ರುದ್ರಿಗೆ ಮತ್ತೊಂದು ಪ್ರಶಸ್ತಿ

ಈ ಹಿಂದೆ ಇಟಲಿಯ ಓನಿರೋಸ್ ಚಿತ್ರೋತ್ಸವದಲ್ಲಿ ‘ರುದ್ರಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಪಾವನಾ ಗೌಡ, ಇದೀಗ ಠ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಎರಡು ಪ್ರಶಸ್ತಿಗಳನ್ನು ಈ ಚಿತ್ರೋತ್ಸವದಲ್ಲಿ ಚಿತ್ರ ಪಡೆದುಕೊಂಡಿದೆ. ಕಡೆ ಚಿತ್ರವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷದ ವಿಷಯವಾದರೆ, ಇನ್ನೊಂದು ಕಡೆ ನಮ್ಮವರಿಗೆ ಈ ಚಿತ್ರ ತೋರಿಸಲಾಗುತ್ತಿಲ್ಲ ಎಂಬ ಬೇಸರವೂ ಇದೆ ಎನ್ನುತ್ತಾರೆ ಪಾವನಾ. ಈ ಕುರಿತು ಮಾತನಾಡಿದ ಅವರು, ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇತ್ತು. ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಇದು ನಮ್ಮ ಸಮಾಜದ, ನಮ್ಮ ಸೊಗಡಿನ ಸಿನಿಮಾ. ಹಾಗಾಗಿ ಅವರಿಗೆ ಇನ್ನೂ ತಲುಪಿಲ್ಲ ಎಂಬ ಬೇಸರವಿದೆ. ಆದರೆ, ಚಿತ್ರಕ್ಕೆ ಇಷ್ಟೆಲ್ಲ ಮನ್ನಣೆ ಸಿಗುತ್ತಿರುವುದರಿಂದ, ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಭರವಸೆ ಮತ್ತು ನಿರೀಕ್ಷೆಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಪಾವನಾ.

Please follow and like us:

Leave a Reply

Your email address will not be published. Required fields are marked *

Next Post

ಸಿ.ವಿ ರಾಮನ್  ಆಸ್ಪತ್ರೆಯಲ್ಲಿ  ಡಾ.ಕೆ.ಸುಧಾಕರ್

Thu Jul 16 , 2020
ವೈದ್ಯಕೀಯ  ಶಿಕ್ಷಣ  ಸಚಿವ  ಡಾ. ಕೆ. ಸುಧಾಕರ್  ಅವರು  ಇಂದಿರಾನಗರದಲ್ಲಿರುವ  ಸಿವಿ ರಾಮನ್  ಸಾರ್ವಜನಿಕ  ಆಸ್ಪತ್ರೆಗೆ  ಭೇಟಿ  ನೀಡಿದರು. ಆಸ್ಪತ್ರೆಯಲ್ಲಿ  ಕೋವಿಡ್  ರೋಗಿಗಳ  ಚಿಕಿತ್ಸೆ, ಸೌಲಭ್ಯಗಳ  ಪರಿಶೀಲನೆ  ನಡೆಸಿದರು. ವೈದ್ಯರು, ಸಿಬ್ಬಂದಿ  ಬಳಿ ಮಾಹಿತಿ  ಪಡೆದು ಸಮಾಲೋಚನೆ  ನಡೆಸಿ, ಸಲಹೆ  ನೀಡಿದರು. ನಂತರ  ಕೋವಿಡ್  ರೋಗಿಗಳ  ಜತೆ  ವಿಡಿಯೋ ಸಂವಾದ  ನಡೆಸಿದ  ಸಚಿವರು  ಮಾಹಿತಿ  ಪಡೆದರು. ಲಘು  ರೋಗ ಲಕ್ಷಣ  ಇರುವವರನ್ನು ದಾಖಲು  ಮಾಡಿರುವ  ಬಗ್ಗೆ ಅಧಿಕಾರಿಗಳನ್ನು  ತರಾಟೆ  ತೆಗೆದುಕೊಂಡರು. […]

Advertisement

Wordpress Social Share Plugin powered by Ultimatelysocial