ತಂದೆಯ ವಿಲ್ ಇಲ್ಲದ ಸ್ವಯಾರ್ಜಿತ ಆಸ್ತಿ ಹಕ್ಕು ಮಗಳಿಗೆ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

 

ಹೊಸದಿಲ್ಲಿ: ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಆದ್ಯತೆ ನೀಡುವ ಮಹತ್ವದ ತೀರ್ಪೊಂದನ್ನು ಸುಪ್ರೀಂಕೋರ್ಟ್ ಗುರುವಾರ ನೀಡಿದೆ. ಉಯಿಲನ್ನು (Will) ಬರೆದಿಡದೆ ಸಾಯುವ ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಹಾಗೂ ವಿಭಜನೆಯಿಂದ ಬಂದ ಆಸ್ತಿಗಳು ಹೆಣ್ಣುಮಕ್ಕಳಿಗೆ ಆನುವಂಶಿಕವಾಗಿ ಸಿಗಬೇಕಾಗುತ್ತದೆ ಮತ್ತು ಅವರು ಕುಟುಂಬದ ಇತರೆ ಸದಸ್ಯರಿಗಿಂತ ಆದ್ಯತೆ ಪಡೆಯಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿ ಹಿಂದೂ ಮಹಿಳೆಯರು ಹಾಗೂ ವಿಧವೆಯರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಮನವಿಯ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ಪ್ರಕಟಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ.. |Chickballapur|

Sat Jan 22 , 2022
ವೀಕೆಂಡ್ ಕರ್ಫ್ಯೂ ರದ್ದಾದ ಹಿನ್ನೆಲೆ.. ಚಿಕ್ಕಬಳ್ಳಾಪುರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ.. ಕರ್ಫ್ಯೂ ರದ್ದಾಗಿದೆ ಅಂದಾಕ್ಷಣ ಜನ ಬೇಕಾಬಿಟ್ಟಿ ಓಡಾಡಿಬಿಡಬೇಕು ಅಂತಲ್ಲ.. ವೀಕೆಂಡ್ ಕರ್ಫ್ಯೂ ರದ್ದಾದ ನಂತರ ಈಗ ಜನರ ಜವಾಬ್ದಾರಿ ಹೆಚ್ಚಾಗಿದೆ.. ಕರ್ಫ್ಯೂ ನಿಂದ ಬೀದಿ ವ್ಯಾಪಾರಿಗಳು ಎದುರಿಸಿದ್ದ ಆರ್ಥಿಕ ಸಂಕಷ್ಟ ಗೊತ್ತಿದೆ.. ಜನರ ಸಂಕಷ್ಟ ವನ್ನು ಅರಿತು ವೀಕೆಂಡ್ ಕರ್ಫ್ಯೂ ನಮ್ಮ ಸರ್ಕಾರ ರದ್ದುಗೊಳಿಸಿದೆ.. ನೈಟ್ ಕರ್ಫ್ಯೂ ಎಂದಿನಂತೆ ಮುಂದುವರೆಯಲಿದೆ.. ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್ಪಿ […]

Advertisement

Wordpress Social Share Plugin powered by Ultimatelysocial