ಕೆ.ಎಸ್.ಆರ್.ಟಿ.ಸಿ.ಯಿಂದ ಅಪಘಾತ ವಾಸ್ತವತೆ ಪತ್ತೆಗೆ ಕ್ರಮ  

ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಮುಂದಿಟ್ಟುಕೊAಡು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ನ ಮುಂಭಾಗದಲ್ಲಿ ಕೆಮರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಅಪಘಾತದ ಸಮಯದಲ್ಲಿ ವಾಸ್ತವತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಕೆಮರಾ ಸಹಕಾರಿಯಾಗಲಿದೆ. ಕೆಲವೊಮ್ಮೆ ಬಸ್ ಚಾಲಕನ ತಪ್ಪಿಲ್ಲದಿದ್ದರೂ ಅವರೇ ಹೊಣೆಗಾರರಾಗುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ನೈಜ ಘಟನೆ ತಿಳಿಯುವ ನಿಟ್ಟಿನಲ್ಲಿ ಕೆಮರಾ ಸಹಕಾರಿಯಾಗಲಿದೆ. ಈ ಸಂಬAಧ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಪ್ರಧಾನ ಕಚೇರಿಯ ಕೆಲವು ಬಸ್‌ಗಳಿಗೆ ಅಳವಡಿಸಲಾಗುತ್ತದೆ. ಬಳಿಕ ವಿಭಾಗ ಮಟ್ಟದಲ್ಲಿ ಅಳವಡಿಸಲಾಗುವುದು. ಚಾಲಕನ ಸೀಟಿನ ಬಳಿಯಲ್ಲಿ ಇರುವ ಸಣ್ಣ ಕನ್ನಡಿಯೂ ಅಪಘಾತಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಆ ಕನ್ನಡಿ ಯನ್ನು ಬದಲಾಯಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ರಾವಣನದ್ದೇ ಮೊದಲ ವಿಮಾನ 

Mon Jul 20 , 2020
ರಾಮಾಯಣದಲ್ಲಿ ಬರುವ ರಾವಣ, ಭಾರತೀಯರಿಗೆ ರಾಕ್ಷಸನಿರಬಹುದು. ಸೀತೆಯನ್ನು ಕದ್ದೊಯ್ದ ಖಳನಾಯಕನಿರಬಹುದು. ಆದರೆ, ಶ್ರೀಲಂಕಾನ್ನರಿಗೆ ಆತ ಮಹಾನ್ ರಾಜ, ವಿದ್ವಾಂಸ ಹಾಗೂ ವಿಶ್ವದ ಮೊದಲ ವಾಯುಯಾನಿ. ಮೊಟ್ಟಮೊದಲ ಬಾರಿಗೆ ವಿಮಾನದ ಮೂಲಕ ಹಾರಾಟ ನಡೆಸಿದ ರಾಜ ಎಂಬ ಬಲವಾದ ನಂಬಿಕೆ ಅವರದು. ೫ ಸಾವಿರ ವರ್ಷಗಳಷ್ಟು ಹಿಂದೆಯೇ ಆತ ವಿಮಾನದ ಮೂಲಕ ಹಾರಾಟ ನಡೆಸಿದ್ದ ಎಂದು ಪ್ರತಿಪಾದಿಸುವ ಶ್ರೀಲಂಕಾದ ನಾಗರಿಕ ವಿಮಾನ ಯಾನ ಪ್ರಾಧಿಕಾರ, ಪ್ರಾಚೀನ ಕಾಲದಲ್ಲಿಯೇ ಆತ ವಿಮಾನ ಹಾರಿಸಲು ಬಳಸಿದ […]

Advertisement

Wordpress Social Share Plugin powered by Ultimatelysocial