ಗುರುದ್ವಾರದ ಪ್ರಸಾದ ಸೇವಿಸಿ 10 ಜನರು ಅಸ್ವಸ್ಥ

ಜನರು ಅಸ್ವಸ್ಥ ಪಂಜಾಬ್‌ನ ತಾರ್ನ್ ತರಣ್‌ನ ಗುರುದ್ವಾರದಲ್ಲಿ ಪ್ರಸಾದ ಸೇವಿಸಿದ ನಂತರ ಕನಿಷ್ಠ 10 ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಅಮೃತಸರ ಮೂಲದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೆ ನಿಧನರಾದ ತಾಯಿಗಾಗಿ ರಘುವೀರ್ ಸಿಂಗ್ ಎನ್ನುವವರು ಆಯೋಜಿಸಿದ್ದ ಸುಖಮಣಿ ಸಾಹಿಬ್ ಪ್ರವಚನದಲ್ಲಿ ಈ ಘಟನೆ ನಡೆದಿದೆ. ಅವರ ಮನೆಯಲ್ಲಿ ಪ್ರಾರ್ಥನಾ ಪ್ರವಚನವನ್ನು ಆಯೋಜಿಸಲಾಗಿತ್ತು. ಪ್ರಾರ್ಥನೆಯ ಪ್ರವಚನದ ನಂತರ ರಘುವೀರ್ ಸಿಂಗ್ ಅವರ ಕುಟುಂಬ ಸದಸ್ಯರು ಪ್ರಸಾದ ವಿತರಿಸಿದರು. ಉಳಿದಿರುವ ಪ್ರಸಾದವನ್ನು ಗುರುದ್ವಾರಕ್ಕೆ ಕೊಂಡೊಯ್ಯಲಾಯಿತು, ಅಲ್ಲಿನ ಗ್ರಂಥಿ ತನ್ನ ಮಕ್ಕಳು ಮತ್ತು ಇತರ ಭಕ್ತರಿಗೆ ಪ್ರಸಾದ ವಿತರಿಸಿದರು.  ಅವರಲ್ಲಿ 10 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುದ್ವಾರಕ್ಕೆ ಕೊಂಡೊಯ್ಯುತ್ತಿರುವಾಗ ಉಳಿದಿರುವ ಪ್ರಸಾದಕ್ಕೆ ವಿಷಕಾರಿ ಪದಾರ್ಥ ಸೇರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ನಡೆಸಲಾಗುತ್ತಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಹಿಳೆ ಸಾವು

Sun Jul 5 , 2020
ಸಿಲಿಕಾನ್ ಸಿಟಿಯಲ್ಲಿ ಆಸ್ಪತ್ರೆಗಳ ಬೇಜವಾಬ್ದಾರಿತನ ಮತ್ತೆ ಮತ್ತೆ ವರದಿಯಾಗುತ್ತಲೇ ಇದೆ. ಕೋವಿಡ್ ಪರಿಸ್ಥಿತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೊರೊನಾ ಸೋಂಕು ಇಲ್ಲದ ರೋಗಿಗಳಿಗೆ ಚಿಕಿತ್ಸೆ ಸಿಗುವುದು ಕಷ್ಟಕರವಾಗಿದೆ. ಅನಾರೋಗ್ಯಕ್ಕೀಡಾಗಿದ್ದ ಮಹಿಳೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಆಕೆ ಸಾವನ್ನಪ್ಪಿದ್ದಾರೆ. ಕುರುಬರಹಳ್ಳಿಯ ಲೋಕೇಶ್ ಎಂಬವರ ತಾಯಿಗೆ ಹೃದಯಾಘಾತ ಸಂಭವಿಸಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಬಳಿಕ ಜಯದೇವ ಸೇರಿದಂತೆ ನಾಲ್ಕೈದು […]

Advertisement

Wordpress Social Share Plugin powered by Ultimatelysocial