ಕೇವಲ ₹1199 ರೂಗಳಿಗೆ Realme C35 ಫೋನ್

Realme C35: ಭಾರತದಲ್ಲಿ ಕಡಿಮೆ ಬೆಲೆಯ ಬಜೆಟ್ ಸ್ಮಾರ್ಟ್ಫೋನ್ಗಳು ಅತಿ ಹೆಚ್ಚಾಗಿ ಜನಪ್ರಿಯ ಮತ್ತು ಮಾರಾಟವಾಗುವ ಶ್ರೇಣಿಯಾಗಿದೆ. ಈ ಮೂಲಕ ನಿಮ್ಮ ಬಜೆಟ್ ಸುಮಾರು 10,000 ಮತ್ತು 12,000 ರೂಪಾಯಿಗಳ ನಡುವೆಯಿದ್ದು ನೀವು ಹೊಸ ಸ್ಮಾರ್ಟ್ಫೋನ್ಗಾಗಿ ಹುಡುಕುತ್ತಿದ್ದರೆ ನಿಮಗೊಂದು ಅತ್ಯುತ್ತಮವಾದ ಆಯ್ಕೆ ಇಲ್ಲಿದೆ ನೋಡಿ.

ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ Realme C35 ಭಾರಿ ರಿಯಾಯಿತಿಯಲ್ಲಿ ಸಿಗಲಿದೆ. ಹೌದು ಬ್ಯಾಂಕ್ ಆಫರ್ಗಳು ಮತ್ತು ಎಕ್ಸ್ಚೇಂಜ್ ಆಫರ್ಗಳನ್ನು ಬಳಸಿಕೊಂಡು ನೀವು ಈ ಫೋನ್ ಅನ್ನು ಕಡಿಮೆ ವೆಚ್ಚದಲ್ಲಿ ಕೇವಲ ₹1199 ರೂಗಳಿಗೆ ಖರೀದಿಸಬಹುದು.

Realme C35 ಆಫರ್ಗಳು

ರಿಯಲ್ಮಿ ಸ್ಮಾರ್ಟ್ಫೋನ್ ಇದರ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆ ಸಾಮಾನ್ಯವಾಗಿ 13,999 ರೂಗಳಾಗಿದೆ. ಆದರೆ ಇದರ ಮೇಲೆ 14% ಪ್ರತಿಶತ ರಿಯಾಯಿತಿಯ ನಂತರ ಇದು 11,999 ರೂಗಳಿಗೆ ಲಭ್ಯವಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಈ ಫೋನ್ ಬಿಡುಗಡೆಯಾಗಿತ್ತು. ಕೆಲವು ಬ್ಯಾಂಕ್ ಆಫರ್ಗಳೊಂದಿಗೆ HDFC ಬ್ಯಾಂಕ್ ಅಥವಾ SBI ಬ್ಯಾಂಕ್ನಿಂದ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸುವಾಗ ನೀವು ರೂ 1000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಹೆಚ್ಚುವರಿಯಾಗಿ ಖರೀದಿ ಮಾಡಲು ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸುವಾಗ 5% ಕ್ಯಾಶ್ಬ್ಯಾಕ್ ಸಹ ಲಭ್ಯವಿದೆ.

Realme C35 ಎಕ್ಸ್ಚೇಂಜ್ ಆಫರ್

ಅಲ್ಲದೆ ಇದರ ಎಕ್ಸ್ಚೇಂಜ್ ಆಫರ್ ಪ್ರಕಾರ ಹಳೆಯ ಅಥವಾ ಅಸ್ತಿತ್ವದಲ್ಲಿರುವ ಫೋನ್ ಅನ್ನು ನೀಡಿದರೆ ಬೆಲೆಯು 10,800 ರೂ.ವರೆಗೆ ಕಡಿಮೆಯಾಗಬಹುದು. ಆದರೆ ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಲಾಭವನ್ನು ನೀವು ಪಡೆಯಬೇಕಾದರೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಫೋನ್ನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಎಕ್ಸ್ಚೇಂಜ್ ಆಫರ್ ಸ್ವೀಕರಿಸಿದರೆ ಬೆಲೆ ರೂ 1,199 ಗೆ ಹೆಚ್ಚಾಗಬಹುದು.

Realme C35 ಫೀಚರ್ ಮತ್ತು ಸ್ಪೆಸಿಫಿಕೇಷನ್ಸ್

ಈ Realme C35 ಸ್ಮಾರ್ಟ್ಫೋನ್ 6.6 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದ್ದು 4GB RAM ಮತ್ತು 64GB ಸ್ಟೋರೇಜ್ ನೊಂದಿಗೆ ಬರುತ್ತದೆ. ಇದನ್ನು ಮೈಕ್ರೋ SD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. ಅಷ್ಟೇ ಅಲ್ಲದೆ ಈ ಫೋನ್ ಆಕ್ಟಾ-ಕೋರ್ ಪ್ರೊಸೆಸರ್ ಹಾಗೂ Unisoc T616 ಅನ್ನು ಹೊಂದಿದೆ. Realme C35 f/1.8 ಅಪೆರ್ಚರ್, 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು f/2.4 ಅಪೆರ್ಚರ್ ಮತ್ತು 0.3-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು f/2.8 ಅಪೆರ್ಚರ್ನೊಂದಿಗೆ ಕ್ಯಾಮೆರಾ ಫೀಚರ್ಗಳನ್ನು ಒಳಗೊಂಡಿದೆ. Realme C35 ಮುಂಭಾಗದಲ್ಲಿ f/2.0 ಅಪೆರ್ಚರ್ನೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಸೇರಿಸಲಾಗಿದೆ.

Realme C35 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 11 ಆಧಾರಿತ ಆಪರೇಟಿಂಗ್ ಸಿಸ್ಟಮ್ Realme UI 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಸಂಪರ್ಕಕ್ಕಾಗಿ 3.5mm ಹೆಡ್ಫೋನ್ ಜ್ಯಾಕ್, USB ಟೈಪ್-C, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ V5.0, GPS/A-GPS ಮತ್ತು 4G LTE ಅನ್ನು ಹೊಂದಿದೆRealme C35ಹೆಚ್ಚಿನ ಸುರಕ್ಷತೆಗಾಗಿ ಈ ಫೋನ್ ನಲ್ಲಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಸಂಯೋಜಿಸಲಾಗಿದೆ. ಬ್ಯಾಟರಿಯ ಬಗ್ಗೆ ಹೇಳುವುದಾದರೆ ಈ Realme ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಯಾಣ ಕರ್ನಾಟಕ ಪಿಂಚಣಿದಾರರಿಗೆ ಗುಡ್ ನ್ಯೂಸ್

Tue Feb 21 , 2023
    ಬೆಂಗಳೂರು: ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು, ಹೊಸಪೇಟೆ(ವಿಜಯನಗರ) ಮತ್ತು ಕೊಪ್ಪಳ ಜಿಲ್ಲೆಗಳಿಗೆ ಒಳಗೊಂಡಂತೆ ಪಿಂಚಣಿದಾರರ ಕುಂದುಕೊರತೆ ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇದೇ ಫೆಬ್ರವರಿ 22 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಂಚಣಿ ಅದಾಲತ್‍ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯ ಪಿಂಚಣಿದಾರರು ನೇರವಾಗಿ ಕಲಬುರಗಿ […]

Advertisement

Wordpress Social Share Plugin powered by Ultimatelysocial