ದೇಶಕ್ಕೆ ೪೦ ಪದಕ ತಂದ್ಕೊಟ್ಟ ಖೋ ಖೋ ತಂಡದ ನಾಯಕಿ ಊಟಕ್ಕಿರದೆ ಪರದಾಟ!!

ನವದೆಹಲಿ : ಭಾರತ ಖೋ ಖೋ ತಂಡದ ನಾಯಕಿ ಲಾಕ್‌ಡೌನ್‌ನಿಂದಾಗಿ ಆಹಾರ ಸಮಸ್ಯೆ ಎದುರಿಸುತ್ತಿದ್ದು, ನೆರವಿಗೆ ಬರುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೌತ್ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ನಾಯಕಿ ನಸ್ರೀನ್ ಶೇಖ್ ತಮ್ಮ ಅಸಹಾಯಕತೆಯನ್ನು ವಿಡಿಯೋ ಮೂಲಕ ಹೊರ ಹಾಕಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಪಾತ್ರೆಗಳ ಮಾರಾಟ ಮಾಡುತ್ತಿದ್ದ ಅವರ ತಂದೆ ಮೊಹಮ್ಮದ್ ಗಫೋರ್ ವ್ಯಾಪಾರವಿಲ್ಲದೆ ಮನೆಯಲ್ಲಿದ್ದಾರೆ. ಇದರಿಂದ ಹಣಕಾಸಿನ ಸಮಸ್ಯೆ ಜೊತೆಗೆ ಆಹಾರ ಸಮಸ್ಯೆಯೂ ತಲೆದೂರಿರುವುದಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಾನು ಕಠಿಣ ಪರಿಶ್ರಮದಿಂದ ಖೋ ಖೋದಲ್ಲಿ ಚಿನ್ನ ಗೆದ್ದು ದೇಶ ಹೆಮ್ಮೆ ಪಡುವಂತೆ ಮಾಡಿದ್ದೆ. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಕುಟುಂಬ ನಲುಗಿದೆ. ಹೊಟ್ಟೆ ತುಂಬಾ ಊಟವಿಲ್ಲದೆ ನರಳಾಡುತ್ತಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಸೌತ್ ಏಷ್ಯನ್ ಗೇಮ್ಸ್ ಅಲ್ಲದೆ ನಸ್ರೀನ್ ನಾಯಕತ್ವದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ಕೂಡ ಭಾರತ ಗೆದ್ದಿತ್ತು. ಇಷ್ಟೇ ಅಲ್ಲ, ಒಟ್ಟು ೪೦ ಚಾಂಪಿಯನ್‌ಶಿಪ್‌ಗಳನ್ನು ಭಾರತಕ್ಕೆ ನಸ್ರೀನ್ ತಂದುಕೊಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಲಾಕ್ ಡೌನ್ ಮಧ್ಯೆ ಒಂದು ಪ್ರೇಮ್ ಕಹಾನಿ

Wed Apr 29 , 2020
ಘಾಜಿಯಾಬಾದ್ (ಉತ್ತರ ಪ್ರದೇಶ): ಕೊರೊನಾ ಲಾಕ್‌ಡೌನ್ ಮಧ್ಯೆ ಕೆಲವೆಡೆ ಕುತೂಹಲಕಾರಿ ಘಟನಾವಳಿಗಳು ನಡೆಯುತ್ತಿವೆ. ಘಾಜಿಯಾಬಾದ್‌ನಲ್ಲಿ ಯುವಕನೊಬ್ಬ ರೇಷನ್, ತರಕಾರಿ ತೆಗೆದುಕೊಂಡು ಬರುವುದಾಗಿ ಸುಳ್ಳು ಹೇಳಿ ಮನೆಯಿಂದ ಹೊರಹೋಗಿ ನವವಿವಾಹಿತನಾಗಿ ಪತ್ನಿ ಜತೆ ವಾಪಸ್ಸಾಗಿದ್ದಾನೆ. ಗ್ರಾಮದ ಯುವಕ ಪಕ್ಕದ ಗ್ರಾಮದ ಯುವತಿಯನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದನಂತೆ. ಲಾಕ್‌ಡೌನ್ ವಿಸ್ತರಿಸುವ ಕಾರಣ ಅನ್ಯ ದಾರಿ ಕಾಣದೆ ಗೆಳೆಯರ ಸಮ್ಮುಖದಲ್ಲಿ ಸರಳ ವಿವಾಹಕ್ಕೆ ಆತ ನಿರ್ಧರಿಸಿದ್ದ. ಹಾಗೆಯೇ ಅಕ್ಕಿ ಕಾಳು, ತರಕಾರಿ ಅಂತ […]

Advertisement

Wordpress Social Share Plugin powered by Ultimatelysocial