YOU TUBE:ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಲು ಹೀಗೆ ಮಾಡಿ;

ಟೆಕ್ ದೊಡ್ಡಣ್ಣ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಅತ್ಯುತ್ತಮ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಯೂಟ್ಯೂಬ್ ತನ್ನ ಬಳಕೆದಾರರಿಗೆ ಹಲವು ಉಪಯುಕ್ತ ಆಯ್ಕೆಗಳನ್ನು ಪರಿಚಯಿಸಿದೆ. ಬಳಕೆದಾರರು ಯೂಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಸಹ ಮಾಡಬಹುದಾಗಿದೆ.

ಯೂಟ್ಯೂಬ್ ವಿಡಿಯೋ ಆಫ್‌ಲೈನ್ ವೀಕ್ಷಣೆ ಮಾಡಲು, ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಎರಡು ಮಾರ್ಗಗಳ ಆಯ್ಕೆ ಇದೆ.

ಹೌದು, ಯೂಟ್ಯೂಬ್ ಎಲ್ಲ ಬಗೆಯ ವಿಡಿಯೋಗಳನ್ನು ಸುಲಭವಾಗಿ ನೋಡವ ಅವಕಾಶವನ್ನು ಒದಗಿಸಿಕೊಟ್ಟಿದೆ. ಯೂಟ್ಯೂಬ್‌ ವಿಡಿಯೋಗಳನ್ನು ಸೇವ್‌ ಮಾಡಿಕೊಂಡು ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಆಯ್ಕೆ ಇದೆ. ಹಾಗೆಯೇ ವಿಡಿಯೋಗಳನ್ನು ಸ್ಮಾರ್ಟ್‌ಫೋನ್‌ಗೆ ಡೌನಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ತ್ವರಿತವಾಗಿ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಈ ಕ್ರಮ ಅನುಸರಿಸಿ:

ಹಂತ 1: ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊವನ್ನು ಸರ್ಚ್ ಮಾಡಿ.

ಹಂತ 2: ಯೂಟ್ಯೂಬ್‌ ಈಗ ವೀಡಿಯೊದ ಪೂರ್ವವೀಕ್ಷಣೆಯನ್ನು ತೋರಿಸುತ್ತದೆ. ಈಗ, ವೀಡಿಯೊದ ಕೆಳಭಾಗದಲ್ಲಿ ಗೋಚರಿಸುವ ಮೂರು ಚುಕ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ.

ಹಂತ 3: ಡ್ರಾಪ್-ಡೌನ್ ಮೆನು ಡೌನ್‌ಲೋಡ್ ವೀಡಿಯೊ ಆಯ್ಕೆಯನ್ನು ತೋರಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ವೀಡಿಯೊ ಡೌನ್‌ಲೋಡ್ ಆಗುತ್ತದೆ. ಅಪ್ಲಿಕೇಶನ್‌ನ ಲೈಬ್ರರಿ ವಿಭಾಗದಲ್ಲಿ ನೀವು ಇದನ್ನು ಕಾಣಬಹುದು. > ಡೌನ್‌ಲೋಡ್‌ಗಳು.

ಆಪ್‌ ಮೂಲಕ ಯೂಟ್ಯೂಬ್‌ ವಿಡಿಯೊಗಳನ್ನು ಬಲ್ಕ್ ಡೌನ್‌ಲೋಡ್‌ ಮಾಡಲು ಈ ಕ್ರಮ ಅನುಸರಿಸಿ:

* 4K ವಿಡಿಯೋ ಡೌನ್‌ಲೋಡರ್ ಆಪ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಹಾಗೂ ಆಪ್‌ ಅನ್ನು ತೆರೆಯಿರಿ.
* ಈಗ ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಯೂಟ್ಯೂಬ್‌ ಚಾನಲ್ ತೆರೆಯಿರಿ > ಪ್ಲೇ ಲಿಸ್ಟ್‌ ಕ್ಲಿಕ್ ಮಾಡಿ > ಯಾವುದೇ ಪ್ಲೇ ಲಿಸ್ಟ್ಸ್‌ ಬಲಭಾಗ ಕ್ಲಿಕ್ ಮಾಡಿ ಮತ್ತು ಲಿಂಕ್ ಕಾಪಿ ಮಾಡಿ ಕ್ಲಿಕ್ ಮಾಡಿ.
* 4K ವಿಡಿಯೋ ಡೌನ್‌ಲೋಡರ್ ಅಪ್ಲಿಕೇಶನ್‌ಗೆ ಬದಲಾಯಿಸಿ ಮತ್ತು ಪೇಸ್ಟ್‌ ಲಿಂಕ್ ಅನ್ನು ಒತ್ತಿರಿ. ನಂತರ ಡೌನ್‌ಲೋಡ್ ಪ್ಲೇ ಲಿಸ್ಟ್ಸ್ ಕ್ಲಿಕ್ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Redmi TV X43 ಸ್ಮಾರ್ಟ್ ಟಿವಿ ಫೆಬ್ರವರಿ 9ಕ್ಕೆ ಬಿಡುಗಡೆ;

Sat Jan 29 , 2022
Redmi Smart TV X43 ಫೆಬ್ರವರಿ 9 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕ Xiaomi ಶುಕ್ರವಾರ ದೃಢಪಡಿಸಿದೆ. ಸ್ಮಾರ್ಟ್ ಟಿವಿ 43 ಇಂಚಿನ ಡಿಸ್ಪ್ಲೇ ಜೊತೆಗೆ 4K ರೆಸಲ್ಯೂಶನ್ ಹೊಂದಿದೆ. Redmi Smart TV X43 ಮುಂಬರುವ Redmi Note 11S ಮತ್ತು Redmi Smart Band Pro ಜೊತೆಗೆ ಫೆಬ್ರವರಿ 9 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯು ಪ್ರಸ್ತುತ Redmi Smart TV X50, X55, […]

Advertisement

Wordpress Social Share Plugin powered by Ultimatelysocial