ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ

ಜಿಲ್ಲಾಧಿಕಾರಿ ನಕುಲ್ ಅವರು ನೀಡಿರುವ ಮಾಹಿತಿ ಪ್ರಕಾರ ಬಳ್ಳಾರಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ 1019 ಸೋಂಕಿತ ಪ್ರಕರಣಗಳು ದಾಖಲಾಗಿವೆ, ಸಾವಿನ ಪ್ರಮಾಣವೂ ಹೆಚ್ಚಿದೆ. ಜನರಲ್ಲಿ ಆತಂಕ ಶುರುವಾಗಿದೆ ಆದರಿಂದ್ದ ಇದಕ್ಕೆ ಬ್ರೇಕ್ ಹಾಕಲು ಜನರೇ ಮುಂದೆ ಬಂದಿದ್ದು, ಇಂದಿನಿಂದ ಬಳ್ಳಾರಿಯಲ್ಲಿ ಒಂದು ವಾರಗಳ ಕಾಲ ಮಧ್ಯಾಹ್ನ ಮೂರು ಗಂಟೆ ನಂತರ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಜನರು ಮಾಸ್ಕ್ ಹಾಕದೆ, ಅನಗತ್ಯ ಓಡಾಡುತ್ತಿದ್ದಾರೆ. ಹೀಗಾಗಿ ಬಳ್ಳಾರಿ ನಗರದ ವ್ಯಾಪಾರಸ್ಥರು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದು, ಇಂದಿನಿಂದ ಒಂದು ವಾರದವರೆಗೆ ಮೆಡಿಕಲ್ಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಂಜಾನೆ ಏಳು ಗಂಟೆಗಳಿಂದ ಮಧ್ಯಾಹ್ನ ಮೂರು ಗಂಟೆವರೆಗೆ ಮಾತ್ರ ತೆರೆಯಲು ಮುಂದಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ

Fri Jul 3 , 2020
ಬೀದರ್ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಬೀದರ್ ಜಿಲ್ಲೆಯಲ್ಲಿ ಹೊಸದಾಗಿ 32 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆಯಾಗಿದೆ,  ಔರಾದ್ -14, ಬೀದರ್-11, ಬಸವಕಲ್ಯಾಣ-02, ಭಾಲ್ಕಿ-04,  ಕಮಲನಗರದಲ್ಲಿ 01 ಪ್ರಕರಣ ಸೇರಿದಂತೆ 32 ಜನರಲ್ಲಿ ಸೋಂಕು ದೃಢವಾಗಿದೆ. ಜಿಲ್ಲಾಡಳಿತ ಈವರೆಗೆ 38,989 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು,  36,436 ವರದಿ ನೆಗೆಟಿವ್ ಬಂದಿದೆ, ಉಳಿದವರ ಪರೀಕ್ಷೇಯ ವರದಿ ಬಾಕಿ ಇದೆ. 21 […]

Advertisement

Wordpress Social Share Plugin powered by Ultimatelysocial