ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಭರ್ಜರಿ ದಾಖಲೆ ಬರೆದ ಜೇಸನ್ ಹೋಲ್ಡರ್

ಬಾರ್ಬಡೋಸ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ವೇಗಿ ಜೇಸನ್ ಹೋಲ್ಡರ್ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ದಾಖಲೆ ಬರೆದರುಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವು 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಈ ಮೂಲಕ 17 ರನ್ ಗಳ ಅಂತರದ ಜಯ ಸಾಧಿಸಿತು.ವಿಂಡೀಸ್ ಪರ ಕೈರನ್ ಪೊಲಾರ್ಡ್ 41 ರನ್, ರೋಮನ್ ಪೊವೆಲ್ 35 ರನ್, ಬ್ರಾಂಡನ್ ಕಿಂಗ್ 34 ರನ್ ಮತ್ತು ಮೇಯರ್ಸ್ 31 ರನ್ ಗಳಿಸಿದರು. ಆದಿಲ್ ರಶೀದ್ ಮತ್ತು ಲಿವಿಂಗ್ಟಸನ್ ತಲಾ ಎರಡು ವಿಕೆಟ್ ಪಡೆದರು.ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಜೇಮ್ಸ್ ವಿನ್ಸ್ 55 ರನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ 41 ರನ್ ಗಳಿಸಿ ಆಧರಿಸಿದರು. ಟಾಮ್ ಬ್ಯಾಂಟನ್ 16 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆ 20 ರನ್ ಅಗತ್ಯವಿತ್ತು. ಜೇಸನ್ ಹೋಲ್ಡರ್ ಕೇವಲ ಒಂದು ರನ್ ನೀಡಿ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದರು.

ಜನರ ಮೇಲೆ ಹರಿದ ಎಲೆಕ್ಟ್ರಿಕ್ ಬಸ್: 6 ಮಂದಿ ದುರ್ಮರಣ, ಹಲವರಿಗೆ ಗಾಯಐದು ಪಂದ್ಯಗಳ ಸರಣಿಯನ್ನು ವೆಸ್ಟ್ ಇಂಡೀಸ್ ತಂಡ 3-2 ಅಂತರದಿಂದ ವಶಪಡಿಸಿಕೊಂಡಿತು. ಜೇಸನ್ ಹೋಲ್ಡರ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Please follow and like us:

Leave a Reply

Your email address will not be published. Required fields are marked *

Next Post

ಮೆಂತೆ ಉಪಯೋಗುಸಿ "ಸೌಂದರ್ಯ" ಹೆಚ್ಚಿಸಿಕೊಳ್ಳಿ

Mon Jan 31 , 2022
ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ.ಯಾವುದೋ ಕೆಮಿಕಲ್ ಇರುವ ಕ್ರೀಮ್ ಹಚ್ಚುವ ಬದಲು, ನಿಮ್ಮ ಮನೆಯಲ್ಲೇ ಇರುವ ಮೆಂತೆ ಕಾಳುಗಳಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.50 ಗ್ರಾಂ ಮೆಂತೆ ಕಾಳನ್ನು ರಾತ್ರಿ ನೆನಸಿಡಿ. ಬೆಳಗ್ಗೆ ಎದ್ದು ಅದರಲ್ಲಿನ ನೀರನ್ನ ತೆಗೆಯಿರಿ. ಆದ್ರೆ ಆ ನೀರನ್ನು ಚೆಲ್ಲಬಾರದು. ಈ ಮೆಂತೆ […]

Advertisement

Wordpress Social Share Plugin powered by Ultimatelysocial