ಬೆಂಗಳೂರು ಹೆಬ್ಬಾಳ ಮೇಲ್ಸೇತುವೆಗೆ 20 ವರ್ಷ: ಈಗಲೂ ಜಂಕ್ಷನ್‌ನಲ್ಲಿ ಟ್ರಾಫಿಕ್, ಪ್ರಯಾಣಿಕರು ಏನಂತಾರೆ?

 

 

ಬೆಂಗಳೂರು, ಜನವರಿ 16: ಬೆಂಗಳೂರಿನ ಉತ್ತರ ಭಾಗದಿಂದ ನಗರದೊಳಕ್ಕೆ ಸಂಪರ್ಕ ಕಲ್ಪಿಸುವ 5.2 ಕಿಮೀ ಉದ್ದದ ಹೆಬ್ಬಾಳ ಮೇಲ್ಸೇತುವೆ ಸಂಚಾರ ಅಡಚಣೆಯ ಕೇಂದ್ರ ಬಿಂದುವಾಗುತ್ತಿದೆ. ಸ್ಥಗಿತಗೊಂಡಿದ್ದ ನವೀಕರಣ ಕಾರ್ಯ ಪುನಾರಂಭಗೊಂಡಿದ್ದು, ವಿವಿಧ ಕಾರಣಗಳಿಂದ ಈ ಜಂಕ್ಷನ್‌ ವಾಹನಗಳಿಂದ ತುಂಬಿ ತುಳುಕುತ್ತದೆ.

ಅನೇಕ ಲೋಪದೋಷಗಳ ಸಹಿತ 2003ರ ಲೋಕಾರ್ಪಣೆಗೊಂಡ ಈ ಹೆಬ್ಬಾಳ ರಸ್ತೆ ಮೇಲ್ಸೇತುವೆ ಜಂಕ್ಷನ್ ವಾಹನಗಳ ದಟ್ಟಣೆ ಹೆಚ್ಚತ್ತಲೇ ಇದೆ. ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಬ್ಬಾಳದ ಮೂಲಕ ಹೊರ ವರ್ತುಲ ರಸ್ತೆಯನ್ನು ನಿರ್ಮಿಸಿದ ಬಳಿಕ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣಕ್ಕೆ ನಗರದಿಂದ ಇದೇ ಮೇಲ್ಸೇತುವೆ ಮಾರ್ಗವಾಗಿ ಹಾದು ಹೋಗಬೇಕಿದೆ. ಒಟ್ಟಾರೆ ನಗರ ವ್ಯಾಪ್ತಿಯಲ್ಲಿ ಈ ಮೇಲ್ಸೇತುವೆಯಲ್ಲಿ ಸಂಚಾರ ಅಡಚಣೆ ಹೆಚ್ಚುತ್ತಲೇ ಇದೆ.

2019ರಲ್ಲಿ ಜನರು ಹೆಚ್ಚಾಗಿ ಓಡಾಡುವ ಸಮಯದಲ್ಲಿ ದೈನಂದಿನಲ್ಲಿ 3.9 ಲಕ್ಷ ಪ್ರಯಾಣಿಕರು (26,896 PCU) ಸಂಚಾರಿಸಿದ್ದಾರೆ. ಇದೇ ಮುಂದಿನ 2051 ರ ವೇಳೆಗೆ ಹೆಬ್ಬಾಳ ಜಂಕ್ಷನ್ ನಲ್ಲಿ ನಿತ್ಯ 6.9 ಲಕ್ಷ (40,935 PCU) ಪ್ರಯಾಣಿಕರು ಪೀಕ್ ಅವರ್ ನಲ್ಲಿ ಸಂಚರಿಸುತ್ತಾರೆ ಎಂದು ಅಂದಾಜಿಸಲಾಗಿದೆ.

ಭಾರೀ ವಾಹನ ನಿಷೇಧ, ದಟ್ಟಣೆ ಕಡಿಮೆಗೆ ಕ್ರಮಸಂಚಾರ ಪೊಲೀಸರು ಅಮೃತಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ಪ್ರಯಾಣದ ಸಮಯವನ್ನು 18 ರಿಂದ ಎಂಟು ನಿಮಿಷಕ್ಕೆ ಇಳಿಸಿದ್ದಾರೆ. ಹೆಚ್ಚು ಟ್ರಾಫಿಕ್ ಸಿಬ್ಬಂದಿ ನಿಯೋಜಿಸುವ ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಪೀಕ್ ಅವರ್‌ನಲ್ಲಿ ಸಾದಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳ ಫ್ಲೈಓವರ್‌ವರೆಗೆ ಭಾರೀ ಸರಕು ಸಾಗಾಣೆ ವಾಹನ ನಿಷೇಧಿಸಿದ್ದಾರೆ. ಈ ಮೂಲಕ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಯತ್ನಿಸಲಾಗುತ್ತಿದೆ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರ ಕೈಗೊಳ್ಳಲಿರವ ಈ ಸಂಚಾರ ದಟ್ಟಣೆ ನಿಯಂತ್ರಣ ಕಮಗಳು ಕೇವಲ ತಾತ್ಕಾಲಿಕ ಎನ್ನುತ್ತಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಟರ್ಮಿನಲ್ 2 ಉದ್ಘಾಟನೆಯಾಗಿದೆ. ಹೀಗಾಗಿ ಬಳ್ಳಾರಿ ರಸ್ತೆಯಲ್ಲಿ ದಟ್ಟಣೆ ಹೆಚ್ಚಲಿದೆ. ಇರುವ ಪರ್ಯಾಯ ರಸ್ತೆ (ಹೆಣ್ಣೂರು-ಬಾಗಲೂರು ಮುಖ್ಯರಸ್ತೆ) ಯ ಸುಧಾರಣೆಗೆ ಸರ್ಕಾರ ಉತ್ಸುಕತೆ ತೋರುತ್ತಿಲ್ಲ. ಆದ್ದರಿಂದ ನಿತ್ಯ ಸಂಚಾರ ಸಂಕಷ್ಟ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ದೂರದ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ತೆರಳುವ ಬಸ್‌ಗಳು ಫ್ಲೈಓವರ್ ಬಳಿ ಮತ್ತು ಎಸ್ಟೀಮ್ ಮಾಲ್ ಎದುರು ನಿಲ್ಲುವುದರಿಂದ ಈ ರಸ್ತೆಯಲ್ಲಿ ರಾತ್ರಿ ದಟ್ಟಣೆ ಹೆಚ್ಚಿರುತ್ತದೆ. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಬಾಕಿ ಕೆಲಸ, ಮೇಲ್ಸೇತುವೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಇದರಿಂದಲೂ ಸಂಚಾರ ಅಡಚಣೆ ಉಂಟಾಗಲಿದೆ.

ಹೆಬ್ಬಾಳ ಮೇಲ್ಸೇತುವೆ ಭಾಗದಲ್ಲಿ ಹೊರ ವರ್ತುಲ ರಸ್ತೆಯ ಅಂಡರ್‌ಪಾಸ್‌ ಇದೆ. ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತುಮಕೂರು ರಸ್ತೆ ಕಡೆಗೆ ಸಿಗ್ನಲ್ ರಹಿತ ಮಾರ್ಗ ಹಾಗೂ ವಿಮಾನ ನಿಲ್ದಾಣದಿಂದ ನಗರದ ಒಳಗೆ ಪ್ರವೇಶಿಸಲು ಲೂಪ್‌ನ ಉದ್ದಕ್ಕೂ ಎರಡು ಹೆಚ್ಚುವರಿ ಲೇನ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬಿಡಿಎ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅನುಮತಿ ಸಿಗದ ಹಿನ್ನೆಲೆಯಲ್ಲಿ ಮೇಲ್ಸೇತುವೆ ನವೀಕರಣ, ಲೇನ್ ನಿರ್ಮಾಣ ಕೆಲಸ 2019ರಲ್ಲಿ ನಿಲ್ಲಸಲಾಗಿತ್ತು. ಸದ್ಯ ಕಾಮಗಾರಿ ಮುಂದುವರಿಸಲು ಅನುಮಿತಿ ಸಿಕ್ಕಿದೆ. ನಮ್ಮ ಮೆಟ್ರೋದ ಹೊರ ವರ್ತುಲ ರಸ್ತೆ ಪಶ್ಚಿಮಕ್ಕೆ ಕೆಂಪಾಪುರವರೆಗೆ (ಹಂತ 3) ಮತ್ತು ಸರ್ಜಾಪುರದಿಂದ ಹೆಬ್ಬಾಳವರೆಗೆ ( ಹಂತ 3A) ಕಾಮಗಾರಿ ನಡೆಯುತ್ತಿದೆ. ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದ ಉಪನಗರ ರೈಲು ಕಾರಿಡಾರ್ ಇದೇ ಹೆಬ್ಬಾಳ ಮೇಲ್ಸೇತುವೆ ಸಮೀಪವೇ ಹಾದು ಹೋಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ರೈಲ್ವೆಯಲ್ಲಿ 2422 ಅಪ್ರೆಂಟಿಸ್ ಹುದ್ದೆಗಳ ನೇಮಕ.

Mon Jan 16 , 2023
ಕೇಂದ್ರ ರೈಲ್ವೆಯ ರೈಲ್ವೆ ನೇಮಕಾತಿ ಮಂಡಳಿ ಕಳೆದ ಡಿಸೆಂಬರ್‌ ತಿಂಗಳಲ್ಲಿ ಅಪ್ರೆಂಟಿಸ್ ಆಕ್ಟ್‌ 1961 ರಡಿ 2422 ಅಪ್ರೆಂಟಿಸ್ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ಒಂದು ದಿನವಷ್ಟೇ ಬಾಕಿ ಇದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಜನವರಿ 15, 2023ರ ಸಂಜೆ 05-00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಈ ಹುದ್ದೆಗಳಲ್ಲಿ ಆಸಕ್ತಿ ಇದ್ದಲ್ಲಿ ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ […]

Advertisement

Wordpress Social Share Plugin powered by Ultimatelysocial