ಕವಾಸಕಿ ಅಧಿಕೃತ ವೆಬ್‌ಸೈಟ್‌ನಲ್ಲಿ W800 ಕಣ್ಮರೆ… ಬಂದಷ್ಟೇ ವೇಗವಾಗಿ ಭಾರತವನ್ನು ತೊರೆಯಿತೇ?

ನಪ್ರಿಯ ದ್ವಿಚಕ್ರ ವಾಹನ ತಯಾರಕ ಕವಾಸಕಿ ಭಾರತದಲ್ಲಿ ಮಾರಾಟ ಮಾಡುತ್ತಿರುವ ಪ್ರಮುಖ ಮಾದರಿಗಳಲ್ಲಿ W800 ಕೂಡ ಒಂದಾಗಿದೆ. ಈ ಬೈಕ್ ಅನ್ನು ಭಾರತದಿಂದ ತೆಗೆದುಹಾಕಲಾಗಿದೆ ಎಂಬ ವರದಿಗಳು ಈಗ ಹೆಚ್ಚಾಗುತ್ತಿವೆ. ಕಂಪನಿ ಕೂಡ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಬೈಕ್‌ನ ಎಲ್ಲಾ ವಿವರಗಳನ್ನು ತೆಗೆದುಹಾಕಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಸದ್ಯ ಬೈಕ್ ಕುರಿತ ಯಾವುದೇ ಮಾಹಿತಯನ್ನು ಕವಾಸಕಿ ಅಧಿಕೃತ ವೆಬ್‌ ತಾಣದಲ್ಲಿ ಲಭ್ಯವಿಲ್ಲ. ಈ ಮೋಟಾರ್‌ ಸೈಕಲ್ ಕುರಿತು ಆಟೋ ವಲಯದಲ್ಲಿ ಹಲವು ಊಹಾ ಪೋಹಗಳು ಹರಿದಾಡುತ್ತಿವೆ. ಕವಾಸಕಿ W800 ಮೋಟಾರ್‌ ಸೈಕಲ್ ಬೆಲೆ ದುಬಾರಿಯಾಗಿರುವುದರಿಂದ ಬೈಕ್ ಮಾರಾಟ ಕೂಡ ತುಂಬಾ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದು, ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯೆತೆ ಇದೆ ಎಂದು ಹೇಳಲಾಗುತ್ತಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ರಾಯಲ್ ಎನ್‌ಫೀಲ್ಡ್‌ನ ರೆಟ್ರೊ ಕ್ಲಾಸಿಕ್ ಮೋಟಾರ್‌ಸೈಕಲ್‌ಗೆ ಪೈಪೋಟಿ ನೀಡಲು ಕವಾಸಕಿ ಈ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ ಅನ್ನು 2021 ರಲ್ಲಿ ಬಿಡುಗಡೆ ಮಾಡಲಾಯಿತು. ಕವಾಸಕಿ ಎರಡು ವರ್ಷಗಳನ್ನು ಪೂರೈಸದ ನಂತರ W 800 ಬೈಕ್ ಅನ್ನು ಮಾರಾಟದಿಂದ ಹಿಂಪಡೆದಿದೆ. ಇದೀಗ ಸ್ಥಗಿತಗೊಳಿಸಿರುವುದು ಕೂಡ ತಾತ್ಕಾಲಿಕ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಬೈಕ್ ಅತಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಲಭ್ಯವಾಗುವ ನಿರೀಕ್ಷೆ ಕೂಡ ಇದೆ.

BS6 ಹಂತ ಎರಡು ಮತ್ತು OPT2 ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ. ಈ ಹೊಸ ಹೊರಸೂಸುವಿಕೆ ನಿಯಮಗಳಿಂದಾಗಿ ಈ ಬೈಕಿನ ಎಕ್ಸಾಸ್ಟ್ ಬದಲಾವಣೆ ಕೂಡ ಮಾಡಬಹುದು ಎಂದು ಊಹಿಸಲಾಗಿದೆ. ಹೊಸ ಎಮಿಷನ್ ನಿಯಮಗಳಿಂದಾಗಿ ವಾಹನ ತಯಾರಕರು ತಮ್ಮ ವಾಹನಗಳನ್ನು ನವೀಕರಿಸುತ್ತಿದ್ದಾರೆ. W800 ಕೂಡ ಅಂತಹ ನವೀಕರಣಕ್ಕೆ ಸಿದ್ಧವಾಗಿದೆ ಎಂದು ವರದಿಗಳು ಸೂಚಿಸುತ್ತಿವೆ. ಆದ್ದರಿಂದ, ಇದು (W800) ನವೀಕರಣದೊಂದಿಗೆ ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದು ಮತ್ತೆ ಮಾರಾಟಕ್ಕೆ ಬಂದರೆ ರಾಯಲ್ ಎನ್‌ಫೀಲ್ಡ್ ಉತ್ಪನ್ನಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ. ಸದ್ಯದ ಮಟ್ಟಿಗೆ W800 ಬೈಕ್‌ಗೆ ನಿರೀಕ್ಷಿಸಿದಷ್ಟು ಸ್ವಾಗತ ಭಾರತೀಯ ಮಾರುಕಟ್ಟೆಯಲ್ಲಿ ಸಿಕ್ಕಿಲ್ಲದಿರುವುದು ವಿಪರ್ಯಾಸ. ಈ ಬೈಕ್ ಸರಿಯಾದ ಮಾರಾಟವನ್ನು ಗಳಿಸುತ್ತಿಲ್ಲ ಎಂದು ಹೆಳಲಾಗುತ್ತಿದೆ. ಆದ್ದರಿಂದ ಇದು ಬೈಕ್‌ನ ಶಾಶ್ವತ ವಿಸರ್ಜನೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಕವಾಸಕಿ ಕಂಪನಿ ಮಾತ್ರ W800 ಬೈಕ್ ಅನ್ನು ಸ್ಥಗಿತಗೊಳಿಸುವುದರ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.

ಕವಾಸಕಿ W 800 ಭಾರತದಲ್ಲಿ ಮಾರಾಟಕ್ಕೆ ನೀಡಲಾಗುವ ಸೂಪರ್ ಬೈಕ್ ಮಾದರಿಗಳಲ್ಲಿ ಒಂದಾಗಿದೆ. ಈ ಬೈಕಿನ ಸಾಂಪ್ರದಾಯಿಕ ನೋಟವು ವೃತ್ತಾಕಾರದ ಹೆಡ್‌ಲೈಟ್ ಅನ್ನು ಒಳಗೊಂಡಿದ್ದು, ಕ್ಲಾಸಿಕ್ ಲುಕ್‌ನಲ್ಲಿ ಆಕರ್ಷಣಿಯವಾಗಿ ಕಾಣುತ್ತದೆ. ಹಾಗೆಯೇ ಇದರ ಪೆಟ್ರೋಲ್ ಟ್ಯಾಂಕ್ ರಚನೆ, ಸೀಟ್, ಡ್ಯುಯಲ್ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್, ಮಡ್‌ಗಾರ್ಡ್, ಸೈಲೆನ್ಸರ್ ಮತ್ತು ಸ್ಪೋಕ್ಸ್ ವೀಲ್ ಅನ್ನು ಸಹ ಸಾಂಪ್ರದಾಯಿಕ ರೆಟ್ರೊ ನೋಟವನ್ನು ಹೊರತರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ಬೈಕ್ ಹಲವು ಆಧುನಿಕ ತಾಂತ್ರಿಕ ವಿಶೇಷತೆಗಳನ್ನು ಸಹ ಹೊಂದಿದೆ. ಪ್ರಸ್ತುತ ಪೀಳಿಗೆಗೆ ಅನುಗುಣವಾಗಿ ಡಿಸ್ಕ್ ಬ್ರೇಕ್ ಮತ್ತು ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅಳವಡಿಸಲಾಗಿದೆ. ಈ ಬೈಕಿನ ಬೆಲೆ 7 ಲಕ್ಷ ರೂಪಾಯಿಗೂ ಹೆಚ್ಚು. ಹೆಚ್ಚು ಹೆಚ್ಚು ಭಾರತೀಯರು ಈ ಬೈಕಿನತ್ತ ಒಲವು ತೋರದಿರಲು ಇದೂ ಒಂದು ಪ್ರಮುಖ ಕಾರಣವಾಗಿದೆ. ಯುವಕರು ಮತ್ತು ಮಧ್ಯವಯಸ್ಸಿನ ಎಲ್ಲ ವರ್ಗದವರಿಗೂ ಇಷ್ಟವಾಗುವಂತೆ ಈ ಬೈಕ್ ಅನ್ನು ತಯಾರಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ.

Wed Mar 1 , 2023
  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದರು. ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಎಚ್ ಎಂ ರೇವಣ್ಣ, ಮುಖಂಡರಾದ ಜವರೇಗೌಡ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial