ಆಯುಷ್ಮಾನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಸಲಹೆ

ಗುಡಿಬಂಡೆ: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗಾಗಿ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ 5 ಲಕ್ಷದ ವರೆಗೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದ್ದು, ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಸಲಹೆ ನೀಡಿದರು.ಪಟ್ಟಣದ ಮಾರುತಿ ಸರ್ಕಲ್ ಬಳಿಕ ಆರೋಗ್ಯ ಇಲಾಖೆ ಹಾಗೂ ಗೌತಮಬುದ್ದ ಕಲಾತಂಡದ ವತಿಯಿಂದ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ಆರೋಗ್ಯವಾಗಿರಲು ನಾವೆಲ್ಲರೂ ಆರೋಗ್ಯದಿಂದ ಬದುಕಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಅತಿ ಮುಖ್ಯವಾಗಿ ಬೇಕಿದೆ. ಈ ಹಿನ್ನೆಲೆಯಲ್ಲಿ ಬಡವರ್ಗದ ಜನತೆಗೆ ಆರೋಗ್ಯದ ಸಮಸ್ಯೆಯಾದಾಗ ಚಿಕಿತ್ಸೆ ಪಡೆಯಲು ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬದವರು ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇನ್ನೂ ಈ ಆಯುಷ್ಮಾನ್ ಆರೋಗ್ಯ ಕಾರ್ಡ್ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಉಚಿತವಾಗಿ ಮಾಡಿಕೊಡಲಾಗುತ್ತದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ನೊಂದಣಿ ಮಾಡಿಕೊಂಡು ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಇನ್ನೂ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಕಛೇರಿಗಳಲ್ಲಿ ಆಚರಿಸುವುದಕ್ಕಿಂತ ಸಾರ್ವಜನಿಕವಾಗಿ ಆಚರಿಸಿದರೇ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಮಾಹಿತಿ ಮುಟ್ಟುತ್ತದೆ ಎಂಬ ದೃಷ್ಟಿಯಿಂದ ಮಾರುತಿ ಸರ್ಕಲ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದ ಅಂಗವಾಗಿ ಗೌರಿಬಿದನೂರು ಮೂಲದ ಗೌತಮಬುದ್ದ ಕಲಾತಂಡದ ವತಿಯಿಂದ ಆಯುಷ್ಮಾನ್ ಭಾರತ ಯೋಜನೆಯ ಕುರಿತು ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಲಾಯಿತು. ಈ ವೇಳೆ ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಗುಡಿಬಂಡೆ ಪಟ್ಟಣದ ಮಾರುತಿ ಸರ್ಕಲ್ ಬಳಿ ನಡೆದ ಆಯುಷ್ಮಾನ್ ಭಾರತ್ ಯೋಜನೆಯ ಬೀದಿ ನಾಟಕ ಕಾರ್ಯಕ್ರಮದಲ್ಲಿ ಟಿಹೆಚ್‍ಒ ಡಾ.ನರಸಿಂಹಮೂರ್ತಿ ಮಾತನಾಡಿದರು.

Please follow and like us:

Leave a Reply

Your email address will not be published. Required fields are marked *

Next Post

ಆಮ್ಲೆಟ್​ ಸೀದು ಹೋಗಿದೆ ಎಂದ ಗ್ರಾಹಕನಿಗೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

Fri Dec 17 , 2021
Crime News Today: ಆಮ್ಲೆಟ್ ಮಾರಾಟಗಾರನೊಬ್ಬ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆಮುಂಬೈ: ರಸ್ತೆ ಬದಿಯ ಸಣ್ಣ ಹೋಟೆಲ್​ಗೆ ಹೋದ ಗ್ರಾಹಕನೊಬ್ಬ ಆಮ್ಲೆಟ್ ಆರ್ಡರ್ ಮಾಡಿದ. ತನಗೆ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ಆತ ರೇಗಾಡಿದ್ದರಿಂದ ಕೋಪಗೊಂಡ ಆ ಅಂಗಡಿಯ ಮಾಲೀಕ ಆ ಗ್ರಾಹಕನ ತಲೆಗೆ ಬಿಸಿಯಾದ ಬಾಣಲೆಯಿಂದ ಹೊಡೆದಿರುವ ಘಟನೆ […]

Advertisement

Wordpress Social Share Plugin powered by Ultimatelysocial