ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯಲ್ಲಿ 1 ಟ್ರಿಲಿಯನ್ ಡಾಲರ್ ನಷ್ಟ!

ನವದೆಹಲಿ: ಬಿಟ್ ಕಾಯಿನ್ ಹಾಗೂ ಇತರ ಡಿಜಿಟಲ್ ಕ್ರಿಪ್ಟೋಕರೆನ್ಸಿಗಳು ತೀವ್ರ ಕುಸಿತ ಕಂಡ ಪರಿಣಾಮ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಮೌಲ್ಯ ತೀವ್ರವಾಗಿ ಕುಸಿತ ಕಂಡಿದೆ.

ಬಿಟ್ ಕಾಯಿನ್ ನ ಮೌಲ್ಯ ಪ್ರತಿ ಕಾಯಿನ್ ಗೆ 35,000 ಡಾಲರ್ ನಷ್ಟಿದ್ದು, ನವೆಂಬರ್ 2021 ನಿಂದ ಏರಿಕೆ ಕಂಡ ಬಳಿಕ ಇದೇ ಮೊದಲ ಬಾರಿಗೆ ಶೇ.40 ಕ್ಕಿಂತಲೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ.

ನವೆಂಬರ್ ನಲ್ಲಿ ಬಿಟ್ ಕಾಯಿನ್ ಮೌಲ್ಯ 69,000 ಡಾಲರ್ ಆಸುಪಾಸಿನಲ್ಲಿತ್ತು ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಅಮೆರಿಕಾದ ಫೆಡರಲ್ ರಿಸರ್ವ್ ಮಾರ್ಚ್ ನಲ್ಲಿ ಬಡ್ಡಿ ದರ ಏರಿಕೆ ಸುಳಿವು ನೀಡಿದ್ದು ಮಾರುಕಟ್ಟೆಯಿಂದ ಉತ್ತೇಜನಗಳನ್ನು ಹಿಂಪಡೆಯುವ ಸುಳಿವು ನೀಡಿದ ಬೆನ್ನಲ್ಲೇ ಕ್ರಿಪ್ಟೋ ಕುಸಿತ ದಾಖಲಾಗಿದೆ. ಇತರ ಡಿಜಿಟಲ್ ಕರೆನ್ಸಿಗಳಾದ ಎಥೆರಿಯಮ್, ಫೈನಾನ್ಸ್ ಕಾಯಿನ್, ಕಾರ್ಡಾನೊಗಳೂ ಕುಸಿತ ಕಂಡಿದೆ. ಸೋಲಾನಾ, ಡೊಗೆಕೋಯಿನ್ ಮತ್ತು ಶಿಬಾ ಇನು ಸಹ ಕುಸಿತ ದಾಖಲಿಸಿದೆ.

ನವೆಂಬರ್ ನಿಂದ ದಾಖಲಾಗಿರುವ ಕುಸಿತದಲ್ಲಿ ಬಿಟ್ ಕಾಯಿನ್ ನ ಮಾರುಕಟ್ಟೆಯಲ್ಲಿ 600 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

REPUBLIC DAY:ಲಸಿಕೆ ಹಾಕದ ಜನರು, 15 ವರ್ಷದೊಳಗಿನ ಮಕ್ಕಳಿಗೆ ಗಣರಾಜ್ಯೋತ್ಸವ ಪರೇಡ್ಗೆ ಅವಕಾಶವಿಲ್ಲ;

Mon Jan 24 , 2022
ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ಜನರು ಸಂಪೂರ್ಣವಾಗಿ ಕೋವಿಡ್ ವಿರುದ್ಧ ಲಸಿಕೆಯನ್ನು ಹೊಂದಿರಬೇಕು ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಮಾರಂಭದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಪೊಲೀಸರು ಹೊರಡಿಸಿದ ಮಾರ್ಗಸೂಚಿಗಳ ಸೆಟ್‌ನಲ್ಲಿ ತಿಳಿಸಲಾಗಿದೆ. ಜನವರಿ 26 ರಂದು ರಾಜ್‌ಪಥ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜನರು ಮುಖವಾಡಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. “ಎರಡೂ ಡೋಸ್ ಆಂಟಿ-ಕೊರೊನಾವೈರಸ್ ಲಸಿಕೆಗಳನ್ನು […]

Advertisement

Wordpress Social Share Plugin powered by Ultimatelysocial