ಕಾವೇರಿ ನೀರು ವಿವಾದ: ಮಂಡ್ಯದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲ್ಯೂಆರ್‌ಸಿ) ಕರ್ನಾಟಕಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ, ಕೆಆರೆಎಸ್‌ ಜಲಾಶಯದ ಸುತ್ತಮುತ್ತ ಪ್ರತಿಭಟನೆಗಳ ಬಿಸಿ ಹೆಚ್ಚಾಗತೊಡಗಿದೆ.

ರೈತರು, ರೈತ ಪರ ಸಂಗಟನರಗಳು, ಕನ್ನಡ ಪರ ಸಂಘಟನೆಗಳು ಈಗಾಗಲೇ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದು, ಕಾವೇರಿ ನೀರಿಗಾಗಿ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ ತಮಿಳುನಾಡಿಗೆ ಕಾವೇರಿ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಕೂಡ ಪ್ರತಿಬಟನೆಗಳು ನಡೆಯುತ್ತಿವೆ.

ಮಂಡ್ಯದ ಸಂಜಯ್ ವೃತ್ತದಲ್ಲಿ ರೈತರು ಮತ್ತು ಕನ್ನಡ ಪರ ಹೋರಾಟಗಾರರು ಪಾತ್ರೆಗಳನ್ನಿಡಿದು ವಿನೂತನ ಪ್ರತಿಭಟನೆ ನಡೆಸಿದರು. ಹಿರಿಯ ನಾಗರೀಕರೊಬ್ಬರು ಅರೆಬೆತ್ತಲೆಯಾಗಿ ಬಾಯಿ ಬಡಿದುಕೊಂಡು ಕಾವೇರಿ ನಮ್ಮದು, ಅಯ್ಯಯ್ಯೋ ಅನ್ಯಾಯ ಎಂದು ಘೋಷಣೆ ಕೂಗಿದ್ದು ಕಂಡುಬಂತು.

Please follow and like us:

tmadmin

Leave a Reply

Your email address will not be published. Required fields are marked *

Next Post

Aarti Dayal : ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಕಿಂಗ್‌ಪಿನ್ ಆರತಿ ದಯಾಳ್‌ ಬೆಂಗಳೂರಲ್ಲಿ ಅರೆಸ್ಟ್‌; ಎಂಥೆಂಥವರನ್ನೆಲ್ಲ ಮಲಗಿಸಿದ್ದಳು!

Wed Sep 13 , 2023
ಬೆಂಗಳೂರು: ಮಧ್ಯಪ್ರದೇಶದಲ್ಲಿ (Madhyapradesh) ಅನೇಕ ರಾಜಕಾರಣಿಗಳು, ಮಂತ್ರಿಗಳು, ಸಂಸದರು, ಅಧಿಕಾರಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದ, ದೇಶದ ಹೈಪ್ರೊಫೈಲ್‌ ಹನಿಟ್ರ್ಯಾಪ್‌ (Honey trap) ಕಿಂಗ್‌ಪಿನ್‌ ಆರತಿ ದಯಾಳ್‌ (Aarti dayal) ಬೆಂಗಳೂರಿನಲ್ಲಿ ಅರೆಸ್ಟ್‌ ಆಗಿದ್ದಾಳೆ! (Arrested in Bangalore) 2019ರಲ್ಲಿ ಇಡೀ ಮಧ್ಯಪ್ರದೇಶವನ್ನು ನಡುಗಿಸಿದ್ದ, ಭಾರಿ ಚರ್ಚೆಗೆ ಕಾರಣವಾಗಿದ್ದ ಹನಿ ಟ್ರ್ಯಾಪ್‌ ಸುಂದರಿಯನ್ನು ಆಗ ಬಂಧಿಸಲಾಗಿತ್ತು. ಬಳಿಕ 2020ರಲ್ಲಿ ಜಾಮೀನು ಪಡೆದು ನಾಪತ್ತೆಯಾಗಿದ್ದ ಆಕೆ ಎಲ್ಲಿದ್ದಾಳೆ […]

Advertisement

Wordpress Social Share Plugin powered by Ultimatelysocial