ಬೈಕ್ ಸವಾರರಿಗೆ ಡಬಲ್ ಶಾಕ್!

ಹುಬ್ಬಳ್ಳಿ: ನೀವು ವಾಹನ ಸವಾರರಾ? ಪೊಲೀಸ್ ಇಲಾಖೆ  ನೀಡಿದ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಹೊರಟಿದ್ದೀರಾ? ಹಾಗಿದ್ರೆ ನೀವು ತುಂಬಾ ಹಣ ಇಟ್ಕೊಂಡು ಹೋಗಿ. ಹೀಗೆ ಯಾಕೆ ಹೇಳುತ್ತಿದ್ದೀರಾ ಅಂತ ಪ್ರಶ್ನೆ ಮಾಡ್ತೀರಾ?
ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ! ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸ್ ಇಲಾಖೆ ನೀಡಿರುವ ದಂಡ ರಿಯಾಯಿತಿ ಕೆಲವೊಬ್ಬರಿಗೆ ವರವಾಗಿದ್ದರೆ ಮತ್ತೆ ಕೆಲವರಿಗೆ ಶಾಪವಾಗಿ ಮಾರ್ಪಟ್ಟಿದೆ. ತಾವಾಗಿಯೇ ದಂಡ ಚೆಕ್  ಮಾಡಿಸಲು ಹೋಗಿ ಸಾವಿರಾರು ರೂಪಾಯಿ ದಂಡ ತೆತ್ತ ಹಲವು ಘಟನೆಗಳು ಹುಬ್ಬಳ್ಳಿಯಲ್ಲಿ  ನಡೆದಿದೆ. ಪೊಲೀಸರು ಕೊಟ್ಟ ಲಿಸ್ಟ್ ನೋಡಿ ಹಲವು ಸವಾರರು ಶಾಕ್ ಆಗಿದ್ದಾರೆ.
ಹೌದು. ಹುಬ್ಬಳ್ಳಿಯಲ್ಲಿ ದಂಡ ಪಾವತಿಗೆ ರಿಯಾಯಿತಿ ಸಿಕ್ತೆಂದುಕೊಂಡವರಿಗೆ ಶಾಕ್ ಮೇಲೆ ಶಾಕ್‌! ವಾಹನ ನಂಬರ್ ಹಾಕಿ ಚೆಕ್ ಮಾಡಿಸಿದವರಿಗೆ ತಲೆಸುತ್ತು ಬರೋ ಸ್ಥಿತಿ. ಸಾವಿರಾರು ರೂಪಾಯಿ ದಂಡ ಬಾಕಿ ಇರೋದು ನೋಡಿ ವಾಹನ ಸವಾರರು ಕಂಗಾಲಾಗಿದ್ದಾರೆ. ದಂಡ ಕಟ್ಟೋಕೆ ಹೋಗಿ ಹಲವರು ಪೇಚಿಗೆ ಸಿಲುಕಿದ್ದಾರೆ. ರಿಯಾಯಿತಿ ಸಿಕ್ತು‌ ಅಂತ ಖುಷಿಪಟ್ಟವರಿಗೆ ಸಾವಿರಾರು ರೂಪಾಯಿ ದಂಡದ ಬರೆ ಬಿದ್ದಿದೆ‌. ಅದ್ರಲ್ಲಿಯೂ ಬೈಕ್ ಸವಾರರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.
ಒಬ್ಬನೇ ಬೈಕ್ ಸವಾರನಿಗೆ ಬಿತ್ತು 11,500 ರೂಪಾಯಿ ದಂಡ!
ಹುಬ್ಬಳ್ಳಿಯ ಬಂಡಿವಾಡದ ಮಹಾಂತೇಶ್ ಎಂಬಾತನಿಗೆ ಬೃಹತ್ ಮೊತ್ತದ ದಂಡದ ಬಿಸಿ ಮುಟ್ಟಿದೆ‌. ರಿಯಾಯಿತಿ ಕೊಟ್ಟಿದ್ದಾರೆ ಅಂತ ದಂಡದ ಮೊತ್ತ ಚೆಕ್ ಮಾಡಿಸಿದ ಹಲವಾರು ವಾಹನ ಸವಾರರು, ದಂಡದ ಮೊತ್ತ ಕೇಳಿ‌ ಹೌಹಾರಿದ್ದಾರೆ. ಅನಿವಾರ್ಯವಾಗಿ ದಂಡ ಕಟ್ಟಿ ಬಂದಿದ್ದೇನೆ. ರಿಯಾಯಿತಿ ಸಿಕ್ಕ ನಂತರವೂ 5,750 ದಂಡ ಪಾವತಿಸಿದ್ದೇನೆ. ಹೆಲ್ಮೆಟ್ ಹಾಕದೇ ಇದ್ದುದಕ್ಕೆ ದಂಡ ಬಿದ್ದಿದೆ. ಮತ್ತಷ್ಟು ರಿಯಾಯಿತಿ ಕೊಟ್ಟಿದ್ದರೆ ಚೆನ್ನಾಗಿರ್ತಿತ್ತು. ವಾಹನಕ್ಕಿಂತ ದಂಡದ ಮೊತ್ತವೇ ದುಬಾರಿ ಎನ್ನುಂತಾಗಿದೆ. ಒಮ್ಮೆಗೇ ತುಂಬಲು ತೊಂದರೆಯಾಗುತ್ತೆ. ಮತ್ತಷ್ಟು ರಿಯಾಯಿತಿ ಕೊಡುವಂತೆ ದಂಡ ಪಾವತಿಸಿದ ಮಹಾಂತೇಶ್ ಮನವಿ ಮಾಡಿದ್ದಾರೆ.
ಇದೇ ರೀತಿ ಹಲವಾರು ಸವಾರರಿಗೆ ದಂಡದ ಬಿಸಿ ಮುಟ್ಟಿದೆ. ಹುಬ್ಬಳ್ಳಿ ನಗರವೊಂದರಲ್ಲಿಯೇ ಕಳೆದ ಆರು ದಿ‌ನದಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ದಂಡ ಸಂಗ್ರಹಿಸಲಾಗಿದೆ. ಫೆಬ್ರವರಿ 09 ರಂದು ಒಂದೇ ದಿನ ಸುಮಾರು 8.80 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ. ರಿಯಾಯಿತಿ ಸಿಗುತ್ತೆ ಅಂತ ತಾವಾಗಿಯೇ ದಂಡ ಕಟ್ಟಲು ಬಂದು ಬಲೆಗೆ ಬಿದ್ದ ಸ್ಥಿತಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ.
ಫೆಬ್ರವರಿ 11 ರವರೆಗೂ ಪೊಲೀಸ್ ಇಲಾಖೆ ಶೇ.50 ರಷ್ಟು ರಿಯಾಯಿತಿ ನೀಡಿದೆ. ರಿಯಾಯಿತಿ ದಂಡ ಹಲವಾರು ಸವಾರರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ವಾಹನ ಚಲಾವಣೆ ವೇಳೆ ಟ್ರಾಫಿಕ್ ನಿಯಮ ಪಾಲಿಸದೇ ಸಾವಿರಾರು ರೂಪಾಯಿ‌ ದಂಡ ಪಾವತಿಸಿದ್ದಾರೆ. ಬಹುತೇಕ ಪ್ರಕರಣಗಳು ಹೆಲ್ಮೆಟ್ ಇಲ್ಲದ ಪ್ರಯಾಣಿಸುವುದಕ್ಕೆ ದಂಡ ಬಿದ್ದಿದೆ.
ದಂಡದ ಬಿಸಿ ಮುಟ್ಟಿದ ನಂತರ ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸೋಕೆ ಕೆಲವರು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ಮಾತ್ರ ಝಣ ಝಣ ಕಾಂಚಾಣ ಎಣಿಸುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯೋಗಕ್ಕಾಗಿ ಅಡ್ಡದಾರಿ!

Fri Feb 10 , 2023
ಕೆಕೆಆರ್​ಟಿಸಿಯಿಂದ ನಡೆದಿದ್ದ ಕಂಡಕ್ಟರ್ ಹುದ್ದೆಗಳ ನೇಮಕಾತಿಯ ದೇಹದಾರ್ಢ್ಯ ಪರೀಕ್ಷೆಯಲ್ಲಿ ಪಾಸಾಗಲು 55 ಕಿಲೋ ತೂಕ ಇರಬೇಕು. ಹೀಗಾಗಿ ಕಡಿಮೆ ತೂಕವಿದ್ದ ನಾಲ್ಕು ಜನ ದೇಹಕ್ಕೆ ಕಬ್ಬಿಣ, ಕಲ್ಲುಗಳನ್ನು ಕಟ್ಟಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾರೆ.ಕಲಬುರಗಿ : ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಮೊದಲು ಬೆಳಕಿಗೆ ಬಂದಿದ್ದು ಕಲಬುರಗಿಯಲ್ಲಿ. ಕಿಂಗ್ ಪಿನ್​ಗಳ ಸಹಾಯದಿಂದ ಅನೇಕ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ, ಹೊರಗಿನಿಂದ ಬಂದ ಉತ್ತರವನ್ನು ಬರೆದು ಆಯ್ಕೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. […]

Advertisement

Wordpress Social Share Plugin powered by Ultimatelysocial