ಕ್ರಿಕೆಟಿಗೆ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮುದ್ದಿನ ನಾಯಿ ಮರಿ ಬ್ರೂನೋ ಮೃತಪಟ್ಟಿದೆ. ತಮ್ಮ ಮುದ್ದಿನ ನಾಯಿ ಮರಿ ಸತ್ತಿರೋ ಬಗ್ಗೆ ಇನ್ ಸ್ಟಗ್ರಾಂನಲ್ಲಿ ಫೋಟೋ ಶೇರ್ ಮಾಡಿ ರೆಸ್ಟ್ ಇನ್ ಪೀಸ್ ಅಂತ ಕ್ಯಾಪಶನ್ ಕೊಟ್ಟಿದ್ದಾರೆ. ಈ ಹಿಂದೆ ವಿರುಷ್ಕಾ ಇನ್ ಸ್ಟಾದಲ್ಲಿ ಬ್ರೂನೋ ಜೊತೆ ಸಾಕಷ್ಟು ಸೆಲ್ಫಿ ಫೋಟೋಗಳನ್ನ ಹಾಕಿಕೊಂಡಿದ್ರು. ತಮ್ಮ ಬಿಡುವಿನ ವೇಳೆಯಲ್ಲಿ ಅದರ ಜೊತೆಗೆ ಕಳೆಯುತ್ತಿದ್ರು. ಆದ್ರೆ ಈಗ ಬ್ರೂನೋ ಮೃತಪಟ್ಟಿರೋದು ಅವರಿಗೆ ಅತೀವ ದುಃಖ ತಂದಿದೆ. ಅಲ್ಲದೆ ಇತ್ತೀಚೆಗೆ ವಿರುಷ್ಕಾ ಬೆಂಗಳೂರಿನಲ್ಲಿ 15 ಸ್ಟ್ರೀಟ್ ಡಾಗ್ ಗಳನ್ನ ದತ್ತು ಪಡೆದಿದ್ರು. ಪ್ರಾಣಿಗಳ ಬಗ್ಗೆ ತಮಗಿರೋ ಮಮಕಾರ ಎಂತಹದ್ದು ಅನ್ನೋದನ್ನ ತೋರಿಸಿದ್ರು. ಈಗ ಬ್ರೂನೋ ಇಲ್ಲದೆ ಮನೆ ಖಾಲಿಯಾಗಿದೆ ಅಂತ ಹೇಳಿಕೊಂಡಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳು ಕೂಡಾ ದುಃಖವನ್ನ ವ್ಯಕ್ತಪಡಿಸಿದ್ದಾರೆ.
ದುಃಖದ ಮಡುವಿನಲ್ಲಿ ವಿರುಷ್ಕಾ..1
Please follow and like us: