ಎಂಇಎಸ್ ಸಂಘಟನೆ ವಿರುದ್ಧ ಬೃಹತ್ ರ‍್ಯಾಲಿ ಮಾಡಿದ ರಾಯಣ್ಣ ಅಭಿಮಾನಿಗಳು

ಹುಬ್ಬಳ್ಳಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಸಿದ್ದ ಎಂಇಎಸ್ ಪುಂಡರ ಕೃತ್ಯ ವಿರೋಧಿಸಿ ಇಂದು ಹುಬ್ಬಳ್ಳಿಯ ದುರ್ಗದ ಬೈಲ್‌ ಸರ್ಕಲ್ ನಿಂದ ಮಿನಿ ವಿಧಾನ ಸೌಧದವರೆಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗ ಬೃಹತ್ ಪ್ರತಿಭಟನೆ ಮಾಡಿದೆ.ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕದ ಧ್ವಜವನ್ನು ಸುಟ್ಟು ಹಾಕಿದ ಪುಂಡರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು.ಎಂಇಎಸ್ ಹಾಗೂ ಶಿವಸೇನಾ ಪಕ್ಷವನ್ನು ಬ್ಯಾನ್‌ ಮಾಡಬೇಕು ಅಂತಲೇ ರಾಯಣ್ಣನ ಅಭಿಮಾನಿಗಳು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಗೂಂಡಾಕಾಯ್ದೆಯಡಿ ಶಿಕ್ಷೆ ಕೊಡಬೇಕು ಉಗ್ರ ಶಿಕ್ಷೆಯನ್ನು ನೀಡಬೇಕು.ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟು ಹಾಕಿ ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಕನ್ನಡ ಧ್ವಜವನ್ನು ಕನ್ನಡಿಗರು ತಾಯಿಯ ಸ್ಥಾನದಲ್ಲಿ ಇಟ್ಟು ಗೌರವಿಸುತ್ತೇವೆ,ಕರ್ನಾಟಕ ಸರ್ಕಾರ ಎಂದು ನಾಡು-ನುಡಿ ಗಡಿ ಕನ್ನಡ, ಕನ್ನಡಪರ ಹೋರಾಟಗಾರರ ಪರವಾಗಿ ಇದೆ ಎಂದು ತೋರಿಸಲು ಉಗ್ರ ಕಾನೂನು ಕ್ರಮವನ್ನು ಜರುಗಿಸಬೇಕು, ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಆಗ್ರಹಿಸುತ್ತದೆ…

ಒಂದು ವೇಳೆ ಸರಕಾರ ಕನ್ನಡ ನಾಡು-ನುಡಿ ಗಡಿ ಹಾಗೂ ಕನ್ನಡ ನಾಡಿನ ಸ್ವತಂತ್ರ ಹೋರಾಟಗಾರರುನ್ನು ಅವಮಾನಿಸಿದ ವರಿಗೆ ಶಿಕ್ಷೆಯನ್ನು ಕೊಡದೇ ಹೋದಲ್ಲಿ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆ.ಯಾವುದೇ ರೀತಿ ಅನಾಹುತಗಳಿಗೆ ಅವಕಾಶ ಮಾಡಿಕೊಡದೆ ರಾಯಣ್ಣನವರ ಪ್ರತಿಮೆಯನ್ನು ಹೊಡೆದು ಹಾಕಿದವರ ಮೇಲೆ ಹಾಗೂ ನಾಡು ಧ್ವಜವನ್ನು ಸುಟ್ಟು ಹಾಕಿದ ಎಂಇಎಸ್ ಹಾಗೂ ಶಿವಸೇನೆಯನ್ನು ಕರ್ನಾಟಕದಿಂದ ನಿಷೇಧಿಸಿ ಅಂತವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರು ಸುರೇಶ್ ಗೋಕಾಕ್ ತಿಳಿಸಿದರು……

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸುವ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಪ್ರತಿಭಟನೆ

Mon Dec 20 , 2021
ಅಖಿಲ ಕರ್ನಾಟಕ ಕುರುಬ ಮಹಾಸಭಾವತಿಯಿಂದ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸುವ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ….ಗುಂಡ್ಲುಪೇಟೆ ತಾಲೂಕು ವತಿಯಿಂದ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸುವ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಹಾಗೂ ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ…ಹಾಲುಮತ ಕುರುಬ ಜನಾಂಗದ ಎಲ್ಲಾ ಗ್ರಾಮದ ಪರವಾಗಿ ಇಂದು ತಾಲೂಕು ಕಚೇರಿಗೆ ತೆರಳಿ ಉಪತಹಸೀಲ್ದಾರ್ ಮಹೇಶ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು….ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುರುಬ ಮಹಾಸಭಾ ರಾಜ್ಯ […]

Advertisement

Wordpress Social Share Plugin powered by Ultimatelysocial