ಕ್ಯಾಬ್ ಡ್ರೈವರ್‌ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ? ಸಂಜನಾ ಗಲ್ರಾನಿ ..!

ಓಲಾ ಕ್ಯಾಬ್ ಡ್ರೈವರ್‌ಗಳ ಬಗ್ಗೆ ದೂರುಗಳು ಬರುವುದು ಹೊಸದೇನೂ ಅಲ್ಲ. ಬೆಂಗಳೂರಿನಲ್ಲಿ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಓಲಾ ಕ್ಯಾಬ್ ಗ್ರಾಹಕರು ಡ್ರೈವರ್‌ಗಳ ಮೇಲೆ ದೂರು ನೀಡುತ್ತಲೇ ಇರುತ್ತಾರೆ. ಸಂಜನಾ ಗಲ್ರಾನಿ ಇಂದು ಬೆಳಿಗ್ಗೆ ಕ್ಯಾಬ್ ಡ್ರೈವರ್ ಒಬ್ಬ ಕಿರುಕುಳ ನೀಡಿದ್ದಾಗಿ  ಘಟನೆ ಬಗ್ಗೆ ಕ್ಯಾಬ್ ಸೇವೆ ಒದಗಿಸುವ ಓಲಾ ಸಂಸ್ಥೆಗೆ ದೂರು ನೀಡಿದ್ದಾರೆ.

”ನಾವು ನಾಲ್ಕು ಮಂದಿ ಕಾರಿನಲ್ಲಿದ್ದೆವು ಏಸಿ ಏರಿಸುವಂತೆ ಮನವಿ ಮಾಡಿದರೂ” ಆತ ನಮ್ಮ ಮನವಿ ಕೇಳಿಸಿಕೊಳ್ಳದೆ  ಇದಕ್ಕಿಂತಲೂ ಹೆಚ್ಚು ಮಾಡಲು ಸಾಧ್ಯವಿಲ್ಲವೆಂದು, ಹೆಚ್ಚು ಒತ್ತಾಯ ಮಾಡಿದರೆ ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಆತ ಮಧ್ಯದಲ್ಲಿಯೇ ನನ್ನನ್ನು ಇಳಿಸಿ ಹೋದರೆ ಏನು ಮಾಡಬಹುದೆಂಬ ಭಯದಲ್ಲಿ ಕಷ್ಟದಲ್ಲಿಯೇ ಪ್ರಯಾಣ ಮುಂದುವರೆಸಿದೆ” ಎಂದಿದ್ದಾರೆ ಸಂಜನಾ. ನನಗೆ ಧ್ವನಿ ಎತ್ತುವಷ್ಟು ಶಕ್ತಿ ಇದೆ. ಸಾಮಾನ್ಯ ಮಹಿಳೆಯೊಬ್ಬರಿಗೆ ಇದೇ ಸ್ಥಿತಿ ಎದುರಾದರೆ ಆಕೆ ಏನು ಮಾಡಬೇಕು?” ಓಲಾ ಹಾಗೂ ಊಬರ್ ಆಡಳಿತ ಮಂಡಳಿ ತಮ್ಮ ಕ್ಯಾಬ್ ಡ್ರೈವರ್‌ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಡ್ರೈವರ್‌ಗಳು ಕರೆ ಮಾಡಿ ರೈಡ್ ಕ್ಯಾನ್ಸಲ್ ಮಾಡುವಂತೆ ಪ್ರಶ್ನಿಸಿದ್ದಾರೆ ಸಂಜನಾ ಗಲ್ರಾನಿ.

Please follow and like us:

Leave a Reply

Your email address will not be published. Required fields are marked *

Next Post

ನಾಳೆ “ಕೋಟಿಗೊಬ್ಬ-3 ಟ್ರೇಲರ್‌ ಔಟ್..! “ಬಾಕ್ಸ್‌ ಆಫೀಸ್‌ ಲೂಟಿ” ಮಾಡಲು ಕೋಟಿಗೊಬ್ಬ-3 ರೆಡಿ

Wed Oct 6 , 2021
ಲಾಕ್‌ ಡೌನ್‌ ಸಡಲಿಕೆಯಿಂದ ಬಿಡುಗಡೆಗೆ ಸಜ್ಜಾಗಿ ನಿಂತಿದ್ದ ಸಿನಿಮಾಗಳು ಸರ್ಕಾರದಿಂದ ಶೇ.100ರಷ್ಟು ಆಸನಕ್ಕೆ ಅನುಮತಿ  ನೀಡಿದ ಬೆನ್ನಲ್ಲೇ ಸಿನಿಪ್ರಿಯರು  ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ದಿಂದ 100ರಷ್ಟು ಆಸನಕ್ಕೆ ಅವಕಾಶ ಕೊಟ್ಟ ಬೆನ್ನಲ್ಲೇ ಅನೇಕ ಚಿತ್ರತಂಡಗಳು ಬಿಡುಗಡೆಗೆ ಈಗಾಗಲೇ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ದಿನಾಂಕ ಕೂಡ ಈಗ ನಿರ್ಧಾರವಾಗಿದೆ.ಹಾಗಾದರೆ ಆ ಬಹು ನೀರಿಕ್ಷಿತ ಸಿನಿಮಾ ಯಾವುದೂ ಅನ್ನೋ ಕುತೂಹಲ ನಿಮಗಿದೆ ಅಲ್ಚಾ ಹಾಗಾದ್ರೆ ಈ ಸ್ಟೋರಿ […]

Advertisement

Wordpress Social Share Plugin powered by Ultimatelysocial