ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು,

ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಪಂಜ್​ಶೀರ್(ಅಫ್ಘಾನಿಸ್ತಾನ):ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಪಡೆಗಳಿಗೆ ಸೆಡ್ಡು ಹೊಡೆದು ನಿಂತಿದ್ದ ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಮೂಲಗಳ ಪ್ರಕಾರ, ಪ್ರಾಂತ್ಯದಲ್ಲಿ ಫೆಬ್ರವರಿ 7ರಿಂದ ಈ ಪ್ರದೇಶದಲ್ಲಿ ಸ್ಥಳೀಯರು ಮತ್ತು ತಾಲಿಬಾನ್ ನಡುವೆ ಘರ್ಷಣೆ ನಡೆಯುತ್ತಿದೆ. ತಾಲಿಬಾನಿಗಳ ವಾಹನವನ್ನು ಬಾಂಬ್ ಸ್ಫೋಟಿಸಿ ಹಾನಿಗೊಳಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ.ಪಂಜ್​ಶೀರ್ ಈಗಲೂ ತಾಲಿಬಾನಿಗಳಿಗೆ ಸವಾಲೆಸೆಯುತ್ತಿದ್ದು, ಆ ಪ್ರಾಂತ್ಯವನ್ನು ತನ್ನದಾಗಿಸಿಕೊಳ್ಳಲು ತಾಲಿಬಾನಿ ಪಡೆಗಳು ಹರಸಾಹಸ ನಡೆಸುತ್ತಿವೆ. ಕಳೆದ ವರ್ಷ ಆಗಸ್ಟ್​ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ.ವಿದೇಶಿ ನೆರವು ಸಿಗದ ಕಾರಣ, ಬೇರೆ ರಾಷ್ಟ್ರಗಳಲ್ಲಿರುವ ಆಫ್ಘನ್​ ಹಣವನ್ನು ಪಡೆಯಲು ನಿರ್ಬಂಧಿಸಿರುವುದು ಮತ್ತು ತಾಲಿಬಾನ್ ಮೇಲಿನ ಅಂತರರಾಷ್ಟ್ರೀಯ ನಿರ್ಬಂಧಗಳ ಕಾರಣದಿಂದಾಗಿ ಅಫ್ಘಾನಿಸ್ತಾನವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮಿಳುನಾಡಿಗೆ ಮೇಕೆದಾಟು ಯೋಜನೆ ವಿರೋಧಿಸುವ ಹಕ್ಕು ಇಲ್ಲ: ಎಚ್‌ಡಿ ದೇವೇಗೌಡ

Wed Feb 9 , 2022
ಬೆಂಗಳೂರು, ಫೆಬ್ರವರಿ 9: ಮೇಕೆದಾಟು ಯೋಜನೆ ವಿರೋಧಿಸುವ ಹಕ್ಕು ತಮಿಳುನಾಡಿಗೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ನದಿ ನೀರನ್ನು ಡೆಲ್ಟಾ ಪ್ರದೇಶಕ್ಕೆ ಮೀಸಲಿಟ್ಟಿದ್ದರೂ, 2007ರ ಕಾವೇರಿ ಜಲ ನ್ಯಾಯಮಂಡಳಿ ತೀರ್ಪಿಗೆ ವಿರುದ್ಧವಾದ ತಮಿಳುನಾಡು ಹೊಸ ಶುಷ್ಕ ವಲಯಗಳಿಗೆ ಹರಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ರಾಜ್ಯದ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು. ಕುಡಿಯುವ […]

Advertisement

Wordpress Social Share Plugin powered by Ultimatelysocial