ಗಗನಕ್ಕೇರಿದ ಟೊಮ್ಯಾಟೋ ಬೆಲೆ-ರೈತರ ಮೊಗದಲ್ಲಿ ಮಂದಹಾಸ

ದೇಶದಲ್ಲಿ ಮಹಾಮಾರಿ ಕೊರೊನಾದಿಂದ ಸರ್ಕಾರಗಳು ವಿಧಿಸಿದ್ದ ಲಾಕ್‌ಡೌನ್‌ನಿಂದ ಕೋಲಾರದಲ್ಲಿ ಟೊಮ್ಯಾಟೋ ಬೆಲೆ ನೆಲೆಕಚ್ಚಿ ರೈತರು ಕಂಗಾಲಾಗಿದ್ದರು. ಆದರೆ ಈಗ ಲಾಕ್‌ಡೌನ್ ಸಡಲಿಕೆ ಮಾಡಿರುವುದರಿಂದ ದಿನೇ ದಿನೇ ಟೊಮ್ಯಾಟೋ ಬೆಲೆ ಏರಿಕೆ ಕಂಡಿದೆ, ಇಂದಿನ ವಡ್ಡಹಳ್ಳಿ ಮಾರ್ಕೇಟ್ ದರ ಪ್ರತಿ ಹದಿನೈದು ಕೆಜಿ ಬಾಕ್ಸ್ಗೆ ೬೦೦ ರಿಂದ ೬೫೦ ರ ವರೆಗೂ ಏರಿಕೆ ಕಂಡಿದ್ದು, ಕಂಗಾಲಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಒಂದು ಕಡೆ ರೈತರಿಗೆ ಸಂತಸದ ಸುದ್ದಿಯಾದರೆ, ಇನ್ನೊಂದು ಕಡೆ ಗ್ರಾಹಕನಿಗೆ ಗಾಯದ ಮೇಲೆ ಬರೇ ಎಳೆದಂತಾಗಿದೆ. ಈಗಾಗಲೇ ಕೊರೊನಾದಿಂದ ಕಂಗಾಲಾಗಿದ್ದ ಗ್ರಾಹಕನಿಗೆ ಇದೀಗ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಹೊಟ್ಟೆಮೇಲೆ ತಣ್ಣೀರ ಬಟ್ಟೆ ಅಂತಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ನಿಯಂತ್ರಣಕ್ಕೆ ಸಚಿವರ ನೇಮಕ/-ಸಚಿವ ಮಾಧುಸ್ವಾಮಿ

Thu Jul 9 , 2020
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಲಯವಾರು ರಚಿಸಿ, ಸಚಿವರನ್ನು ವಲಯದ ಉಸ್ತುವಾರಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗಟ್ಟಲು ಎಲ್ಲ ರೀತಿಯ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎಂಟು ವಲಯಗಳಿವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಬಗ್ಗೆ ಸದ್ಯ ಯಾವುದೇ ಚರ್ಚೆಯಾಗಿಲ್ಲ. ಜಿಲ್ಲಾವಾರು ನಿಗಾ ವಹಿಸಲು ಸೂಚಿಸಿದ್ದಾರೆ. ವಾರಾಂತ್ಯ ಲಾಕ್‌ಡೌನ್ […]

Advertisement

Wordpress Social Share Plugin powered by Ultimatelysocial