ದೊಡ್ಡ ಪ್ರಮಾಣದಲ್ಲಿ ಏರುತ್ತಿರುವ ರಿಲಯನ್ಸ್ ಷೇರಿನ ಬೆಲೆ

ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ಶ್ರೀಮಂತಿಕೆ ದಿನೇದಿನೇ ಏರುತ್ತಿದೆ. ವಿಶ್ವದ ೧೩ ಕಂಪನಿಗಳು ಆ ರಿಲಯನ್ಸ್ನಲ್ಲಿ ಹೂಡಿಕೆ ಮಾಡಿದ್ದರಿಂದ, ರಿಲಯನ್ಸ್ ಷೇರಿನ ಬೆಲೆ ದೊಡ್ಡ ಪ್ರಮಾಣದಲ್ಲಿ ಏರುತ್ತಿದೆ. ಈಗ ಮುಕೇಶ್ ವಿಶ್ವವಿಖ್ಯಾತ ಉದ್ಯಮಿ ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ ವಿಶ್ವದ ೫ನೇ ಶ್ರೀಮಂತ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಮುಕೇಶ್ ಸಂಪತ್ತಿನ ಮೌಲ್ಯ ೭೫.೧ ಬಿಲಿಯನ್ ಡಾಲರ್. ಅವರು ಈಗ ಫೇಸ್‌ಬುಕ್ ಮಾಲಿಕ ಮಾರ್ಕ್ ಜುಕರ್ ಬರ್ಗ್ ನಂತರದ ಸ್ಥಾನದಲ್ಲಿದ್ದಾರೆ.

ಜುಕರ್‌ಬರ್ಗ್ ಸಂಪತ್ತಿನ ಮೌಲ್ಯ ೮೯ ಬಿಲಿಯನ್ ಡಾಲರ್. ವಾರೆನ್ ಬಫೆಟ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲೇ ಇದ್ದರು. ಆದರೆ ಅವರು ೨೦೦೬ರಿಂದ ತಮ್ಮ ಮಾಲಿಕತ್ವದ ಬರ್ಕ್ ಶೈರ್ ಹ್ಯಾಥ್‌ವೇನ ೩೭ ಬಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಸಾಮಾಜಿಕ ಕೆಲಸಗಳಿಗೆ ದಾನ ಮಾಡುತ್ತಿದ್ದಾರೆ. ಆದ್ದರಿಂದ ಅವರ ಶ್ರೀಮಂತಿಕೆ ಕುಸಿದಿದೆ. ಇನ್ನು ಅಗ್ರಸ್ಥಾನದಲ್ಲಿ ಅಮೆಜಾನ್ ಮಾಲಿಕ ಜೆಫ್ ಬಿಜೋಸ್ ಅವರೇ ಮುಂದುವರಿದಿದ್ದಾರೆ. ಅವರ ಸಂಪತ್ತಿನ ಮೌಲ್ಯ ೧೮೫.೮ ಬಿಲಿಯನ್ ಡಾಲರ್.

Please follow and like us:

Leave a Reply

Your email address will not be published. Required fields are marked *

Next Post

ಹೊಸದಾಗಿ ೪೯,೩೧೦ ಮಂದಿಗೆ ಸೋಂಕು ದೃಢ

Fri Jul 24 , 2020
ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಹೊಸದಾಗಿ 49,310 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,87,945 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 740 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 30,601 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ12,87,945 ಮಂದಿ ಸೋಂಕಿತರ ಪೈಕಿ  4,40,135 ಸಕ್ರಿಯ ಪ್ರಕರಣಗಳಿವೆ ಮತ್ತು […]

Advertisement

Wordpress Social Share Plugin powered by Ultimatelysocial