ಪಾಟೀಲ ಪುಟ್ಟಪ್ಪನವರು ಕನ್ನಡ ಸಂಸ್ಕೃತಿಯ ಮಹತ್ವದ ಪ್ರಚಾರಕರಾಗಿ ಪ್ರಸಿದ್ಧರಾಗಿದ್ದವರು.

ಶತಾಯುಷಿಗಳಾಗಿದ್ದ ದಿವಂಗತ ಪಾಟೀಲ ಪುಟ್ಟಪ್ಪನವರು ಸಾಹಿತಿಗಳಾಗಿ, ಹೋರಾಟಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ ಮಹತ್ವದ ಪ್ರಚಾರಕರಾಗಿ ಪ್ರಸಿದ್ಧರಾಗಿದ್ದವರು. ಅವರಿಗೆ 101 ವರ್ಷ ವಯಸ್ಸಾಗಿದ್ದಾಗಲೂ ಕನ್ನಡದ ಕುರಿತಾದ ಅವರ ಆತ್ಮೀಯ ಕಾಳಜಿಗಳು ಅವರನ್ನು ‘ಪಾಪು’ವೆಂದು ಪ್ರೀತಿಯಿಂದ ಆರಾಧಿಸುವಂತೆ ಮಾಡುತ್ತಿತ್ತು. ಅವರ ಮಾತನ್ನೊಮ್ಮೆ ಕೇಳಿಬಿಟ್ಟರೆ ಸಾಕು ನಾವು ಸ್ವಾಭಾವಿಕವಾಗಿ ಕನ್ನಡದ ಬಗ್ಗೆ ಪ್ರೀತಿಯನ್ನು ಗಳಿಸಿಕೊಂಡುಬಿಡುವಂತಿತ್ತು. ನಾಲ್ಕು ವರ್ಷದ ಹಿಂದೆ ಕಸಾಪದ ಅಧ್ಯಕ್ಷರು ನನ್ನ ಪರಿಚಯ ಮಾಡಿಕೊಟ್ಟಾಗ ಮೂಲ ಊರು ಕೇಳಿದರು, ಮತ್ತು ತಾವು ಕರ್ನಾಟಕದ ಎಲ್ಲ ಗ್ರಾಮಗಳಲ್ಲೂ ಅಲೆದಿದ್ದೇನೆ ಎಂದರು. ಅವರ ಕನ್ನಡ ನಾಡಿನ ಇಂಚಿಂಚಿನ ಅನುಭವವೂ ನೇರ ಪಡೆದದ್ದು.
ಕನ್ನಡದ ಬಗ್ಗೆ ಹೇಳುವಾಗ ಪಾಪು ಅವರಲ್ಲಿ ಮಗುವಿನ ಬಗೆಗಿನ ಪ್ರೀತಿಯಿತ್ತು. ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ, ಕನ್ನಡದ ಕುರಿತಾದ ಯಾವುದೇ ಅಸಡ್ಡೆಯ ವಿರುದ್ಧದ ಚಡಿಯೇಟು, ಅನನ್ಯ ಸಂಘಟನಾ ಶಕ್ತಿ ಇವೆಲ್ಲಾ ಒಟ್ಟೊಟ್ಟಿಗೆ ಒಂದುಗೂಡಿದ ಹಾಗೆ ಅವರಲ್ಲಿ ಕೆಲಸ ಮಾಡುತ್ತಿತ್ತು. ಸಾಂಸ್ಕೃತಿಕ ವೇದಿಕೆಗಳಲ್ಲಿ, ಪತ್ರಿಕಾರಂಗದಲ್ಲಿ, ವಿಧಾನಸಭೆಯಲ್ಲಿ, ಕನ್ನಡದ ಬಗೆಗಿನ ಹೋರಾಟಗಳಲ್ಲಿ ಹೀಗೆ ಒಟ್ಟಾರೆ ಕನ್ನಡ ಡಿಂಡಿಮವನ್ನು ಅವರಂತೆ ಎಲ್ಲೆಡೆ ಮೊಳಗಿದ ವ್ಯಕ್ತಿ ಇನ್ನೊಬ್ಬರಿಲ್ಲ. ಆದರೆ ಇವೆಲ್ಲವೂ ಕನ್ನಡದ ಅಂತರಾಳದಲ್ಲಿ ಪ್ರೀತಿಯ ಪಾಕವಾಗಿ ಮೊಳೆತು ಸೊಬಗಿನ ಹೊಂಗಿರಣವಾಗಿ ಅರಳಿತೇ ವಿನಃ ವ್ಯರ್ಥಪ್ರಲಾಪದ ಡಂಭಾಚಾರವಾಗಿ ಎಂದೂ ಮೂಡಲಿಲ್ಲ.
1989ರ ಆಗಸ್ಟ್ ತಿಂಗಳು 6ನೆ ತಾರೀಖು ಸಂಚಿಕೆಯಲ್ಲಿ ಮಹಾರಾಷ್ಟ್ರದ ಅಗ್ರಪಂಕ್ತಿಯ ಮರಾಠಿ ದೈನಿಕ ‘ಲೋಕಸತ್ತಾ’ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆಯಿತು…..” ಮರಾಠಿ ಮಾತೆಯೂ ಸಹ ಇಂದು ಮರಾಠಿ ಪುಟ್ಟಪ್ಪನ ಅವತಾರದ ಮಾರ್ಗ ನಿರೀಕ್ಷಿಸುತ್ತಿದ್ದಾಳೆ”. ಪಕ್ಕದ ಮರಾಠಿ ಜನ ಸಹ ತಮ್ಮೊಳಗೊಬ್ಬ ಕನ್ನಡ, ಕನ್ನಡಿಗ ಕರ್ನಾಟಕ ತತ್ವಕ್ಕಾಗಿ ಹೋರಾಡುವ ಡಾ. ಪಾಟೀಲ ಪುಟ್ಟಪ್ಪನವರಂತಹ ನಾಯಕ ಮಹಾರಾಷ್ಟ್ರದಲ್ಲಿ ಮರಾಠಿಗರಾಗಿ ಜನ್ಮವೆತ್ತಬಾರದೆ ಎಂದು ಹಂಬಲಿಸುವಷ್ಟರ ಮಟ್ಟಿಗೆ ಡಾ. ಪಾಟೀಲ ಪುಟ್ಟಪ್ಪ ಹೆಸರುವಾಸಿ.
ಕೆಲವು ವರ್ಷದ ಹಿಂದೆ ಅವರು ಒಂದು ಮಾತು ಹೇಳಿದ್ದರು. ಕನ್ನಡಕ್ಕಿಂತ ಮುಖ್ಯಮಂತ್ರಿ ದೊಡ್ದವರೇನಲ್ಲ. ಅದು ಇನ್ನಾರಾದರೂ ಹೇಳಿದ್ದರೆ ರಾಜಕೀಯದ ಹೇಳಿಕೆ ಎನಿಸುತ್ತಿತ್ತೇನೊ. ಆದರೆ ಪಾಪು ಅವರು ಹೇಳಿದರೆ ಅಲ್ಲೊಂದು ಘನತೆ ಇತ್ತು. ಮುಖ್ಯಮಂತ್ರಿ ಓಡಿಹೋಗಿ ಅವರ ಬಳಿ ಕುಳಿತು ಅಸಮಾಧಾನಕ್ಕೆ ಕಾರಣ ಕೇಳುವಂತೆ ವಾತಾವರಣ ನಿರ್ಮಾಣವಾಗುತ್ತಿತ್ತು. ಅದು ಪಾಟೀಲ ಪುಟ್ಟಪ್ಪನವರ ಶಕ್ತಿ.
“ನೀವು ಸ್ಪೀಕರ್ ಎಂದು ನಿಮ್ಮ ಸ್ಥಾನ ದೊಡ್ಡದು, ಅದು ನಿಸ್ಸಂದೇಹ. ಸದನದ ಸಭೆಯಲ್ಲಿ ನಿಮಗಿಂತ ಹೆಚ್ಚಿನವರು ಯಾರೂ ಇಲ್ಲ. ಆದರೆ ಸಭೆಯ ಒಳಗೆ ಮತ್ತು ಹೊರಗೆ ನೀವು ಕೂಡ ಒಬ್ಬ ಕನ್ನಡಿಗರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಿಮ ಏಕದಿನದಲ್ಲೂ ಪಾಕಿಸ್ತಾನಕ್ಕೆ ಸೋಲು.

Sat Jan 14 , 2023
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಪಾಕಿಸ್ತಾನ ಸೋಲು ಅನುಭವಿಸಿದೆ. ಈ ಮೂಲಕ ತವರಿನಲ್ಲಿ ಪಾಕ್ ಪಡೆ ಮತ್ತೊಂದು ಮುಖಭಂಗಕ್ಕೆ ಒಳಗಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪ್ರವಾಸಿ ನ್ಯೂಜಿಲೆಂಡ್ 2-1 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ ಅಜಂ ತಂಡ ಅಗತ್ಯವಿರುವಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದುವೇ ಸೋಲಿಗ ಕಾರಣವಾಯಿತು ಎಂದಿದ್ದಾರೆ. ಪಾಕಿಸ್ತಾನ ತಂಡ […]

Advertisement

Wordpress Social Share Plugin powered by Ultimatelysocial