iPhone 14 Pro ರೀತಿಯಲ್ಲೇ ಇರುವ ಈ ಹೊಸ ಸ್ಮಾರ್ಟ್‌ಫೋನ್ ಬೆಲೆ 10,000 ರೂ. ಮಾತ್ರ!

ಆಪಲ್ ಕಂಪೆನಿಯ ಐಫೋನ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದು ಎಂದರೆ ಕೈಗೆಟುಕದ ಹುಳಿದ್ರಾಕ್ಷಿ ಎಂಬುದನ್ನು ನಾವೆಲ್ಲರೂ ತಿಳಿಸಿದ್ದೇವೆ. ಆದರೆ, ಆಪಲ್ ಕಂಪೆನಿಯ ಇತ್ತೀಚಿನ ಹೈ-ಎಂಡ್ ಸ್ಮಾರ್ಟ್‌ಫೋನ್ ಹಾಗೂ 1,29,999 ರೂ. ಬೆಲೆಯ iPhone 14 Pro ಸ್ಮಾರ್ಟ್‌ಫೋನ್ ನಿಮಗೆ ಕೇವಲ 10,000 ರೂ.ಗೆ ದೊರೆಯಲಿದೆ ಎಂದರೇ ನೀವು ನಂಬಲೇಬೇಕು.! ಹೌದು, ಚೀನಾದ ಮೊಬೈಲ್ ತಯಾರಕ ಕಂಪೆನಿಯೊಂದು iPhone 14 Pro ಸಾಧನದ ವಿನ್ಯಾಸದಂತೆಯೇ ಕಾಣಿಸುತ್ತಿರುವ ತನ್ನ ಹೊಸ ಸ್ಮಾರ್ಟ್‌ಫೋನನ್ನು 10,000 ರೂ. ಬೆಲೆಯಲ್ಲಿ ಪರಿಚಯಿಸಿದೆ. ಚೀನಾದ ಈ ಕಂಪೆನಿಯು iPhone 14 Pro ಸಾಧನದ ತಲೆಮೇಲೆ ಹೊಡೆದಂತೆ ತನ್ನ ಹೊಸ ಮಾಡೆಲ್ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯ ಗಮನಸೆಳೆದಿದೆ. ಹಾಗಾದರೆ, iPhone 14 Pro ರೀತಿಯಲ್ಲೇ ಇರುವ 10,000 ರೂ. ಬೆಲೆಯ ಆ ಹೊಸ ಸ್ಮಾರ್ಟ್‌ಫೋನ್ಚೀನಾದ  ಎಂಬ ಮೊಬೈಲ್ ಕಂಪೆನಿಯು iPhone 14 Pro ರೀತಿಯಲ್ಲೇ ಇರುವ 10,000 ರೂ. ಬೆಲೆಯ ಹೊಸ ಸ್ಮಾರ್ಟ್‌ಫೋನ್ ಸಾಧನವನ್ನು ಚೀನಾ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಇದಕ್ಕೆ S1 Pro ಎಂದು ಹೆಸರಿಸಿದೆ. iPhone 14 Pro ಸಾಧನದ ತಲೆಮೇಲೆ ಹೊಡೆದಂತೆ ಕಾಣಿಸುವ ಈ ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ಹೈ-ಎಂಡ್ ಪ್ರೀಮಿಯಂ ಲುಕ್ ಹೊಂದಿದ್ದರೆ, ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಫೀಚರ್ಸ್ ಒಳಗೊಂಡಿದೆ. ಈ ಹೊಸ ಸ್ಮಾರ್ಟ್‌ಫೋನ್ 6.5-ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, ಇದು 60HZ ರಿಫ್ರೆಶ್ ರೇಟ್‍ ಸಾಮರ್ಥ್ಯದಲ್ಲಿದೆ. ಇನ್ನುಳಿದಂತೆ, 8GB RAM, + 128GB ಮೆಮೊರಿ ಜೊತೆಗೆ ಜೋಡಿಸಲಾಗಿರುವ ಕ್ವಾಡ್ ಕೋರ್ T7150 ಚಿಪ್‌ಸೆಟ್, 13 MP ಟ್ರಿಪಲ್ ಕ್ಯಾಮೆರಾ ಸೆಟಪ್, 10W ಫಾಸ್ಟ್ ಚಾರ್ಜಿಂಗ್ ಜೊತೆಗೆ 5000 ಬ್ಯಾಟರಿ ಮತ್ತು ಡ್ಯುಯಲ್ ಸಿಮ್, 3G, 4G,  Wi-Fi ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಹೆಬ್ಬಾಳ ಮೇಲ್ಸೇತುವೆಗೆ 20 ವರ್ಷ: ಈಗಲೂ ಜಂಕ್ಷನ್‌ನಲ್ಲಿ ಟ್ರಾಫಿಕ್, ಪ್ರಯಾಣಿಕರು ಏನಂತಾರೆ?

Mon Jan 16 , 2023
    ಬೆಂಗಳೂರು, ಜನವರಿ 16: ಬೆಂಗಳೂರಿನ ಉತ್ತರ ಭಾಗದಿಂದ ನಗರದೊಳಕ್ಕೆ ಸಂಪರ್ಕ ಕಲ್ಪಿಸುವ 5.2 ಕಿಮೀ ಉದ್ದದ ಹೆಬ್ಬಾಳ ಮೇಲ್ಸೇತುವೆ ಸಂಚಾರ ಅಡಚಣೆಯ ಕೇಂದ್ರ ಬಿಂದುವಾಗುತ್ತಿದೆ. ಸ್ಥಗಿತಗೊಂಡಿದ್ದ ನವೀಕರಣ ಕಾರ್ಯ ಪುನಾರಂಭಗೊಂಡಿದ್ದು, ವಿವಿಧ ಕಾರಣಗಳಿಂದ ಈ ಜಂಕ್ಷನ್‌ ವಾಹನಗಳಿಂದ ತುಂಬಿ ತುಳುಕುತ್ತದೆ. ಅನೇಕ ಲೋಪದೋಷಗಳ ಸಹಿತ 2003ರ ಲೋಕಾರ್ಪಣೆಗೊಂಡ ಈ ಹೆಬ್ಬಾಳ ರಸ್ತೆ ಮೇಲ್ಸೇತುವೆ ಜಂಕ್ಷನ್ ವಾಹನಗಳ ದಟ್ಟಣೆ ಹೆಚ್ಚತ್ತಲೇ ಇದೆ. ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಬ್ಬಾಳದ […]

Advertisement

Wordpress Social Share Plugin powered by Ultimatelysocial