ನಟಿ ಮದುವೆ ವಿಚಾರದಲ್ಲಿ ವಂಚನೆ ಪ್ರಕರಣ

ಮದುವೆ  ಹೆಸರಿನಲ್ಲಿ  ವಂಚನೆ  ಪ್ರಕರಣಕ್ಕೆ  ಸಂಬಂಧಿಸಿದಂತೆ  ಮಾಲಿವುಡ್​  ನಟಿ  ಶಾಮ್ನಾ ಕಾಸಿಂ  ಕೊನೆಗೂ  ಮೌನ  ಮುರಿದಿದ್ದಾರೆ. ಮಾಧ್ಯಮ  ಸಂದರ್ಶನವೊಂದರಲ್ಲಿ  ಮಾತನಾಡಿರುವ ಶಾಮ್ನಾ, ನಾನು  ಶೂಟಿಂಗ್​ನಲ್ಲಿ  ಬಿಜಿಯಾಗಿರುವ  ಸಮಯದಲ್ಲಿ  ನನ್ನ  ಕುಟುಂಬ  ನನಗೆ ಮದುವೆ  ಮಾಡಲು  ವರ  ಹುಡುಕುತ್ತಿದ್ದರು. ಇದೇ  ವೇಳೆ  ವರನ  ಕುಟುಂಬ  ಎಂದು ಹೇಳಿಕೊಂಡು ವಂಚಕರ  ಜಾಲವೊಂದು  ನಮ್ಮ  ಕುಟುಂಬವನ್ನು  ಸಂಪರ್ಕಿಸಿತು. ಆರಂಭದಲ್ಲಿ ಎಲ್ಲವೂ  ಸರಿಯಾಗಿತ್ತು. ನಂತರದ  ದಿನಗಳಲ್ಲಿ  ಅವರು  ನೀಡಿರುವ  ಫೋಟೋ, ಹೆಸರು  ಹಾಗೂ ವಿಳಾಸ  ನಕಲಿ  ಎಂದು  ತಿಳಿಯಿತು. ಇದರಲ್ಲಿ  ಭಾಗಿಯಾಗಿರುವ  ಎಲ್ಲ  ಆರೋಪಿಗಳನ್ನು  ಸದ್ಯ ಬಂಧಿಸಲಾಗಿದ್ದು, ಅವರೆಲ್ಲರಿಗೂ  ಈಗಾಗಲೇ  ಮದುವೆಯಾಗಿದ್ದು, ಮಕ್ಕಳು  ಸಹ  ಇದ್ದಾರೆ. ಆರೋಪಿಗಳು  ನನಗೆ  ಮತ್ತು  ನನ್ನ  ಕುಟುಂಬಕ್ಕೆ  ವಂಚನೆ  ಮಾಡಿದರು. ಬಹುಶಃ  ಈ  ಕೆಟ್ಟ ಕ್ಷಣವನ್ನು  ನಾನು  ಮರೆಯಬಹುದು. ಆದರೆ,  ಇದೇ  ಅನುಭವ  ಹೊಂದಿದ  ಕೆಲ  ಯುವತಿಯರು ಮಾನಸಿಕವಾಗಿ  ಕುಗ್ಗಿ  ಆತ್ಮಹತ್ಯೆ  ಮಾಡಿಕೊಂಡವರ  ಪರಿಸ್ಥಿತಿ  ಏನೆಂಬುದು  ನನಗೆ ಅರ್ಥವಾಗುತ್ತಿದೆ.

 

 

 

Please follow and like us:

Leave a Reply

Your email address will not be published. Required fields are marked *

Next Post

ರುದ್ರಿಗೆ ಮತ್ತೊಂದು ಪ್ರಶಸ್ತಿ

Thu Jul 16 , 2020
ಈ ಹಿಂದೆ ಇಟಲಿಯ ಓನಿರೋಸ್ ಚಿತ್ರೋತ್ಸವದಲ್ಲಿ ‘ರುದ್ರಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಪಾವನಾ ಗೌಡ, ಇದೀಗ ಠ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಎರಡು ಪ್ರಶಸ್ತಿಗಳನ್ನು ಈ ಚಿತ್ರೋತ್ಸವದಲ್ಲಿ ಚಿತ್ರ ಪಡೆದುಕೊಂಡಿದೆ. ಕಡೆ ಚಿತ್ರವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷದ ವಿಷಯವಾದರೆ, ಇನ್ನೊಂದು ಕಡೆ ನಮ್ಮವರಿಗೆ ಈ ಚಿತ್ರ ತೋರಿಸಲಾಗುತ್ತಿಲ್ಲ ಎಂಬ ಬೇಸರವೂ ಇದೆ ಎನ್ನುತ್ತಾರೆ ಪಾವನಾ. ಈ […]

Advertisement

Wordpress Social Share Plugin powered by Ultimatelysocial