ಗೋಶಾಲೆ ಆವರಣದಲ್ಲಿ ಯುವ ಸಂಘಟನೆವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬೀದರ್ ಜಿಲ್ಲೆಯ ಔರಾದ ಪಟ್ಟಣದ ಹೊರವಲಯದಲ್ಲಿರುವ  ಗೋ ಶಾಲೆ ಆವರಣದಲ್ಲಿ ಎಬಿವಿಪಿ ಸಂಘಟನೆ ಹಾಗೂ ಯುವ ಮುಖಂಡದ ವತಿಯಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಮೂಲಕ  ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದ ವೀರಯೋಧ ಗೋವಿಂದರಾವ್ ಶೇಡೋಳೆ ಬಲಿದಾನವನ್ನು ಸ್ಮರಿಸಲಾಯಿತು. ಹಾಗೂ ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಖಂಡಿಕೆರಿ ಗ್ರಾಮದ ಯೋಧ ರಾಮ ಶಂಕರ್ ಜಾಧವ್ ಇವರಿಗೆ ಸನ್ಮಾನ ಮಾಡಲಾಯಿತು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಜಿಲ್ಲೆಯ ವರವಟ್ಟಿ ಗ್ರಾಮದ ವೀರ ಯೋಧನಿಗೆ ನಮನ ಸಲ್ಲಿಸುವ ಹಾಗೂ ರಾಮ ಜಾಧವ ಯೋಧ ರಿಗೆ  ಸನ್ಮಾನ  ಮೂಲಕ ಯುವಕರು ಕಾರ್ಗಿಲ್ ವಿಜಯ ದಿವಸ್ ಆಚರಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ಹವಪ್ಪ ಡ್ಯಾಡೆ,  ಅಶೋಕ ಅಲಮಾಜೆ, ವೀರೇಶ್ ಬರೊಳೆ, ಪಂಡರಿ ರಾಠೋಡ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಏಕಾಏಕಿ ಹಾಲಿನ ದರ ಕಡಿಮೆ ರೈತರು ಕಂಗಾಲಾ

Mon Jul 27 , 2020
ಮಹಾಮಾರಿ ಕೊರೊನಾ ವಕ್ಕರಿಸಿದಾಗಿನಿಂದ ದೇಶದಲ್ಲಿ ಅಲವು ಉದ್ಯಮಗಳಿಗೆ ದೊಡ್ಡ ಆರ್ಥಿಕ ಹೊಡೆತಗಳು ಬಿದ್ದಿವೆ, ಅದರಲ್ಲೂ ಕೋಲಾರ ರೈತರ ಜೀವನಾದಾರಿತ ಆಗಿದ್ದ ಹೈನೋದ್ಯಮಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಸಿಲ್ಕ್ & ಮಿಲ್ಕ್ ಗೆ ಹೆಸರುವಾಸಿಯಾಗಿರುವ ಇಡೀ ದೇಶಕ್ಕೆ ಹಾಲು ಉತ್ಪಾದಿಸಿ ಕಳುಹಿಸುತ್ತಿದ್ದ, ಕೋಲಾರ ಜಿಲ್ಲೆಯ ರೈತರು ಈಗ ಹಾಲಿನ ದರ ಏಕಾಏಕಿ ಕಡಿಮೆ ಮಾಡಿರುವುದರಿಂದ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈಗ ಹಾಲು ಉತ್ಪಾದನೆ ಕೂಡ ಹೆಚ್ಚಾಗಿದ್ದು, ಕೊರೊನಾ ದಿಂದ ಹಾಲು ಮಾರಾಟವಿಲ್ಲದೆ, ಕೋಲಾರ-ಚಿಕ್ಕಬಳ್ಳಾಪುರ […]

Advertisement

Wordpress Social Share Plugin powered by Ultimatelysocial