ಕೊರೊನಾ ಸಾವಿನ ಸಂಖ್ಯೆ ಹೆಚ್ಚಳ ಕರ್ನಾಟಕದಲ್ಲಿ ದಿನ ಕ್ಕೆ 461 ಮಂದಿ ಕೊವಿಡ್​ಗೆ ಬಲಿ !

100 ಕೊರೊನಾ ಸಾವಿನ ಪೈಕಿ 8 ಮಂದಿ ಮನೆಯಲ್ಲೇ ಸಾವಿಗೀಡಾಗುತ್ತಿದ್ದಾರೆ. ಈ ಸಾವಿನಲ್ಲಿ ಬಹುತೇಕ ಮಂದಿ ಹಿರಿಯ ವಯಸ್ಕರಾಗಿದ್ದರೆ. ಮನೆಯಲ್ಲೇ ಕೊರೊನಾಗೆ ಬಲಿಯಾಗುತ್ತಿರಲು ಕಾರಣ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೊರೊನಾ  ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ.ಆದರೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಭೀತಿಗೆ ಕಾರಣವಾಗಿದೆ. ಕಳೆದ ಹತ್ತು ದಿನದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಜನವರಿ 22 ರಿಂದ 31ರ ವರೆಗೆ ಕರ್ನಾಟಕದಲ್ಲಿ  ಸುಮಾರು 461 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 39 ಮಂದಿ ಚಿಕತ್ಸೆಗೆ ಮುನ್ನವೇ ಕೊರೊನಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. 39 ಸಾವಿನ ಪೈಕಿ, 32 ಮಂದಿ ಮನೆಯಲ್ಲೇ ಸಾವಿಗೀಡಾಗಿದ್ದಾರೆ. ಇನ್ನು 7 ಮಂದಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.ಸಾವಿನ ಪೈಕಿ 8 ಮಂದಿ ಮನೆಯಲ್ಲೇ ಸಾವಿಗೀಡಾಗುತ್ತಿದ್ದಾರೆ. ಈ ಸಾವಿನಲ್ಲಿ ಬಹುತೇಕ ಮಂದಿ ಹಿರಿಯ ವಯಸ್ಕರಾಗಿದ್ದರೆ. ಮನೆಯಲ್ಲೇ ಕೊರೊನಾಗೆ ಬಲಿಯಾಗುತ್ತಿರಲು ಕಾರಣ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸದೇ ಇರುವುದು ಮನೆಯಲ್ಲಿ ಮೃತಪಡುತ್ತಿದ್ದಾರೆ. ರೋಗ ಲಕ್ಷಣಗಳು ಇದ್ದರೂ ಕೊವಿಡ್ ಟೆಸ್ಟ್​ಗೆ ಮುಂದಾಗುತ್ತಿಲ್ಲ. ದೇಶದಲ್ಲಿ 24 ಗಂಟೆಯಲ್ಲಿ 1,61,386 ಕೊವಿಡ್ ಕೇಸ್ ಪತ್ತೆಯಾಗಿದ್ದು, 24 ಗಂಟೆಯಲ್ಲಿ 1,733 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. 24 ಗಂಟೆಯಲ್ಲಿ 2,81,109 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಭಾರತದಲ್ಲಿ 16,21,603 ಕೊವಿಡ್ ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಪ್ರತಿನಿತ್ಯದ ಕೊವಿಡ್ ಪಾಸಿಟಿವಿಟಿ ದರ ಶೇ.9.26 ಇದೆ. 167.29 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.ಮಹಾಮಾರಿ ಕೊರೊನಾ ಬೆಂಗಳೂರು ಶಾಲಾ ಮಕ್ಕಳ ಶಿಕ್ಷಣಕ್ಕೆ ಬರೆಯಿಟ್ಟಿದೆ. ಕೊರೊನಾ ಕಾಟದಿಂದ ಶಾಲೆಗಳಲ್ಲಿ ಶಿಕ್ಷಣ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಆದರೆ ಇಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಶಿಕ್ಷಣ ಇಲಾಖೆಗೆ ಅರ್ಧಕ್ಕೆ ಶಾಲೆಬಿಟ್ಟ ಮಕ್ಕಳ ಪತ್ತೆ ಟೆನ್ಷನ್ ಶುರುವಾಗಿದೆ. ಶಾಲೆ ಬಿಟ್ಟವರ ಪೈಕಿ ಅರ್ಧಕ್ಕಿಂತ ಕಡಿಮೆ ಮಕ್ಕಳು ಮಾತ್ರ ಶಾಲೆಗೆ ವಾಪಸ್ ಆಗಿದ್ದಾರೆ. ಇನ್ನು ಉಳಿದವರನ್ನು ಮತ್ತೆ ಶಾಲೆಗೆ ಕರೆತರುವುದು ದೊಡ್ಡ ಸವಾಲಾಗಿದೆ. ಕೊರೊನಾ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಮಕ್ಕಳ ಸುರಕ್ಷತೆಗಾಗಿ ಶಾಲೆಗಳನ್ನು ಬಂದ್ ಮಾಡಿಸಿತ್ತು. ಸದ್ಯ ಕೊರೊನಾ ಕಡಿಮೆಯಾದ ಹಿನ್ನೆಲೆ ಮತ್ತೆ ಶಾಲೆಗಳನ್ನು ತೆರೆಯಲಾಗಿದೆ. ಆದ್ರೆ ಮಕ್ಕಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅನೇಕ ಮಕ್ಕಳು ಶಾಲೆಗಳ ಮೇಲೆ ಒಲವು ಕಳೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಐಶ್ವರ್ಯಾ ರಜನಿಕಾಂತ್ ಅವರಿಗೆ ಕೋವಿಡ್-19 ಪಾಸಿಟಿವ್;

Wed Feb 2 , 2022
ಫೆಬ್ರವರಿ 1 ರಂದು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ ಅಭಿಮಾನಿಗಳಿಗೆ ಕೊರೊನಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ತಿಳಿಸಲು Instagram ಗೆ ಕರೆದೊಯ್ದರು. ತನ್ನ ಫೋಟೋವನ್ನು ಹಂಚಿಕೊಂಡ ಐಶ್ವರ್ಯಾ, ಚಿಕಿತ್ಸೆಗಾಗಿ ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಬಹಿರಂಗಪಡಿಸಿದರು. COVID-19 ಕುರಿತು ಎಲ್ಲಾ ಇತ್ತೀಚಿನ ನವೀಕರಣಗಳನ್ನು ಇಲ್ಲಿ ಓದಿ. ಚಲನಚಿತ್ರ ನಿರ್ಮಾಪಕರು ಹೈದರಾಬಾದ್‌ನಲ್ಲಿ ಪ್ರೇಮಿಗಳ ದಿನದಂದು ಬಿಡುಗಡೆಯಾಗಬೇಕಿದ್ದ ಸಂಗೀತ ವೀಡಿಯೊದಲ್ಲಿ ಕೆಲಸ ಮಾಡುತ್ತಿದ್ದಾರೆ. ಐಶ್ವರ್ಯ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಐಶ್ವರ್ಯ ರಜಿನಿಕಾಂತ್ […]

Advertisement

Wordpress Social Share Plugin powered by Ultimatelysocial