ಚಾಮರಾಜನಗರ :ಶಾಲಾ ಮಕ್ಕಳಿಗೆ ಹೆಚ್ಚಾಯ್ತು ಕೋರೋನಾ ಸೋಂಕು .

ಚಾಮರಾಜನಗರ ತಾಲ್ಲೂಕಿನ‌ ನವಿಲೂರು ಗ್ರಾಮದ ಪ್ರೌಢ ಶಾಲೆಯ 14 ವಿದ್ಯಾರ್ಥಿಗಳಿಗೆ ಕೋರೊನಾ ಸೋಂಕು
ಕಾಳನಹುಂಡಿ ಸರ್ಕಾರಿ ಶಾಲೆಯ 14 ವಿದ್ಯಾರ್ಥಿಗಳಿಗೆ ಕೋರೊನಾ ಸೋಂಕು ಕಾಣಿಸಿಕೊಂಡಿದೆ. ಕುದೇರು ಸರ್ಕಾರಿ ಪ್ರೌಢಶಾಲೆಯ ಮೂವರು ಮಕ್ಕಳಿಗೆ ಸೋಂಕು ದೃಡವಾಗಿದೆ.ಹಾಗೆಯೇ
ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಬಳಿಯ ಮೊರಾರ್ಜಿ ದೇಸಾಯಿ‌ ವಸತಿ‌ಶಾಲೆಯಲ್ಲಿ ಈಗಾಗಲೆ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು . ಇಂದು ಮತ್ತೆ ಪ್ರಾಂಶುಪಾಲರಿಗೆ ಸೇರಿದಂತೆ 25 ವಿದ್ಯಾರ್ಥಿಗಳಲ್ಲಿ ಕೋವಿಡ್ ಕಂಡು ಬಂದಿದ್ದು ಒಟ್ಟಾರೆ ಮೊರಾರ್ಜಿ ಶಾಲೆಯಲ್ಲಿಯೇ 48 ವಿದ್ಯಾರ್ಥಿಗಳಿಗೆ ಕೋರೊನಾ ಧೃಡವಾಗಿದ್ದು ಇದೀಗ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಗಾಗಿ‌ ತಮ್ಮ ಮಕ್ಕಳನ್ನು ವಸತಿ ಶಾಲೆಯಿಂದ ವಾಪಸ್ಸು ಮನೆಗೆ ಕರೆದುಕೊಂಡು ಬರುತ್ತಿದ್ದಾರೆ ಪೋಷಕರು . ಹಾಗೇಯೇ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಕೊರೋನಾ ಬರುತ್ತೆ ಅಂತ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿರೋದು ತಿಳಿದುಬಂದಿದೆ.ಗಡಿ ಜಿಲ್ಲೆಯಲ್ಲೀಗ ಶಾಲಾ ಮಕ್ಕಳೇ ಕೋರೊನಾಗೆ ಟಾರ್ಗೇಟ್ ಆಗಿದೆ.ಕೋರೊನಾ ಸೋಂಕು ಕಾಣಿಸಿಕೊಂಡ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

CRICKET:ಜಿಂಬಾಬ್ವೆ ನಾಯಕ ʼಬ್ರೆಂಡನ್ ಟೇಲರ್ʼ ಮೂರೂ ವರ್ಷ‌ ಕ್ರಿಕೆಟ್‌ನಿಂದ ಬ್ಯಾನ್;

Sat Jan 29 , 2022
 ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್(Brendan Taylor) ಅವರನ್ನ ಹೇಳಿಕೆ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮೂರೂವರೆ ವರ್ಷಗಳ ಕಾಲ ನಿಷೇಧಿಸಿದೆ. ಈ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ‘ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ನಾಲ್ಕು ಆರೋಪಗಳನ್ನ ಮತ್ತು ಡೋಪಿಂಗ್ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ಒಂದು ಪ್ರತ್ಯೇಕ ಆರೋಪವನ್ನ ಒಪ್ಪಿಕೊಂಡ ನಂತ್ರ ಬ್ರೆಂಡನ್ ಟೇಲರ್ ಅವರಿಗೆ ಎಲ್ಲಾ ರೀತಿಯ ಕ್ರಿಕೆಟ್ʼನಿಂದ […]

Advertisement

Wordpress Social Share Plugin powered by Ultimatelysocial