ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ‘ಆತ್ಮಹತ್ಯೆ’ಗೆ ಯತ್ನ

ವ್ಯಕ್ತಿಯೊಬ್ಬ ಅನಧಿಕೃತವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಇದರಿಂದ ಆಕ್ರೋಶಗೊಂಡ ಆತ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.ಹೊಸದುರ್ಗ ಪಟ್ಟಣದ ಚಾಮರಾಜಪೇಟೆ ನಿವಾಸಿ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದು, ಈತ ಗುತ್ತಿಗೆ ಆಧಾರಿತ ಪೌರ ಕಾರ್ಮಿಕನಾಗಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ ಆರು ತಿಂಗಳಿಂದ ಸತತವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಈತನಿಗೆ ನೋಟಿಸ್ ನೀಡಿ ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ಹೇಳಲಾಗಿದೆ.ಇದರಿಂದ ಆಕ್ರೋಶಗೊಂಡಿದ್ದ ಆತ ಮಂಗಳವಾರದಂದು ಮದ್ಯ ಸೇವಿಸಿ ಕೈಯಲ್ಲಿ ಪೆಟ್ರೋಲ್ ತುಂಬಿದ ಬಾಟಲಿ ಹಿಡಿದುಕೊಂಡು ಪುರಸಭೆ ಕಚೇರಿಗೆ ಬಂದಿದ್ದಾನೆ. ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ ಆತ ಬಳಿಕ ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಷಕಾಂಶಗಳ ಆಗರ ʼಬಾದಾಮಿʼ ಮಕ್ಕಳಿಗೆ ಕೊಡಿ

Wed Feb 2 , 2022
ಇಂದಿನ ಒತ್ತಡದ ಯುಗದಲ್ಲಿ ಅರೋಗ್ಯದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ ಎಂಬುದು ಬಹುತೇಕರಿಗೆ ಮರೆತೇ ಹೋಗಿರುತ್ತದೆ. ಬಾಯಿಗೆ ರುಚಿಯಾಗುವ ವಸ್ತುಗಳನ್ನು ಸೇವಿಸುವ ಬದಲು ಅರೋಗ್ಯಕ್ಕೆ ಯಾವುದು ಉತ್ತಮವೋ ಅದನ್ನು ತಿನ್ನುವುದು ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಇತ್ತೀಚೆಗೆ ಮಕ್ಕಳು ಸೇವಿಸುವ ಆಹಾರದಲ್ಲಿ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್ ಹಾಗೂ ವಿಟಮಿನ್ ಗಳು ಇರುವುದಿಲ್ಲ. ಮಕ್ಕಳ ಬಾಯಿಗೆ ಇಷ್ಟವಾಗುವ ಕುರುಕುಲು ತಿಂಡಿಗಳ ಜೊತೆ ಹಣ್ಣು ತರಕಾರಿ, ಮಾಂಸ, ಮೊಟ್ಟೆ, ಸೊಪ್ಪು ಹಾಗೂ ಒಣಹಣ್ಣುಗಳನ್ನು […]

Advertisement

Wordpress Social Share Plugin powered by Ultimatelysocial