ನಕಲಿ ಟಿವಿ ಮಾರಾಟ-ಆರೋಪಿ ಅಂದರ್

ಸಾಧಾರಣ ಟಿವಿಗಳಿಗೆ ಪ್ರತಿಷ್ಠಿತ ಬ್ರ‍್ಯಾಂಡ್ ಕಂಪನಿಯ ಸ್ಟಿಕರ್ ಅಂಟಿಸಿ ಮಾರಾಟ ಮಾಡುತ್ತಿದ್ದ ಖದೀಮನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಸುರೇಶ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಸಾಧಾರಣ ಟಿವಿಗಳನ್ನ ಖರೀದಿ ಮಾಡಿ ಅದಕ್ಕೆ ಸೋನಿ ಕಂಪನಿ, ಸ್ಯಾಂಮ್ ಸಂಗ್ ಕಂಪನಿ ಸ್ಟಿಕರ್‌ಗಳನ್ನ ಅಂಟಿಸಿ ಅಸಲಿ ಟಿವಿಗಳಂತೆ ಬಿಂಬಿಸಿ ಅಧಿಕ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವಿಚಾರ ತಿಳಿದು ಕಂಪನಿ ಅವರು, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಬಿ ಪೊಲೀಸರು ದೂರಿನ ಆಧಾರದ ಮೇರೆಗೆ ತಂಡ ರಚನೆ ಮಾಡಿ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿAದ ೧೫ ಟಿವಿ, ೭೫ ಸಾವಿರ ರೂ. ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಮಿಕರಿಗಾಗಿ ಎರಡು-ಮೂರು ಬಿಲ್ ಮಂಡನೆ- ಸಚಿವ ಶಿವರಾಮ್ ಹೆಬ್ಬಾರ್

Tue Jul 7 , 2020
ಬಡವರ ಪರವಾಗಿ ಕೆಲಸ ಮಾಡಬೇಕಾದರೆ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಕೊರೊನಾ ತುರ್ತು ಸಂದರ್ಭದಲ್ಲಿ ಅಭಿವೃದ್ದಿ ಕೆಲಸಗಳು ಕುಂಟಿತವಾಗಬಾರದು. ಸಾರ್ವಜನಿಕರು ಕೊರೊನಾ ಜೊತೆ ಜೊತೆಗೆ ಬದುಕುವುದನ್ನು ಕಲಿಯಬೇಕು. ಕೋವಿಡ್-೧೯ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಕೊಡುವ ಪರಿಹಾರ ಧನ ಅರ್ಹ ಫಲಾನುಭವಿಗಳಿಗೆ ತಲುಪಬೇಕು […]

Advertisement

Wordpress Social Share Plugin powered by Ultimatelysocial