ಗಡಿಯಲ್ಲಿ ಭಾರತೀಯರ ಸಾವು:ತನಿಖೆ ಅರಂಭಿಸಲು ಹೊರಟಿದೆ ಕೆನಡಾ.

ನ್ಯೂಯಾರ್ಕ್‌/ಟೊರೊಂಟೊ: ಕೆನಡಾ-ಅಮೆರಿಕ ಗಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಕುರಿತು ಕೆನಡಾ ಸರ್ಕಾರ ತನಿಖೆ ಆರಂಭಿಸಿದೆ.ಟೊರೊಂಟೊದಲ್ಲಿ ಬಂದಿಳಿದ ನಂತರ ಈ ಕುಟುಂಬದ ಸದಸ್ಯರು ಗಡಿಗೆ ಹೇಗೆ ಪ್ರಯಾಣಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಗಡಿಯಲ್ಲಿ ಅವರು ಎದುರಿಸಿದ ಸಮಸ್ಯೆಗಳೇನು ಹಾಗೂ ತನಿಖೆಗೆ ಪೂರಕವಾದ ಇತರ ಮಾಹಿತಿಯನ್ನು ಹಂಚಿಕೊಳ್ಳುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.ಅಮೆರಿಕ ಗಡಿಯಿಂದ 12 ಮೀ. ದೂರದಲ್ಲಿರುವ ಮನಿಟೊಬಾದ ಎಮರ್ಸನ್‌ ಎಂಬಲ್ಲಿ, ಗುಜರಾತಿನವರಾದ ಜಗದೀಶ ಬಲದೇವಭಾಯ್ ಪಟೇಲ್ (39), ವೈಶಾಲಿಬೆನ್ಜಗದೀಶಕುಮಾರ್ ಪಟೇಲ್‌ (37), ವಿಹಾಂಗಿ ಜಗದೀಶಕುಮಾರ್ ಪಟೇಲ್‌ (11) ಹಾಗೂ ಧಾರ್ಮಿಕ ಪಟೇಲ್ (3) ಎಂಬುವವರು ಹಿಮಪಾತದಿಂದಾಗಿ ಹೆಪ್ಪುಗಟ್ಟಿ ಜ.19ರಂದು ಮೃತಪಟ್ಟಿದ್ದರು.’ಪಟೇಲ್‌ ಕುಟುಂಬ ಜ.12ರಂದು ಟೊರೊಂಟೊಗೆ ಬಂದಿತ್ತು. 18ರಂದು ಎಮರ್ಸನ್‌ಗೆ ಪ್ರಯಾಣಿಸಿತ್ತು. ಪ್ರತಿಕೂಲ ಹವಾಮಾನದಿಂದಾಗಿ ನಾಲ್ವರೂ ಮೃತಪಟ್ಟರು’ ಎಂದು ಮನಿಟೊಬಾ ರಾಯಲ್ ಕೆನಡಿಯನ್‌ ಮೌಂಟೆಡ್‌ ಪೊಲೀಸ್‌ನ ಅಧಿಕಾರಿ ರಾಬ್ ಹಿಲ್‌ ಹೇಳಿದ್ದಾರೆ.ತಿಹಾರ್‌: ‘ಸೊಸೆ’ ಎನ್ನುತ್ತಿರುವ ಮಹಿಳೆಯಿಂದ ‘ಮಾವ’ನ ವಿರುದ್ಧ ಸ್ಪರ್ಧೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಸ್ಟ್ರೇಲಿಯನ್ ಓಪನ್: ಸೆಮಿಗೆ ಸಿಟ್ಸಿಪಾಸ್‌, ಕಾಲಿನ್ಸ್‌; ಮೆಡ್ವೆಡೆವ್‌ ಜಯಭೇರಿ

Fri Jan 28 , 2022
ಮೆಲ್ಬರ್ನ್: ಸ್ಪೇನ್‌ನ ರಫೆಲ್ ನಡಾಲ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಕನಸಿನೊಂದಿಗೆ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶುಕ್ರವಾರ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಆರನೇ ಶ್ರೇಯಾಂಕಿತರಾದ ನಡಾಲ್, ಏಳನೇ ಶ್ರೇಯಾಂಕಿತ ಇಟಲಿಯ ಮಟಿಯೊ ಬೆರೆಟಿನಿ ವಿರುದ್ಧ 6-3, 6-2, 3-6, 6-3ರ ಅಂತರದಲ್ಲಿ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು .ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರೊಂದಿಗೆ 20 […]

Advertisement

Wordpress Social Share Plugin powered by Ultimatelysocial