ಸೆಕ್ಸ್ ಗೆ ಬಲವಂತ ಮಾಡಿದ ಪತಿ: ಅದನ್ನೇ ಕತ್ತರಿಸಿದ ಸಿಟ್ಟಿಗೆದ್ದ ಪತ್ನಿ!

ಸೆಕ್ಸ್ ಗೆ ಬಲವಂತ ಮಾಡಿದ ಪತಿ: ಅದನ್ನೇ ಕತ್ತರಿಸಿದ ಸಿಟ್ಟಿಗೆದ್ದ ಪತ್ನಿ!

ಇಷ್ಟವಿಲ್ಲದೇ ಇದ್ದರೂ ಬಲವಂತವಾಗಿ ಸೆಕ್ಸ್​​ ಮಾಡಲು ಮುಂದಾದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಟಿಕಮ್​​ಗಢದಲ್ಲಿ ನಡೆದಿದೆ.

ಟಿಕಮ್ ​​ಗಢ ಜಿಲ್ಲೆಯಿಂದ 40 ಕಿಮೀ​ ದೂರದ ಜತಾರಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಡಿ.​​ 7ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.24 ವರ್ಷದ ಪತ್ನಿ ಬೇಡ ಅಂದರೂ ಬಲವಂತವಾಗಿ ರಾತ್ರಿ ದೈಹಿಕ ಸಂಬಂಧ ಬೆಳೆಸಲು 26 ವರ್ಷದ ಗಂಡ ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಚಾಕುವಿನಿಂದ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ.

ಗಂಡ-ಹೆಂಡತಿ ನಡುವೆ ದೈಹಿಕ ಸಂಬಂಧದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಪತ್ನಿ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದರಿಂದ ಕೋಪಗೊಂಡಿರುವ ಮಹಿಳೆ ಆತನ ಮರ್ಮಾಂಗ ಕತ್ತರಿಸಿದ್ದಾಳೆ. ಡಿಸೆಂಬರ್​ 13ರಂದು ಠಾಣೆಗೆ ಬಂದು ದೂರು ನೀಡಿದ್ದಾನೆ. ಘಟನೆ ನಡೆದ ತಕ್ವಣವೇ ಆತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆಂದು ಎಂದು ಜಾತಾರಾ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್​ ತ್ರಿವೇಂದ್ರ ತ್ರಿವೇದಿ ಹೇಳಿದ್ದಾರೆ.

2019ರಲ್ಲಿ ಇಬ್ಬರು ಮದುವೆಯಾಗಿದ್ದು, ಇದಾದ ಕೆಲ ತಿಂಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಇದೇ ಕಾರಣಕ್ಕಾಗಿ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಈಗಾಗಲೇ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್​​ 324ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಪ್ಟನ್ಸಿ ಫೈಟ್ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ

Fri Dec 17 , 2021
ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದಕ್ಕೆ ಒಂದೊಂದೇ ಉದಾಹರಣೆಗಳು ಸಿಗುತ್ತಿವೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವ ಸುದ್ದಿ ಹಲವು ವರ್ಷಗಳಿಂದ ಇತ್ತು. ಆದರೆ ಇಬ್ಬರು ಆಟಗಾರರು ಆ ಬಗ್ಗೆ ತುಟಿಪಿಟಕ್ ಅಂದಿರಲಿಲ್ಲ. ಆದರೆ ಈಗ ಕ್ಯಾಪ್ಟನ್ಸಿ ಶಿಫ್ಟ್ ಆದಮೇಲೆ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಆದರೆ, ರೋಹಿತ್ ಇಂಜುರಿಯಿಂದಾಗಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ […]

Advertisement

Wordpress Social Share Plugin powered by Ultimatelysocial