ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌

ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌

ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಪ್ರಕರಣದಲ್ಲಿ ಶೋಕಾಸ್ ನೋಟೀಸ್ ಒಂದನ್ನು ಹೊರಡಿಸಿರುವ ನೇಪಾಳ ಸುಪ್ರೀಂ ಕೋರ್ಟ್, 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವ ಈತನನ್ನು ಬಿಡುಗಡೆ ಮಾಡಬಾರದೇಕೆ ಎಂದು ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದೆ.

ಕೊಲೆ ಪ್ರಕರಣವೊಂದರಲ್ಲಿ ಜೀವಿತಾವಧಿಯ ಜೈಲು ಶಿಕ್ಷೆಗೆ ಗುರಿಯಾಗಿರುವ ಚಾರ್ಲ್ಸ್ ಶೋಭರಾಜ್ ಪರ ವಕೀಲರು ಆತನನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದು, ಆತನ ವಯಸ್ಸನ್ನು ಪರಿಗಣಿಸಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಶೋಭರಾಜ್‌ನನ್ನು ಏಕೆ ಬಿಡುಗಡೆ ಮಾಡಬಾರದು ಎಂಬ ಬಗ್ಗೆ ಮೂರು ದಿನಗಳ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಲು ಪರಮೋಚ್ಛ ನ್ಯಾಯಾಲಯ ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದೆ.

ಭಾರತ ಮತ್ತು ವಿಯೆಟ್ನಾಮೀಸ್ ಪೋಷಕರ ಪುತ್ರನಾದ ಫ್ರೆಂಚ್‌ಮನ್‌ ಶೋಭರಾಜ್, ನಕಲಿ ಪಾಸ್‌ಪೋರ್ಟ್ ಒಂದನ್ನು ಬಳಸಿಕೊಂಡು, 1975ರಲ್ಲಿ ನೇಪಾಳಕ್ಕೆ ಆಗಮಿಸಿ ಇಬ್ಬರು ಪ್ರವಾಸಿಗರನ್ನು ಕೊಂದಿದ್ದ. ಆ ವೇಳೆ ಶೋಭರಾಜ್, ಅಮೆರಿಕ ಪೌರ ಕೊನ್ನಿ ಯೋ ಬೊರೋಜ಼ಿ ಮತ್ತು ತನ್ನ ಗರ್ಲ್‌ಫ್ರೆಂಡ್ ಆಗಿದ್ದ ಕೆನಡಾದ ಲೌರೆಂಟ್ ಕರ‍್ರಿಯೆರ್‌ ಎಂಬ ಇಬ್ಬರನ್ನು ಕೊಂದಿದ್ದ.

ನೇಪಾಳದ ಕೆಸಿನೋ ಒಂದರ ಹೊರಗಡೆ ಸೆಪ್ಟೆಂಬ್‌ 1, 2003ರಲ್ಲಿ ಕಡೆಯ ಬಾರಿ ಕಾಣಿಸಿಕೊಂಡಿದ್ದ ಶೋಭರಾಜ್ ಬಂಧನವಾದ ಬಳಿಕ, 1975ರಲ್ಲಿ ಕಾಠ್ಮಂಡು ಮತ್ತು ಭಕ್ತಪುರದಲ್ಲಿ ಜೋಡಿಯನ್ನು ಕೊಂದಿದ್ದ ಆರೋಪದ ಮೇಲೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

ಸದ್ಯ ಕಾಠ್ಮಂಡು ಕೇಂದ್ರ ಕಾರಾಗೃಹದಲ್ಲಿ 21 ವರ್ಷಗಳ ಜೈಲುಶಿಕ್ಷೆ ಪೂರೈಸುತ್ತಿರುವ ಶೋಭರಾಜ್, ಕೆನಡಾ ಪ್ರಜೆಯನ್ನು ಕೊಂದ ಆರೋಪದ ಸಂಬಂಧ ತನಿಖೆ ಎದುರಿಸಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಮನೆಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿದ್ದಾರಾ? ಹಾಗಾದ್ರೆ, ಮಿಸ್‌ ಮಾಡ್ದೇ ಈ ಸ್ಟೋರಿ ಓದಿ..!

Fri Dec 24 , 2021
ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅಂಚೆ ಇಲಾಖೆಯು ವಿವಿಧ ರೀತಿಯ ಯೋಜನೆ(Post office scheme‌)ಗಳನ್ನ ನಡೆಸುತ್ತಿದೆ. ಅದ್ರಲ್ಲಿ ನಿಮ್ಮ ಅಗತ್ಯತೆಗಳು ಮತ್ತು ಹಣಕಾಸಿನ ಗುರಿಗಳಿಗೆ ಸೂಕ್ತವಾದ ಯೋಜನೆಯನ್ನ ಆರಿಸಿ. ನಂತ್ರ ನೀವು ಯೋಜನೆಗೆ ಸೇರುವುದರಿಂದ ಪ್ರಯೋಜನ ಪಡೆಯುತ್ತೀರಿ. ಹಾಗಾಗಿ ಯೋಜನೆಯ ಆಯ್ಕೆಯಲ್ಲಿ ನೀವು ಎಚ್ಚರಿಕೆ ವಹಿಸಬೇಕು. ಎರಡು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಂದ್ಹಾಗೆ, ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ(Monthly Income Plan) ಕೂಡ ಒಂದು. […]

Advertisement

Wordpress Social Share Plugin powered by Ultimatelysocial