ಜಮ್ಮು ಕಾಶ್ಮೀರ | ಉಗ್ರರೊಂದಿಗೆ ಗುಂಡಿನ ಚಕಮಕಿ: ಮತ್ತೊಬ್ಬ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಕಾಳಗ ಮೂರನೇ ದಿನವೂ ಮುಂದುವರಿದಿದ್ದು, ಇಂದು ಭಾರತೀಯ ಸೇನೆಯ ಮ‌ತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ.

ಸೆ.13 ರಂದು (ಬುಧವಾರ) ನಡೆದ ಗುಂಡಿನ ಚಕಮಕಿಯ ವೇಳೆ ಕಾಣೆಯಾಗಿದ್ದ ಸೈನಿಕ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಅನಂತನಾಗ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಜಂಟಿ ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ನಿನ್ನೆ (ಸೆ.14) ಯೋಧ ನಾಪತ್ತೆಯಾಗಿದ್ದರು. ‌

ಸೈನಿಕರು ಡ್ರೋನ್‌ಗಳನ್ನು ಬಳಸಿ ಶಂಕಿತ ಭಯೋತ್ಪಾದಕರ ಅಡಗುತಾಣದ ಸ್ಥಳಗಳ ಮೇಲೆ ಗ್ರೆನೇಡ್‌ ದಾಳಿ ನಡೆಸುತ್ತಾರೆ. ಈ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರ ಗುಂಪನ್ನು ಗುರಿಯಾಗಿಸಲು ಸೈನಿಕರು ಗ್ರೆನೇಡ್ ಲಾಂಚರ್‌ಗಳನ್ನು ಸಹ ಬಳಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಭದ್ರತಾ ಪಡೆ ಸಿಬ್ಬಂದಿ ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗಗಳಲ್ಲಿ ಸೇನಾ ಕರ್ನಲ್‌, ಮೇಜರ್‌, ಪೊಲೀಸ್‌ ಅಧಿಕಾರಿ, ಪೊಲೀಸ್‌ ವಿಶೇಷಾಧಿಕಾರಿ ಮತ್ತೊಬ್ಬ ಯೋಧ ಹುತಾತ್ಮರಾಗಿದ್ದರು.

Please follow and like us:

tmadmin

Leave a Reply

Your email address will not be published. Required fields are marked *

Next Post

Chandrayaan-3: 'ಚಂದ್ರಯಾನ-3'ಗೆ ಮತ್ತೊಂದು ಯಶಸ್ಸು!

Fri Sep 15 , 2023
ಭಾರತ ಚಂದ್ರಯಾನ-3 ಯಶಸ್ಸಿನ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಇಸ್ರೋ ಹೆಸರು ರಾರಾಜಿಸಿದೆ. ಈ ವೇಳೆ ಜಗತ್ತಿನ ಯುಟ್ಯೂಬ್ ಇತಿಹಾಸದಲ್ಲೇ ಅಳಿಸಲಾಗದ ಸಾಧನೆ ಮಾಡಿದೆ. ಈ ಕುರಿತು ಯುಟ್ಯೂಬ್‌ನ ಮುಖ್ಯಸ್ಥರೇ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಇಸ್ರೋ ಬಗ್ಗೆ ಮತ್ತು ‘ಚಂದ್ರಯಾನ-3’ರ ಕುರಿತು ಯುಟ್ಯೂಬ್ ಹೇಳಿದ್ದೇನು? ಭಾರತದ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇಸ್ರೋ ಆಗಸ್ಟ್ 23ರಂದು ವಿಕ್ರಮ್‌ ಲ್ಯಾಂಡರ್‌ ಅನ್ನ ಚಂದ್ರನ ಅಂಗಳಕ್ಕೆ ಇಳಿಸಿತ್ತು. ಆಗ ಲ್ಯಾಂಡರ್ […]

Advertisement

Wordpress Social Share Plugin powered by Ultimatelysocial