ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಯೂರಿ

‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ಮಯೂರಿ ‘ಕೃಷ್ಣ ಲೀಲಾ’, ‘ಇಷ್ಟಕಾಮ್ಯ’, ‘ರುಸ್ತುಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಟಿ ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 10 ವರ್ಷಗಳಿಂದ ಮಯೂರಿ ಮತ್ತು ಅರುಣ್ ಅವರು ಪ್ರೀತಿಸಿದ್ದು ಎರಡು ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆ ನೆರವೇರಿದೆ, ಬಹುಕಾಲದ ಗೆಳೆಯ ಅರುಣ್ ಐಟಿ ಉದ್ಯೋಗಿಯಾಗಿದ್ದು ಅಮೆರಿಕದಲ್ಲಿ ನೆಲೆಸಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಬಾಲ್ಯದಿಂದ ಸ್ನೇಹಿತರಾಗಿದ್ದು ಇಂದು ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ತೆಪ್ಪ ಮುಳುಗಿ ಇಬ್ಬರು ನಾಪತ್ತೆ

Fri Jun 12 , 2020
ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ನಿನ್ನೆ ಸಂಜೆ ಮೂವರು ಮೀನುಗಾರರು ತೆಪ್ಪದಲ್ಲಿ ಮೀನುಗಾರಿಕೆ ಮಾಡಲು ಹೋಗಿದ್ದರು ಇದೆ ವೇಳೆಯಲ್ಲಿ  ಭಾರಿ ಗಾಳಿ ಮಳೆ ಸುರಿದ ಕಾರಣ ನದಿಯಲ್ಲಿ ತೆಪ್ಪ ನೀರಿನ ವತಡ ತಡೆಯದೆ ತೆಪ್ಪ ನೀರಿನಲ್ಲಿ ಮುಳುಗಿದೆ.ಇದರಲ್ಲಿ ಇಬ್ಬರು ನಾಪತ್ತೆಯಾಗಿದ್ದರೆ. ಅಕ್ಷಯ ಲಮಾಣಿ (30), ಪರಶುರಾಮ ಲಮಾಣಿ ( 35 ) ರಮೇಶ ಲಮಾಣಿ ( 38 ) ಈ ಮೂವರಲ್ಲಿ ಇಬ್ಬರು ನದಿಯಲ್ಲಿ […]

Advertisement

Wordpress Social Share Plugin powered by Ultimatelysocial