‘ಪರಶುರಾಮ್’ ಚಿತ್ರದ ವಿಲನ್ ಅಶೋಕ್ ರಾವ್ ನಿಧನ !

 

ಬೆಂಗಳೂರು : ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇಂದು ನಿಧನರಾಗಿದ್ದಾರೆ. ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ನಟ ಪ್ರತೀ ದಿನ ಚಿಕಿತ್ಸೆ ಪಡೆಯುತ್ತಿದ್ದರು.ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದರೆ ಮಧ್ಯೆರಾತ್ರಿ 12.30ಕ್ಕೆ ಕೊನೆಯುಸಿರೆಳೆದಿದ್ದಾರೆ.ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. ಅಶೋಕ್ ಅಗಲಿಕೆ ಬಗ್ಗೆ ನೆರೆಹೊರೆಯವರಾದ ಸುದರ್ಶನ್ ಮಾಹಿತಿ ಕೊಟ್ಟಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದರಾಗಿದ್ದರು. ಅಣ್ಣಾವ್ರೇ ಕರೆದು ಪರಶುರಾಮ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿಸಿದ್ದರು. ಪರಶುರಾಮ ಸಿನಿಮಾ ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಮಾ ಖುರೇಷಿ: ಸಂಪೂರ್ಣವಾಗಿ ಸಂಭಾವಿತ ವ್ಯಕ್ತಿ ವಲಿಮಾಯ್ ಸಹನಟ ಅಜಿತ್;

Wed Feb 2 , 2022
ಮಹಾರಾಣಿಯ ಯಶಸ್ಸಿನ ನಂತರ, ಬಾಲಿವುಡ್ ನಟಿ ಹುಮಾ ಖುರೇಷಿ ಕೆಲಸದ ಮುಂಭಾಗದಲ್ಲಿ ಹಲವಾರು ಹೊಸ ಯೋಜನೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ Mithya, Valimai, Double XL ಮತ್ತು ಹೆಚ್ಚಿನವು ಸೇರಿವೆ. ಹುಮಾ ಅವರ ಚಿತ್ರ, ಅಜಿತ್ ಕುಮಾರ್ ಜೊತೆಗಿನ ವಲಿಮೈ, ಫೆಬ್ರವರಿ 24, 2022 ರಂದು ಬಿಡುಗಡೆಯಾಗಲಿದೆ. ಅವರ ಚಲನಚಿತ್ರದ ಬಿಡುಗಡೆಗೆ ಮುಂಚಿತವಾಗಿ, IndiaToday.in ಹುಮಾ ಖುರೇಷಿ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಕುಳಿತು, ಅಲ್ಲಿ ಅವರು ಅಜಿತ್ ಅವರೊಂದಿಗೆ ಕೆಲಸ ಮಾಡುವ […]

Advertisement

Wordpress Social Share Plugin powered by Ultimatelysocial