತ್ತು ಕಾರ್ಮೆಲಾರಮ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

3) ದಿನಾಂಕ 02.03.2022 ರ ರೈಲು ಸಂಖ್ಯೆ. 12677 ಕೆ. ಎಸ್. ಆರ್ ಬೆಂಗಳೂರು – ಎರ್ನಾಕುಲಮ್ ನಿತ್ಯಸೇವೆಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಮ್, ಜೋಲಾರಪೆಟ್ಟೈ ‘ಬಿ’ ಕ್ಯಾಬಿನ್, ಮ್ಯಾಗ್ನಸೈಟ್ ಜಂಕ್ಷನ್ ಹಾಗೂ ಸೇಲಂ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಕಾರ್ಮೆಲಾರಮ್, ಹೊಸುರ ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಈ ಮೇಲಿನ ರೈಲು ಬದಲಾದ ಮಾರ್ಗದಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ.

II. ರೈಲಿನ ವೇಳಾಪಟ್ಟಿಯ ಪರಿಷ್ಕರಣೆ

ಈಶಾನ್ಯ ಗಡಿ ರೈಲ್ವೆ ಯು ಈ ಕೆಳಗಿನ ರೈಲುಗಳ ವೇಳಾಪಟ್ಟಿಯಲ್ಲಿ ನ್ಯೂ ಜಲಪೈಗುರಿ ನಿಲ್ದಾಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನಂತೆ ಬದಲಾವಣೆಯನ್ನು ಸೂಚಿಸಿದೆ.

  1. ದಿನಾಂಕ 02.01.2022 ರಿಂದ ರೈಲು ಸಂಖ್ಯೆ. 12510 ಗುವಾಹಟಿ – ಬೆಂಗಳೂರು ಕಂಟೋನ್ಮೆಂಟ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ‘ನ್ಯೂ ಜಲಪೈಗುರಿ’ ರೈಲ್ವೆ ನಿಲ್ದಾಣದ ಆಗಮನ/ನಿರ್ಗಮನ ಸಮಯಗಳು ಬದಲಾಗಿದ್ದು, ಅದರಂತೆ ‘ನ್ಯೂ ಜಲಪೈಗುರಿ’ ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು 14:30/14:40 ಗಂಟೆಗೆ ಬದಲಾಗಿ 13:45/13:55 ಗಂಟೆಗೆ ಪರಿಷ್ಕೃತವಾಗಿವೆ.
  2. ದಿನಾಂಕ 07.01.2022 ರಿಂದ ರೈಲು ಸಂಖ್ಯೆ. 22502 ನ್ಯೂ ತಿನ್ಸುಕಿಯಾ – ಕೆ.ಎಸ್.ಆರ್. ಬೆಂಗಳೂರು ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ‘ನ್ಯೂ ಜಲಪೈಗುರಿ’ ರೈಲ್ವೆ ನಿಲ್ದಾಣದ ಆಗಮನ/ನಿರ್ಗಮನ ಸಮಯಗಳು ಬದಲಾಗಿದ್ದು, ಅದರಂತೆ ‘ನ್ಯೂ ಜಲಪೈಗುರಿ’ ನಿಲ್ದಾಣದ ಆಗಮನ/ನಿರ್ಗಮನದ ಸಮಯಗಳು 14:15/14:25 ಗಂಟೆಗೆ ಬದಲಾಗಿ 13:45/13:55 ಗಂಟೆಗೆ ಪರಿಷ್ಕೃತವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
  3. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

    https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಸೆಕ್ಸ್‌ನ ಬಳಿಕ ಹೆಣ್ಣಿನ ದೇಹದಲ್ಲಿ ಆಗುವ ಬದಲಾವಣೆಗಳು ನಿಮಗೆ ಗೊತ್ತೆ?

Wed Dec 22 , 2021
ಮೊದಲ ಸೆಕ್ಸ್ ಬಳಿಕ ಹೆಣ್ಣಿನ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ.  ಭಾರತದಂಥ ದೇಶದಲ್ಲಿ ಮೊದಲ ಲೈಂಗಿಕ ಸಂಭೋಗದ (Sex) ಅನುಭವ ಗಂಡಿಗೂ ಹೆಣ್ಣಿಗೂ ವಿಶೇಷವೇ. ಇದರ ನಂತರ ನಿಮ್ಮ ದೇಹದಲ್ಲಿ ಆಗುವ ಅನೇಕ ಬದಲಾವಣೆಗಳನ್ನು ನೀವು ಕಾಣಬಹುದು. ಮಹಿಳೆಯ ದೇಹವು ಅವರ ಮೊದಲ ಲೈಂಗಿಕ ಅನುಭವದ ನಂತರ ಹಾದುಹೋಗುವ ಅನೇಕ ಬದಲಾವಣೆಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ: ಯೋನಿ (Vagina) ಬದಲಾವಣೆಗಳು  ನೀವು ಮೊದಲ ಸೆಕ್ಸ್ ಅನುಭವ ಪಡೆದ ಬಳಿಕವಷ್ಟೇ ನಿಮ್ಮ ಯೋನಿಯು […]

Advertisement

Wordpress Social Share Plugin powered by Ultimatelysocial