ಗಂಭೀರ ಆರೋಪ : ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದ ಸಿದ್ದರಾಮಯ್ಯ.

 

 

ಬೆಂಗಳೂರು, ಜ 27: ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯನವರ ನಡುವಿನ ಆರೋಪ/ಪ್ರತ್ಯಾರೋಪ ತಾರಕಕ್ಕೇರುತ್ತಿದೆ. ಸಿದ್ದರಾಮಯ್ಯನವರ ಸರಕಾರ ನಾಡು ಕಂಡ ಅತಿಭ್ರಷ್ಟ ಸರಕಾರವಾಗಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸಿದ್ದರಾಮಯ್ಯ, “ಅವನ ಹೇಳಿಕೆಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ, ನಮಗೇನಿದ್ದರೂ ಜನರು ನೀಡುವ ತೀರ್ಪೇ ಅಂತಿಮ” ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಮೇಲೆ ಹಣ ಪಡೆದಿದ್ದ ಆರೋಪವನ್ನು ಕುಮಾರಸ್ವಾಮಿ ಹೊರಿಸಿದ್ದಾರೆ.

ಗಣರಾಜ್ಯೋತ್ಸವದಂದು ಕಾಂಗ್ರೆಸ್ಸಿಗೆ ಕ್ಲಿಯರ್ ಕಟ್ ಹೊಸ ಸಂದೇಶ ರವಾನಿಸಿದ ಕುಮಾರಸ್ವಾಮಿ

ಯಡಿಯೂರಪ್ಪ ಅವರಿಂದ ಹಣ ಪಡೆದ ಬಗ್ಗೆ ಜನಕ್ಕೆ ಸತ್ಯ ಹೇಳಿ ಎಂದು ಟಾಂಗ್ ಕೊಟ್ಟಿರುವ ಕುಮಾರಸ್ವಾಮಿ, ಅರ್ಕಾವತಿ ಕರ್ಮಕಾಂಡ ಬಿಜೆಪಿ ಸರಕಾರದ ಕಮೀಷನ್ ವ್ಯವಹಾರಕ್ಕಿಂತ ದೊಡ್ಡ ಹಗರಣ ಎನ್ನುವ ಗುರುತರ ಆರೋಪವನ್ನು ಎಚ್ಡಿಕೆ ಮಾಡಿದ್ದಾರೆ.ಜೆಡಿಎಸ್ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಒಬ್ಬ ಸುಳ್ಳು ರಾಮಯ್ಯ ಎಂದು ನಾನು ಹೇಳಲು ಹಲವಾರು ಕಾರಣಗಳಿವೆ”ಎಂದು ಸಿದ್ದರಾಮಯ್ಯನವರ ವಿರುದ್ದ ಆರೋಪಗಳ ಸುರಿಮಳೆಯನ್ನು ಕುಮಾರಸ್ವಾಮಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಾದೇಶಿಕ ಟ್ರಯಲ್ಬ್ಲೇಜರ್ಗಾಗಿ ಪದ್ಮಶ್ರೀ ಗೌರವ;

Thu Jan 27 , 2022
‘ಕ್ಲಾರಿನೆಟ್ ಎವರೆಸ್ಟ್’ ಎ.ಕೆ.ಸಿ. ನಟರಾಜನ್, ಸದಿರ್ ಪ್ರತಿಪಾದಕ ಆರ್.ಮುತ್ತುಕನ್ನಮಾಳ್ ಮತ್ತು ಗ್ರಾಮಾಲಯದ ಸಂಸ್ಥಾಪಕ ಎಸ್.ದಾಮೋದರನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಿರುಚ್ಚಿ ಮೂಲದ ಕ್ಲಾರಿನೆಟ್ ಎಕ್ಸ್‌ಪೋನೆಂಟ್ ಎಕೆಸಿ ನಟರಾಜನ್ ಮತ್ತು ನೀರು ಮತ್ತು ನೈರ್ಮಲ್ಯ ತಜ್ಞ ಎಸ್.ದಾಮೋದರನ್ ಮತ್ತು ಪುದ್ಕೊಟ್ಟೈ ಜಿಲ್ಲೆಯ ವಿರಾಲಿಮಲೈನ ಕೊನೆಯ ಜೀವಂತ ದೇವದಾಸಿ ಮತ್ತು ಸದಿರ್ ನೃತ್ಯಗಾರ ಆರ್. ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀ ನಟರಾಜನ್, 92, ಮತ್ತು ಎಂಎಸ್ ಮುತ್ತುಕನ್ನಮಾಳ್, […]

Advertisement

Wordpress Social Share Plugin powered by Ultimatelysocial