ಗುದದ್ವಾರದಲ್ಲಿ ಸಿಲುಕಿದ್ದ ಚೂಪಾದ ವಸ್ತುವನ್ನು ಹೊರತೆಗೆದಿದ್ದಕ್ಕೆ ವೈದ್ಯೆಗೆ ಅಮಾನತು ಶಿಕ್ಷೆ..!

ಗುದದ್ವಾರದಲ್ಲಿ ಸಿಲುಕಿದ್ದ ಚೂಪಾದ ವಸ್ತುವನ್ನು ಹೊರತೆಗೆದಿದ್ದಕ್ಕೆ ವೈದ್ಯೆಗೆ ಅಮಾನತು ಶಿಕ್ಷೆ..!

ವಿಚಿತ್ರವಾದ ಚೂಪಾದ ವಸ್ತುವೊಂದನ್ನು ವ್ಯಕ್ತಿಯ ದೇಹದಿಂದ ತೆಗೆದ ತಪ್ಪಿಗೆ ವೈದ್ಯನನ್ನೇ ಕೆಲಸದಿಂದ ತೆಗೆದು ಹಾಕಿದ ವಿಚಿತ್ರ ಘಟನೆಯೊಂದು ವಾಷಿಂಗ್ಟನ್​ನಲ್ಲಿ ನಡೆದಿದೆ. ಹಿರಿಯ ವೈದ್ಯರ ಷಡ್ಯಂತ್ರದಿಂದ ತನಗೆ ಈ ರೀತಿ ಮೋಸ ಮಾಡಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ.

ಚೂಪಾದ ವಸ್ತುವನ್ನು ಹೊಂದಿದ್ದ ವ್ಯಕ್ತಿಯ ಜೀವವನ್ನು ಕಾಪಾಡುವಲ್ಲಿ ನಾನು ಮಹತ್ವದ ಪಾತ್ರ ವಹಿಸಿದ್ದೆ. ಆದರೂ ಸಹ ನನಗೆ ಇಂತಹ ದ್ರೋಹ ಎಸಗಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ರು.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಶಸ್ತ್ರಚಿಕಿತ್ಸೆಯೊಂದಕ್ಕೆ ಸಹಾಯ ಮಾಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ನಾನು ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದೆ. ವ್ಯಕ್ತಿಯೊಬ್ಬನ ಗುದದ್ವಾರದಲ್ಲಿ ಚೂಪಾದ ವಸ್ತುವೊಂದು ಸಿಲುಕಿಕೊಂಡಿತ್ತು. ಇದರಿಂದ ಅವರ ಜೀವಕ್ಕೆ ಅಪಾಯ ಕಾದಿತ್ತು. ಆದರೆ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಆ ವಸ್ತುವನ್ನು ಹೊರತೆಗೆಯಲಾಯ್ತು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿಯೇ ನನಗೆ ರಜೆ ನೀಡಿತ್ತು. ಆದರೆ ಇದಾದ ಬಳಿಕ ನನ್ನನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಅಮೆರಿಕದ ಕೊಲೊರೆಕ್ಟಲ್​ ಸರ್ಜನ್​ ಡೆಬೊರಾ ಕೆಲ್ಲರ್ ಆರೋಪಿಸಿದ್ದಾರೆ.

ಮುಖ್ಯ ವೈದ್ಯರ ಸಮ್ಮುಖದಲ್ಲಿಯೇ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ ನಾನು ಆ ಚೂಪಾದ ವಸ್ತುವಿನ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ರೋಗಿಯ ಖಾಸಗಿತನಕ್ಕೆ ಧಕ್ಕೆ ತಂದಿದ್ದೇನೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಆರೋಪಿಸಿದೆ. ನನ್ನ ಲೈಂಗಿಕ ಜೀವನದ ಬಗ್ಗೆ ಕಮೆಂಟ್​ ಮಾಡಿದ್ದಾರೆ. ಇದಕ್ಕೂ ಆಸ್ಪತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಕೆಲ್ಲರ್​ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊವ್ಯಾಕ್ಸಿನ್​ ವಯಸ್ಕರಿಗಿಂತಲೂ ಮಕ್ಕಳ ದೇಹದಲ್ಲಿಯೇ ಉತ್ತಮ ಇಮ್ಯೂನಿಟಿ ವೃದ್ಧಿಸಬಲ್ಲದು: ಎನ್​.ಕೆ.ಅರೋರಾ

Mon Dec 27 , 2021
ಜನವರಿ 3ರಿಂದ ದೇಶದಲ್ಲೆಡೆ 15-18ವರ್ಷದವರಿಗೆ ಕೊರೊನಾ ಲಸಿಕೆ ಹಾಕುವ ಘೋಷಣೆಯನ್ನು ಪ್ರಧಾನಿ ಮೋದಿಯವರು ಮಾಡಿದ ಬೆನ್ನಲ್ಲೇ, ಈ ವಯಸ್ಸಿನವರಿಗೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅವಕಾಶ ಕೊಟ್ಟಿದೆ. ಕೊವ್ಯಾಕ್ಸಿನ್​ ಲಸಿಕೆ (Covaxin Covid 19 Vaccine) ಮಕ್ಕಳ ದೇಹದಲ್ಲಿ ಉತ್ತಮ ರೋಗ ನಿರೋಧಕ ಪ್ರತಿಕ್ರಿಯೆಗೆ ಕಾರಣವಾಗಬಲ್ಲದು ಎಂಬುದು ಪ್ರಯೋಗದಿಂದ ಗೊತ್ತಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಪ್ರತಿರಕ್ಷಣೆ ಸಂಬಂಧ)ಯ ಕೊವಿಡ್​ […]

Advertisement

Wordpress Social Share Plugin powered by Ultimatelysocial