ಗುಳಿಕೆನ್ನೆಯ “ಬುಲ್‌ ಬುಲ್‌” ನ ಹೊಸ ಸುದ್ದಿ ಏನ್ ಗೊತ್ತಾ..?

ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೌದು ಸಿನಿಪ್ರೀಯರ ಮನಸ್ಸು ಗೆದ್ದ ಗುಳಿಕೆನ್ನೆಯ ಹುಡುಗಿ 29 ರ ವಂಸತಕ್ಕೆ ಕಾಲಿಟ್ಟಿದಾರೆ. ಇತ್ತಿಚಿಗೆಷ್ಟೆ ಐ ಲವ್‌ ಯೂ ಮೂವಿಯಲ್ಲಿ ನಟ ಉಪ್ಪಿ ಸಿನಿಮಾದ ಮೂಲಕ ಸದ್ದು ಮಾಡಿದ್ದರು. ಅದಷ್ಟೇ ಅಲ್ಲದೇ ಹಲವು ಖಾಸಗಿ ವಾಹಿನಿಗಳ ತೀರ್ಪುಗಾರರಾಗಿ ಕಾಮಿಡಿ ಶೋಗಳಲ್ಲಿ ಮಿಂಚಿದ ತಾರೆ ಇವರು. ಇನ್ನೂ ರಚ್ಚು ಸಿನಿಮಾದ ಅನೇಕ ಹಾಡುಗಳಂತು ಬಂದಕ್ಕಿಂತ ಒಂದು ಫುಲ್‌ ಫೇಮಸ್ಸ್. ದರ್ಶನ ಚಿತ್ರದ ಬುಲ್‌ ಬುಲ್‌, ತಿತಲಿ ತಿತಲಿ, ಸುದೀಪ್‌ ನಟನೆಯ ಸೀರೆಯಲ್ಲಿ ಹುಡುಗಿರ ನೋಡದೆ ಬಾರದು, ಏನಮ್ಮಿ ಏನಮ್ಮಿ, ಪುಟ್ ಗೌರಿ ಹಾಡು ಹೀಗೆ ಎಲ್ಲಾ ಹಾಡುಗಳು ಇಂದಿಗೂ ಇವರ ರಚ್ಚು ಅಭಿಮಾನಿಗಳಿಗೆ ಅಚ್ಚುಮೆಚ್ಚು.

ಬರ್ತಡೇ ಸ್ಪೇಷಲ್‌ ಚಿತ್ರತಂಡಗಳಿಂದ ಬಂಪರ್‌ ಉಡುಗರೆಗಳು !

ಒನ್‌ ಬ್ಯಾಕ್‌ ಟು ಒನ್‌ ಎಂಬತೆ ಇದೀಗ ಬುಲ್‌ ಬುಲ್‌ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇಂದು ಶಬರಿ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು. ಈ ಚಿತ್ರದಲ್ಲಿ ರಚ್ಚು ವಿಭಿನ್ನ ಲುಕ್‌ ನಲ್ಲಿ ಕುಳಿತ್ತಿರುವುದನ್ನ ಕಾಣಬಹುದು ಇನ್ನೂ ಪೋಸ್ಟರ್‌ ಹೇಳುವ ಹಾಗೆ ಇದೊಂದು ಸಪೇನ್ಸ್‌ ಚಿತ್ರವಾಗಿದೆ. ಯಾಕ ಅಂತಿರಾ ಚಿತ್ರದಲ್ಲಿ ಕಾಣುವ  ಮತ್ತೊಂದು ಹೇರ್‌ ಸ್ಟೇಲ್‌ನ ಲುಕ್ ನ ಜಲಕಹಾಗಿದೆ. ಹೌದು ಶಬರಿ ಸರ್ಚಿಂಗ್‌ ರಾವಣ ಚಿತ್ರತಂಡ ಇದೀಗ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿ ಡಿಂಪಿಗೆ ಗಿಪ್ಟ್‌ ನೀಡಿದೆ. ಅಷ್ಟೇ ಅಲ್ಲದೆ ರಚಿತಾ ಕೂಡ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಪೋಟೋವನ್ನು ಶೇರ್‌ ಮಾಡಿ . ನಾನು ತುಂಬಾ ದಿನಗಳಿಂದ ಕಾಯುತ್ತಿರುವ ಚಿತ್ರ ಇದಾಗಿದೆ ಎಂದು ತಮ್ಮ ಖಾತೆಯಲ್ಲಿ ಬೆರೆದುಕೊಂಡಿದ್ದಾರೆ. ಶಬರಿ ಆಯ್ತು ಈಕಡೆಗೆ ಲವ್ ಯೂ ರಚ್ಚು ಹವಾ ಇನ್ನೂ ಜೋರಾಗಿದೆ. ಸಚೀತ್‌ ಹೆಗ್ಡೆ ಹಾಡಿರುವ “ನೋಡುತ್ತಾ ನನ್ನನೆ” ಹಾಡನ್ನು ಸಿನಿಮಾ ತಂಡ ಬಿಡುಗಡೆ ಮಾಡಿ ಬುಲ್‌ ಬುಲ್‌ ಗೆ ಮತ್ತೊಂದು ಗಿಪ್ಟ್‌ ನೀಡಿದ್ದಾರೆ. ನಟಿ ರಚಿತಾ ರಾಮ್  ನಟನೆಯ ಮಾನ್ಸೂನ್ ರಾಗ ,ಲವ್ ಮಿ ಆರ್ ಹೇಟ್ ಮಿ, ವೀರಂ, ಏಕ್ ಲವ್ ಯಾ, ಮ್ಯಾಟ್ನಿ, ಸೂಪರ್ ಮಚ್ಚಿ, ಡಾಲಿ, ಏಪ್ರಿಲ್, ಬ್ಯಾಡ್ ಮ್ಯಾನರ್, ಲವ್ ಯೂ ರಚ್ಚು ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಗೆ ಸಿದ್ಧವಾಗಿವೆ.

Please follow and like us:

Leave a Reply

Your email address will not be published. Required fields are marked *

Next Post

ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆದ ಡ್ರಗ್ಸ್‌ ಪಾರ್ಟಿ ಪ್ರಕರಣ-ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

Sun Oct 3 , 2021
ಮುಂಬೈನ ತೀರ ಪ್ರದೇಶದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆದ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ‌ ರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಆರ್ಯನ್ ಜೊತೆ ಇನ್ನೂ ಏಳು ಜರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಯುವತಿಯರೂ ಇದ್ದು, ಆರ್ಯನ್ ಖಾನ್ ಸೇರಿದಂತೆ ಮುನ್‌ಮುನ್ ದಮೇಚಾ, ನೂಪೂರ್ ಸಾರಿಕಾ, ಇಸ್‌ಮಿತ್ ಸಿಂಗ್, ಮೋಹಕ್ ಜೆಸ್ವಾಲ್, ವಿಕ್ರಾಂತ್ ಚೊಕ್ಕರ್, ಗೋಮಿತ್ ಚೋಪ್ರಾ, ಅರ್ಬಾಜ್ […]

Advertisement

Wordpress Social Share Plugin powered by Ultimatelysocial