ಡಬಲ್ ಇಂಜಿನ್ ಸರ್ಕಾರ ಅಂತಾರೆ. ಡಬಲ್ ಇಂಜಿನ್ ಸರ್ಕಾರ ಸಮಸ್ಯೆ ಏನಂದರೆ, ಜನರಿಗೆ ಕಷ್ಟ ಬರುವಾಗ ಇಂಜಿನ್ ಆಫ್ ಆಗುತ್ತೆ

 

 

ಬೆಂಗಳೂರು,ಫೆಬ್ರವರಿ15: ಡಬಲ್ ಇಂಜಿನ್ ಸರ್ಕಾರ ಅಂತಾರೆ. ಡಬಲ್ ಇಂಜಿನ್ ಸರ್ಕಾರ ಸಮಸ್ಯೆ ಏನಂದರೆ, ಜನರಿಗೆ ಕಷ್ಟ ಬರುವಾಗ ಇಂಜಿನ್ ಆಫ್ ಆಗುತ್ತೆ ಯಾರದೂ ಇಂಜಿನ್ ವರ್ಕ್ ಆಗಲ್ಲ ಎಂದು ಶಾಸಕ ಯು ಟಿ ಖಾದರ್ ಲೇವಡಿ ಮಾಡಿದರು.

ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಸರ್ವ ಜನಾಂಗಕ್ಕೆ ಒಂದು ಕಾರ್ಯಕ್ರಮ ಸಮರ್ಪಕವಾಗಿ ಕೊಟ್ಟಿಲ್ಲ.

ನಮ್ಮ ಸರ್ಕಾರ ಹಲವಾರು ಯೋಜನೆ ನೀಡಿತ್ತು, 75 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿತ್ತು. ಈ ದೇಶದ ಎಲ್ಲಾ ರೈತರಿಗೆ ಸಾಲ ಮನ್ನಾ ಮಾಡಿತ್ತು. ಜನ ನರಳಾಡಿ ನರಳಾಡಿ ಸತ್ತವತು ಸತ್ತ, ಬದುಕಿದವ ಬದುಕಿದ ಎಂದು ಕಿಡಿಕಾರಿದರು.

ಡಬಲ್ ಇಂಜಿನ್ ಸರ್ಕಾರದ ಸೈಲೆಂನ್ಸರ್ ನಲ್ಲಿ ಬರುವ ಹೊಗೆ ಇದೆಯಲ, ಅದು ವಿಷಕಾರಿ ಹೊಗೆ. ಆ ಹೊಗೆ ಸಮಾಜ ನಾಶ ಮಾಡುವ ಹೊಗೆ ಅದು. ಅದರ ಇಂಜಿನ್ ಕಟ್ಟಿದ್ದೇ ಇದನ್ನು ಜನರು ಚುನಾವಣೆಯಲ್ಲಿ ಕಿತ್ತು ಬಿಸಾಕುತ್ತಾರೆ. ಸೈಲೆನ್ಸರ್ ಶಬ್ದ ಮಾಡುತ್ತೆ ಹೊರೆತು ಬಳಸಲಾಗದ ಪರಿಸ್ಥಿತಿ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಏಳು ಕೆ.ಜಿ ಅಕ್ಕಿ ಕೊಡುತ್ತಿತ್ತು, ಅದು ಇಂದು ಐದು ಕೆ.ಜಿಗೆ ತಂದು ನಿಲ್ಲಿಸಿದ್ದಾರೆ. ಸರಿಯಾದ ಟೈಮ್ ನಲ್ಲಿ ಸ್ಟೋರಿಗೆ ಅಕ್ಕಿ ಕೂಡ ಬರಲ್ಲ, ಅಕ್ಕಿ ಕ್ವಾಲಿಟಿ ಕೂಡ ನೋಡಲ್ಲ. ಬಿಪಿಎಲ್ ಕಾರ್ಡ್ ಇನ್ನೂ ಕೂಡ ಕೊಡುತ್ತಿಲ್ಲ. ನಮ್ಮ ಸರ್ಕಾರದಲ್ಲಿ 25 ಲಕ್ಷ ಅಧಿಕ ಮಂದಿಗೆ ಬಿಪಿಎಲ್ ಕಾರ್ಡ್ ಕೊಟ್ಟಿತ್ತು. ಐದು ನಿಮಿಷಗಳಲ್ಲಿ ಸಿದ್ದತೆ ಮಾಡಿಕೊಡುತ್ತಿದ್ವಿ, ಆದರೆ ಸರ್ಕಾರಕ್ಕೆ ಯಾಕೆ ಆಗ್ತಿಲ್ಲ. ಆಸ್ಪತ್ರೆಗೆ ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿದರು. ಬಡವರು ಹಾರ್ಟ್ ಆಪರೇಷನ್ ಮಾಡೋಕೆ ಎರಡು ಲಕ್ಷ ಬೇಕು. ಕಾರ್ಡ್ ಇಲ್ಲದವರು ಎಲ್ಲಿಗೆ ಹೋಗಬೇಕು.? ಆಸ್ಪತ್ರೆಯ ಬಿಲ್ ಕಟ್ಟೋದು ಎಲ್ಲಿಂದ.? ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ಬಾಲ್ಡ್ ರೈಸ್ ತಿನ್ನೋದು. ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಅಂಗಾರ ಅವರು ಕುಚಲಕ್ಕಿ ಕೊಡಿ ಅಂತ ಸಿಎಂಗೆ ಮನವಿ ಕೊಡುತ್ತಾರೆ. ಇದುವರೆಗೂ ಕುಚಲಕ್ಕಿ ಬಂದಿಲ್ಲ. ಕುಚಲಕ್ಕಿ ಕೊಡದವರು ಏನೋ ಮಾಡಿದ್ದಾರೆ ಅಂತ ಬಿಂಬಿಸುವುದು ಎಷ್ಟು ಮಟ್ಟಿಗೆ ಸರಿ.? ಮಾರ್ಕ್ಸ್ ಕಾರ್ಡ್ ಅಂತ ಜನ ಸೊನ್ನೆ ಕೊಟ್ಟೇ ಕೊಡುತ್ತಾರೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಚ್ಚಿ ಬೀಳಿಸುವಂತಿದೆ ದುಬಾರಿ ಟೋಲ್ ಶುಲ್ಕ

Thu Feb 16 , 2023
ಟೋಲ್ ಶುಲ್ಕವನ್ನು ಏಕಾಏಕಿ ದುಪ್ಪಟ್ಟು ಏರಿಕೆ ಮಾಡಲಾಗಿದ್ದು, ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ. ದಾವಣಗೆರೆ ಹೆಬ್ಬಾಳು ಟೋಲ್ ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳ ಮಾಡಲಾಗಿದೆ. ಕಾರ್, ಜೀಪ್, ಲಘು ವಾಹನಗಳ ಶುಲ್ಕ 60 ರಿಂದ 120 ರೂ.ಗೆ ಹೆಚ್ಚಳವಾಗಿದೆ. ಲಘು ವಾಣಿಜ್ಯ ವಾಹನ ಶುಲ್ಕ 95 ರೂ.ನಿಂದ 195 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಬಸ್, ಟ್ರಕ್ ಗಳಿಗೆ 195 ರೂ.ನಿಂದ 410 ರೂಪಾಯಿಗೆ ಹೆಚ್ಚಳವಾಗಿದೆ. ತ್ರಿ […]

Advertisement

Wordpress Social Share Plugin powered by Ultimatelysocial