ಜಮ್ಮು ಕಾಶ್ಮೀರದಲ್ಲಿ ಮತ್ತೆ ಭೂಕಂಪ

ದೇಶದ ಹಲವೆಡೆ ಮೇಲಿಂದ ಮೇಲೆ ಭೂಕಂಪನ ಸಂಭವಿಸುತ್ತಿದ್ದು, ಇದೀಗ ಜಮ್ಮು ಮತ್ತು ಕಾಶ್ಮೀರದ ಕತ್ರಾ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ 4:55ಕ್ಕೆ ರಿಕ್ಟರ್​ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.ಗುರುವಾರ ಸಂಜೆ 6.38ರ ಸಮಯದಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು ಎಂದು ಭೂಕಂಪನ ಕೇಂದ್ರದ ಮೇಲ್ವಿಚಾರಣಾ ಅಧಿಕಾರಿಗಳು ತಿಳಿಸಿದ್ದಾರೆ.ಜೂನ್​ 27ರಂದು ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.4ರಷ್ಟು ತೀವ್ರತೆ ದಾಖಲಾಗಿತ್ತು.ಜುಲೈ 16ರಂದು ಅಸ್ಸಾಂ ಮತ್ತು ಮೇಘಾಲಯದಲ್ಲೂ ಎರಡು ಬಾರಿ ಭೂಮಿ ಕಂಪಿಸಿತ್ತು.

 

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಕ್ಕೆ ಬಳ್ಳಾರಿ ಮಾದರಿ ಚಳುವಳಿಯ ಎಚ್ಚರಿಕೆ

Fri Jul 17 , 2020
ರಾಜ್ಯ ಸರ್ಕಾರ ಜನ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು, ಗಣಿ ಹಗರಣಕ್ಕಿಂತ ದೊಡ್ಡ ಹಗರಣಗಳನ್ನು ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಮಾಡಿದೆ. ಬಳ್ಳಾರಿ ಗಣಿ ಹಗರಣ ವಿರೋಧಿಸಿ ಮಾಡಿದ್ದ ಹೋರಾಟದ ಮಾದರಿಯಲ್ಲಿಯೇ ರಾಜ್ಯ ಸರ್ಕಾರದ ವಿರುದ್ಧ ಹಳ್ಳಿ-ಹಳ್ಳಿಗಳಲ್ಲಿ ಚಳುವಳಿ ಮಾಡುತ್ತೇವೆ ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ ಭೂ ಸುಧಾರಣಾ ಕಾನೂನಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುರಿAದ ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ ಎಂದು. ಸುಗ್ರೀವಾಜ್ಞೆ […]

Advertisement

Wordpress Social Share Plugin powered by Ultimatelysocial