ಗೃಹಬಳಕೆ ಎಲ್‌ಪಿಜಿ ದರ ಕಡಿಮೆಯಾಗುವುದು ಯಾವಾಗ?

 

ಕೇಂದ್ರ ಸರ್ಕಾರವು ಸ್ಥಳೀಯ ಎಲ್‌ಪಿಜಿ ಸಿಲಿಂಡರ್‌ ಅಗ್ಗವಾಗುವ ಸೂಚನೆಯನ್ನು ಗುರುವಾರ ನೀಡಿದೆ. ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಈ ಬಗ್ಗೆ ಗುರುವಾರ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಎಲ್‌ಪಿಜಿ ದರವು ಇನ್ನಷ್ಟು ಅಗ್ಗವಾಗಬಹುದು ಎಂದು ತಿಳಿಸಿದ್ದಾರೆ. ಹೇಗೆ ಅಗ್ಗವಾಗುವುದು ಎಂಬುವುದನ್ನು ಕೂಡಾ ಉಲ್ಲೇಖಿಸಿದ್ದಾರೆ.

ಅಂತಾರಾಷ್ಟ್ರೀಯ ಇಂಧನ ದರವು ಇಳಿಕೆಯಾದರೆ ಎಲ್‌ಪಿಜಿಯನ್ನು ಇನ್ನಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಪ್ರತಿ ಮೆಟ್ರಿಕ್ ಟನ್‌ಗೆ 750 ಡಾಲರ್‌ ಇದೆ. ಇದರಿಂದ ಕೆಳಕ್ಕೆ ಇಳಿದಾಗ ಜನರಿಗೆ ಕಡಿಮೆ ದರದಲ್ಲಿ ಎಲ್‌ಪಿಜಿ ಅನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ, “ಪ್ರಸ್ತುತ ಹಲವಾರು ಅಂಶಗಳ ಆಧಾರದಲ್ಲಿ ಅಂತರಾಷ್ಟ್ರೀಯ ಪೆಟ್ರೋಲಿಯಂ ದರವನ್ನು ನಿರ್ಧಾರ ಮಾಡಲಾಗುತ್ತದೆ. ವಿಶ್ಲೇಷಣೆಗಳಲ್ಲಿ ಒಂದನ್ನು ಹೇಳಬಹುದು. ಕೆಲವೇ ವರ್ಷಗಳ ಹಿಂದೆ, ಅಡುಗೆ ಅನಿಲ ಕಡಿಮೆಯಲ್ಲಿ ಲಭ್ಯವಾಗುತ್ತಿತ್ತು. ಯಾಕೆಂದರೆ ಆ ಸಂದರ್ಭದಲ್ಲಿ ಹೆಚ್ಚು ಅನಿಲ ಲಭ್ಯವಿರುತ್ತಿತ್ತು,” ಎಂದು ಹೇಳಿದ್ದಾರೆ.

ಡಿಎಂಕೆ ಸಂಸದ ಕಲಾನಿಧಿ ವೀರಸ್ವಾಮಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬಗ್ಗೆ ಕಲಾನಿಧಿ ವೀರಸ್ವಾಮಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ, “ಗ್ರಾಹಕರ ಅಗತ್ಯ ಅತೀ ಮುಖ್ಯವಾದ ಅಗತ್ಯಗಳ ವಿಚಾರದಲ್ಲಿ ಸರ್ಕಾರ ಅತೀ ಸೂಕ್ಷ್ಮವಾಗಿದೆ,” ಎಂದು ವಿವರಿಸಿದ್ದಾರೆ.

ಸಚಿವ ಹರ್ದೀಪ್ ಪುರಿ ಹೇಳುವುದೇನು?

“ಸೌದಿ ಒಪ್ಪಂದದ ದರವು ಶೇಕಡ 330ರಷ್ಟು ಏರಿಕೆಯಾಗಿದೆ. ಆದರೆ ದೇಶೀಯ ವಿಷಯಕ್ಕೆ ಬೆಲೆ ಹೆಚ್ಚಳವು ತುಂಬಾ ಸಣ್ಣದಾಗಿದೆ. ಅಂತಾರಾಷ್ಟ್ರೀಯ ಸೌದಿ ಒಪ್ಪಂದದ ಬೆಲೆಯು ಮೆಟ್ರಿಕ್ ಟನ್‌ಗೆ ಯುಎಸ್‌ಡಿ 750ಕ್ಕಿಂತ ಕಡಿಮೆಯಾದರೆ ಸೂಕ್ತ. ಇದರಿಂದಾಗಿ ದೇಶೀಯ ಎಲ್‌ಪಿಜಿಯನ್ನು ಇನ್ನಷ್ಟು ಅಗ್ಗ ದರದಲ್ಲಿ ಮಾರಾಟ ಮಾಡಲು ಅವಕಾಶ ಲಭ್ಯವಾಗುತ್ತದೆ,” ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ಇನ್ನು ಭಾರತವು ಸ್ಥಳೀಯವಾಗಿ ಉಪಯೋಗಿಸುವ ಶೇಕಡ 60ಕ್ಕೂ ಅಧಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

“ಸೌದಿಯಲ್ಲಿನ ದರವು ಸ್ಥಳೀಯವಾಗಿ ಎಲ್‌ಪಿಜಿ ದರದ ಮೇಲೆ ಪ್ರಭಾವ ಉಂಟು ಮಾಡುತ್ತದೆ. 2019-20ರಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ 454/ ಯುಎಸ್‌ ಡಾಲರ್ ಆಗಿತ್ತು. ಆದರೆ 2021-22ರಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ 693 ಯುಎಸ್‌ ಡಾಲರ್‌ಗೆ ಏರಿಕೆಯಾಗಿದೆ. 2022-23ರಲ್ಲಿ ಸೌದಿಯಲ್ಲಿ ದರವು ಪ್ರತಿ ಮೆಟ್ರಿಕ್ ಟನ್‌ಗೆ 710 ಯುಎಸ್‌ ಡಾಲರ್ ಆಗಿದೆ,” ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ವಿವರಿಸಿದ್ದಾರೆ.

“ಸ್ಥಳೀಯ ಎಲ್‌ಪಿಜಿ ಮಾರಾಟದಿಂದಾಗಿ ತೈಲ ಮಾರುಕಟ್ಟೆ ಸಂಸ್ಥೆಗಳು ನಷ್ಟವನ್ನು ಕಂಡಿದೆ. ಈ ನಷ್ಟವನ್ನು ಸರಿದೂಗಿಸಲು, ಸರ್ಕಾರವು ಇತ್ತೀಚೆಗೆ 22000 ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದೆ. ಸರ್ಕಾರ 2022ರ ಮೇ 21ರಿಂದ 14.2 ಕೆಜಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಈ ಸಬ್ಸಿಡಿಯನ್ನು ನೀಡಲಾಗುತ್ತಿದೆ. 12 ಸಿಲಿಂಡರ್‌ಗಳಿಗೆ ಮಾತ್ರ ಈ ಸಬ್ಸಿಡಿ ಲಭ್ಯವಾಗುತ್ತದೆ,” ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಪುರಿ ಪ್ರಕಾರ ಪ್ರತಿ ಎಲ್‌ಪಿಜಿ ಸಿಲಿಂಡರ್‌ ದರ ದೆಹಲಿಯಲ್ಲಿ 1053 ರೂಪಾಯಿ ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಸವಾರರಿಗೆ ಡಬಲ್ ಶಾಕ್!

Fri Feb 10 , 2023
ಹುಬ್ಬಳ್ಳಿ: ನೀವು ವಾಹನ ಸವಾರರಾ? ಪೊಲೀಸ್ ಇಲಾಖೆ  ನೀಡಿದ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಹೊರಟಿದ್ದೀರಾ? ಹಾಗಿದ್ರೆ ನೀವು ತುಂಬಾ ಹಣ ಇಟ್ಕೊಂಡು ಹೋಗಿ. ಹೀಗೆ ಯಾಕೆ ಹೇಳುತ್ತಿದ್ದೀರಾ ಅಂತ ಪ್ರಶ್ನೆ ಮಾಡ್ತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ! ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸ್ ಇಲಾಖೆ ನೀಡಿರುವ ದಂಡ ರಿಯಾಯಿತಿ ಕೆಲವೊಬ್ಬರಿಗೆ ವರವಾಗಿದ್ದರೆ ಮತ್ತೆ ಕೆಲವರಿಗೆ ಶಾಪವಾಗಿ ಮಾರ್ಪಟ್ಟಿದೆ. ತಾವಾಗಿಯೇ ದಂಡ ಚೆಕ್  ಮಾಡಿಸಲು ಹೋಗಿ ಸಾವಿರಾರು ರೂಪಾಯಿ […]

Advertisement

Wordpress Social Share Plugin powered by Ultimatelysocial