ಉಡುಪಿ: ಶ್ರೀಮಂತ ಮುಸ್ಲಿಂ ಮಹಿಳೆಯರು ಹಿಜಾಬ್ ಇಲ್ಲದೇ ಹೊರಹೋಗುತ್ತಾರೆ: ಶೋಭಾ ಕರಂದ್ಲಾಜೆ

ಮಣಿಪಾಲ: ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಧರ್ಮ ಇಲ್ಲ. ದಯವಿಟ್ಟು ಹೆಣ್ಣುಮಕ್ಕಳು ಕಾಲೇಜಿಗೆ ಬನ್ನಿ. ಪರೀಕ್ಷೆ ಬರೆಯಿರಿ ಮತ್ತು ನಿಮ್ಮ ಕಾಲ ಮೇಲೆ ನಿಲ್ಲಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಹಿಜಾಬ್ ದಾರಿ ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದ್ದಾರೆ.ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಳೊಂದಿಗೆ ಮಾತನಾಡಿದ ಅವರು ಹಿಜಾಬ್ ವಿವಾದದ ಹಿಂದೆ ಯಾವುದೋ ಸಂಘಟನೆಗಳು ಪಿತೂರಿ ನಡೆಸಿವೆ. ಇದನ್ನು ಹೈಕೋರ್ಟ್ ಕೂಡ ಹೇಳಿದೆ. ನಾನು ಗಮನಿಸಿದ ಹಾಗೆ ಶ್ರೀಮಂತ ಹೆಣ್ಣುಮಕ್ಕಳು ಹಿಜಾಬ್ ಇಲ್ಲದೆಯೂ ಹೊರ ಹೋಗುತ್ತಾರೆ. ಆದರೆ ಬಡ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಯೇ ಹೊರ ಕಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇದಕ್ಕೆಲ್ಲ ಕಿವಿಕೊಡದೇ ಎಲ್ಲರೂ ಕಾಲೇಜಿಗೆ ಬರಬೇಕು ಎಂದು ಹೇಳಿದ್ದಾರೆ. ಕೋರ್ಟ್ ತೀರ್ಪಿನ ನಂತರವೂ ಸಂವಿಧಾನಕ್ಕೆ ಅಗೌರವ ತೋರಿಸುವುದನ್ನು ಗಮನಿಸಿದ್ದೇವೆ. ಇಂಥವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಚಿವರು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಹಸೀಲ್ದಾರ್ ವರ್ಗಾವಣೆ ವಿಚಾರಕ್ಕೆ ಇಬ್ಬರು ಪ್ರಭಾವಿ ಸಚಿವರ ಕಿತ್ತಾಟ

Fri Mar 18 , 2022
ಬೆಂಗಳೂರು,ಮಾ.18- ತಹಸೀಲ್ದಾರ್ ಒಬ್ಬರ ವರ್ಗಾವಣೆ ಕುರಿತಂತೆ ಆಡಳಿತಾರೂಢ ಬಿಜೆಪಿ ಪಕ್ಷದ ಇಬ್ಬರು ಪ್ರಭಾವಿ ಸಚಿವರ ನಡುವೆ ಭಾರೀ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ವರ್ಗಾವಣೆಗೊಳಿಸಿ ಬೇರೊಬ್ಬರನ್ನು ನಿಯೋಜಿಸ ಬೇಕೆಂದು ರಾಮನಗರ ಜಿಲ್ಲಾ ಉಸ್ತುವಾರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್‍ಅವರು ಆರ್.ಅಶೋಕ್ ಅವರಲ್ಲಿ ಮನವಿ ಮಾಡಿದ್ದರು.ಈ ಸಂಬಂಧ ಅಶೋಕ್ ಅವರಿಗೆ ಪತ್ರವನ್ನೂ ನೀಡಿ, ಕೆಲವು ಆರೋಪಗಳು ಇರುವ […]

Advertisement

Wordpress Social Share Plugin powered by Ultimatelysocial