ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ..!

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ರೋಗ ಆಹ್ವಾನಿಸಿದಂತೆ ಅಂತಾ ಹಿರಿಯರು ಹೇಳ್ತಾರೆ. ಈಗಿನ ಜನರು ಅದನ್ನು ನಿರ್ಲಕ್ಷಿಸಿಯಾಗಿದೆ. ಹಿತವೆನಿಸುವ ಕಾರಣ ಸಾಮಾನ್ಯವಾಗಿ ಎಲ್ಲರೂ ಈ ಭಂಗಿಯಲ್ಲಿ ಕುಳಿತುಕೊಳ್ಳಲು ಇಷ್ಟ ಪಡ್ತಾರೆ. ಆದ್ರೆ ಹಿರಿಯರು ಹೇಳುವುದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ.

ಅಧ್ಯಯನವೊಂದು ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬೇಡಿ ಎಂದಿದೆ.

ಪುರುಷರು ಈ ರೀತಿ ಕುಳಿತುಕೊಳ್ಳುವುದು ಕಡಿಮೆ. ಮಹಿಳೆಯರು ಇದೇ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಅದು ಅವರಿಗೆ ಕಂಫರ್ಟ್ ಎನ್ನಿಸುತ್ತದೆ. ವರದಿ ಪ್ರಕಾರ ದೀರ್ಘ ಸಮಯ ಹೀಗೆ ಕುಳಿತುಕೊಳ್ಳುವುದರಿಂದ ಸಂಧಿವಾತದ ಸಮಸ್ಯೆ ಕಾಡುವ ಸಂಭವವಿರುತ್ತದೆಯಂತೆ.

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ರಕ್ತ ಸಂಚಾರ ನಿಧಾನವಾಗುತ್ತದೆ. ಕಾಲಿನ ಕೆಲ ಭಾಗ ದಪ್ಪಗಾಗುವ ಸಾಧ್ಯತೆಗಳಿವೆ. ಉರಿ ಊತ ಕೂಡ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಸೊಂಟ ನೋವು ನಿಮ್ಮನ್ನು ಕಾಡಲಿದೆ. ನಡು ಹಾಗೂ ಕಾಲು ನೋವು ಕೂಡ ಕಾಣಿಸಿಕೊಂಡು ನೀವು ಬೇಗ ಮುದುಕರಾಗ್ತೀರಿ ಎನ್ನುತ್ತದೆ ಸಂಶೋಧನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈರುಳ್ಳಿ ಸಿಪ್ಪೆಯಲ್ಲೂ ಇದೆ ಔಷಧೀಯ ಗುಣ

Mon Feb 27 , 2023
  ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆಹಾರ ತಯಾರಿಕೆ ಜೊತೆಗೆ ಕೆಲವೊಂದು ಔಷಧಿಗೂ ಈರುಳ್ಳಿ ಬಳಸ್ತಾರೆ. ಈರುಳ್ಳಿ ಸಿಪ್ಪೆ ತೆಗೆದು ಕಸಕ್ಕೆ ಹಾಕ್ತಾರೆ. ಆದ್ರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಔಷಧ ಗುಣವಿದೆ ಎಂಬುದು ನಿಮಗೆ ಗೊತ್ತಾ? ಈರುಳ್ಳಿ ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ. ಟೀ ಅಥವಾ ಸೂಪ್ ಮಾಡುವ ವೇಳೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಬೇಕು. ಆಂಟಿಆಕ್ಸಿಡೆಂಟ್ ಚರ್ಮ ಹಾಗೂ ದೇಹದ ಒಳ ಭಾಗವನ್ನು ಸ್ವಚ್ಛಗೊಳಿಸುತ್ತದೆ. ರೋಗ-ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈರುಳ್ಳಿ ಸಿಪ್ಪೆ […]

Advertisement

Wordpress Social Share Plugin powered by Ultimatelysocial