ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ಬಳಿಕ ಸಂತಸ ಹಂಚಿಕೊಂಡ ರಿಷಿ ಸುನಕ್‌

ಬೆಂಗಳೂರು: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಭಾರತದೊಂದಿಗಿನ ಸಂಬಂಧದ ಬಗ್ಗೆ ಹೆಮ್ಮೆ ಇದೆ.

ಹೆಮ್ಮೆಯ ಹಿಂದೂವಾಗಿ ಭಾರತ ಮತ್ತು ಇಲ್ಲಿಯ ಜನರೊಂದಿಗೆ ಸದಾ ಸಂಪರ್ಕವನ್ನು ಇರಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಜಿ- 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಶನಿವಾರ ( ಸೆಪ್ಟೆಂಬರ್‌ 9) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ವೃದ್ಧಿಸುವ ಹಾಗೂ ಹೂಡಿಕೆ ಹೆಚ್ಚಿಸುವ ಯೋಜನೆಗಳ ಕುರಿತು ಸಮಾಲೋಚಿಸಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

ಇನ್ಮುಂದೆ ರೈಲು ಚಾಲಕರು ನಿದ್ರೆ ಮಾಡಿದ್ರೆ ಎಚ್ಚರಿಸುತ್ತೆ AI ಮಿಷನ್...!

Sun Sep 10 , 2023
ನವದೆಹಲಿ: ಈಶಾನ್ಯ ಫ್ರಾಂಟಿಯರ್ ರೈಲ್ವೇ (NFR) ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ಅಭಿವೃದ್ಧಿಪಡಿಸುತ್ತಿದೆ.ಇದು ಚಾಲಕರ ಮಿಟುಕಿಸುವ ಕಣ್ಣುಗಳನ್ನು ಓದಲು ಮತ್ತು ಅವರಿಗೆ ಎಚ್ಚರಿಕೆ ನೀಡಲು ಅಥವಾ ಅವರಿಗೆ ನಿದ್ರೆ ಬಂದರೆ ರೈಲನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜೂನ್‌ನಲ್ಲಿ, ರೈಲ್ವೆ ಮಂಡಳಿಯು ಕಣ್ಣು ಮಿಟುಕಿಸುವ ಆಧಾರದ ಮೇಲೆ ರೈಲು ಚಾಲಕರ ಜಾಗರೂಕತೆಯನ್ನು ಪತ್ತೆಹಚ್ಚುವ ಸಾಧನವನ್ನು ಅಭಿವೃದ್ಧಿಪಡಿಸಲು NFR ಗೆ ಕೇಳಿಕೊಂಡಿತ್ತು. ರೈಲ್ವೇ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (RDAS) ಚಾಲಕನು […]

Advertisement

Wordpress Social Share Plugin powered by Ultimatelysocial