ಓ ಮನುಕುಲವೇ, ನೀ ಏಕೆ ಇಷ್ಟೊಂದು ಸ್ವಾರ್ಥಿಯಾದೆ ?

ಮನುಷ್ಯ ಎಂದ ಕೂಡಲೇ ಅವನಲ್ಲಿ ತನ್ನದೇ ಆದ ವಿವಿಧ ವ್ಯಕ್ತಿತ್ವಗಳನ್ನು ನಾವು ನೋಡಬಹುದು. ಅದರಲ್ಲಿ ಒಂದು ಒಳ್ಳೆ ಮನುಸ್ಸುಳ್ಳವನು ಇರುತ್ತಾರೆ, ಕೆಟ್ಟ ಮನುಸ್ಸುಳ್ಳವನು ಇರುತ್ತಾರೆ. ಕಾಲ ಕಾಲ ಬದಲಾಗುತ್ತಿದಂಗೆ ಮನುಷ್ಯನ ಬುದ್ದಿಯೂ ಸ್ವಾರ್ಥವಾಗುತ್ತಿದೆ. ಮನುಷ್ಯ ಇನಾಯ ಮನಸ್ಥಿತಿ ಇಟ್ಟಿರುತ್ತಾನೆ ಎಂದು ಯಾರು ಸಹ ಊಹೆ ಮಾಡದ ಸ್ಥಿತಿಗೆ ಬಂದು ತಲುಪಿದ್ದೇವೆ.
“ನಿಜವಾಗಿಯೂ ಈ ಸಮಾಜವನ್ನು ನೋಡುತ್ತಿದ್ದರೆ ನಮಗೆ ನಾಚಿಕೆ ಆಗಬೇಕಾಗೋ ಸಂಗತಿ”.
ನಾವು ಮನುಷ್ಯರು ಅಲ್ಲವೇ? ಬುದ್ದಿವಂತರು, ತತ್ವಜ್ಞಾನಿ, ವಿಜ್ಙಾನಿ,ಸಂಶೋಧಕರು ಎಲ್ಲಾ ನಾವೇ. ನಾವೇ ಸೃಷ್ಟಿ ಮಾಡಿರೋ ಈ ಹಣಕ್ಕೆ ಇರೋ ಬೆಲೆ ಮನುಷ್ಯರಿಗೆ ಇಲ್ಲ.
ಮಾನವ ಎಷ್ಟು ಸ್ವಾರ್ಥಿಯಾಗಿದಾನೆಂದರೆ ಪ್ರಕೃತಿಯಿಂದ ಎಲ್ಲಾ ಪಡೆಯುತ್ತಾನೆ. ಆದರೆ ಪ್ರಕೃತಿ ಉಳಸಿ ಪೋಷಣೆ ಮಾಡುವಲ್ಲಿ ತನಗೆ ಸಂಬಂಧವೇ ಇಲ್ಲವೆಂಬಂತೆ ಜಾರಿಗೋಳ್ಳುತ್ತಾನೆ. ಜಾಣ ಕುರುಡು ತೋರುತ್ತಾನೆ. ‘’ನಾನೇ”ಎಂಬ ಅಹಃ ನಿಂದ ಮೆಟ್ಟಿ ಮೇರೆಯುತ್ತಾನೆ.

ಟೆಕ್ನಲಾಜಿ ನೆಪದಲ್ಲಿ ಪ್ರಕೃತಿಯನ್ನು ನಾಶಮಾಡಿ ಮರ-ಗಿಡಗಳನ್ನು ಬೆಳೆಸುವ ಜಾಗದಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು, ಅಪಾರ್ಟ್ಮೆಂಟ್‌ಗಳನ್ನು ಕಟ್ಟುತ್ತಿದ್ದಾನೆ.
ಪ್ರಕೃತಿಯಲ್ಲಿ ಸಿಗುವ ನ್ಯಾಚುರಲ್ ಪರ್ದಾಥಗಳಿಗೆ ರಾಸಾಯನಿಕ ವಸ್ತುಗಳನ್ನು ಕಲಬೇರಿಕೆ ಮಾಡಿ ಕಲುಷಿತ ಆಹಾರವನ್ನು ನೀಡುತ್ತಿದ್ದಾನೆ.

ತಾಯಿಯಾಗಿ,ಅಕ್ಕನಾಗಿ,ತಂಗಿಯಾಗಿ,ಗೆಳೆತಿಯಾಗಿ ನೋಡದೆ ಕಾಮದೃಷ್ಠಿಯಲ್ಲಿ ಹೆಣ್ಣಿನ ಮೇಲೆ ಅತ್ಯಚಾರ ಮಾಡುತ್ತಿದ್ದಾನೆ.

ದೇವರಾಗಿ ಪೂಜಿಸಬೇಕಾದ ತಂದೆ-ತಾಯಿಯನ್ನು ವೃದ್ದರಾದ ಮೇಲೆ ವೃದ್ದಾಶ್ರಮದಲ್ಲಿ ಸೇರುಸುತ್ತಿದ್ದಾನೆ.

ಮನುಷ್ಯರನ್ನು ಮನುಷ್ಯನಾಗಿ ಕಾಣದೇ “ನಾನು ಮೇಲು ಜಾತಿ, ನೀನು ಕೀಲು ಜಾತಿ” ಎಂದು ಜಾತಿ-ಬೇಧ ಮಾಡುತ್ತಿದ್ದಾನೆ.

ದುಡ್ಡಿನ ಮೋಹದಲ್ಲಿ ಕಳ್ಳತನ, ದರೋಡೆ, ಕೊಲೆಗಳನ್ನು ಮಾಡಿ ಮನುಷ್ಯತ್ವವನ್ನೇ ಮರೆತ್ತಿದ್ದಾನೆ.
ಶ್ರೀಮಂತನು ಶ್ರೀಮಂತನಾಗಿಯೇ ಇದ್ದಾನೆ, ಬಡವನು ಬಡವನಾಗಿಯೇ ಉಳಿಯುತ್ತಿದ್ದಾನೆ.
ಎತ್ತ ಸಾಗುತ್ತಿದೆ ಈ ಸಮಾಜ? ಸಂಬಂಧಗಳಿಗೆ ಬೆಲೆ ಇಲ್ಲವೇ? ಪ್ರಾಣಿ-ಪಕ್ಷಿಗಳೆಂದು ಕರುಣೆ ಇಲ್ಲವೇ? ಸ್ವಾರ್ಥದಿಂದ ತುಂಬಿ ಹೋಗುತ್ತಿದಿಯೇ ಈ “ಮಾನವನ ಕುಲ”.
ಇವೆಲ್ಲದರ ಪ್ರತಿಫಲವೇ ಇಂದಿನ ಮನುಷ್ಯ ಅನಾರೋಗಿಯಾಗಿ, ಅನಾಥ ಸಾವುಗಳಾಗಿ, ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿದ್ದಾನೆ. ತನ್ನೆಲ್ಲ ಪಾಪಕ್ಕೆ ಪ್ರಕೃತಿಯಿಂದ ಉತ್ತರ ಸಿಗುತ್ತಿದ್ದರು ಬದಲಾಗದ ಈ ಲೋಕ ಕುರುಡನಾಗಿರುತ್ತಾನೆ. ಗುಣದಲ್ಲಿ ಪ್ರಾಣಿಗಳೇ ಮೇಲು ಮಾನವನಾಗುವುದಕ್ಕಿಂತ ಎಂದು ದೊಡ್ಡವರೇ ಹೇಳಿಲ್ಲವೇ? ಎಂತಾ ಕೀಲು ಮಟ್ಟಕ್ಕೆ ತಲುಪಿದ್ದೇವೆ.

ನಮ್ಮ ಮನುಷ್ಯರ ಬಾಳು ಎಲ್ಲಿವರೆಗೂ ಬಂದಿದೆ ನೋಡಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ,”ಪರಿತ್ರಾಣಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ. ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ.’’ ಈ ಮಾತು ನಿಜವಾಗೋ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ. ಒಳ್ಳೆಯದು ಅಥವಾ ಕೆಟ್ಟದು, ನಾವು ಏನು ಮಾಡುತ್ತಿರೋ ಅದೇ ನಮಗೆ ಹಿಂತಿರುಗುತ್ತದೆ.

“ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು”.
ಇನ್ನಾದರೂ ಸ್ವಾರ್ಥವನ್ನು ಬಿಟ್ಟು ಮನುಷ್ಯತ್ವದಿಂದ ಜೀವಿಸೋಣ, ಮುಂದಿನ ಪೀಳಿಗೆಗಳಿಗಾದರು ದಾರಿದೀಪಗಳಾಗೋಣ. ಮಾನವೀತೆಯಿಂದ ಬಾಳೋಣ.
ನಾನು ನಿರ್ಧಾರ ಮಾಡಿ ಆಗಿದೆ… ನಾನೇನಾದರು ಸಮಾಜ ಸೇವೆ ಮಾಡುವುದಾದರೇ ಅದು ಪ್ರಕೃತಿ ಉಳಿಸುವುದರ ಮೂಲಕ ಮಾಡುತ್ತೇನೆ.
‘’ಜೈ ಹಿಂದ್’’…
-ಅರ್ಚನ ಸ್ವರಾಜ್,ಮಾಲೂರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2022 ರ ಅಂತರರಾಷ್ಟ್ರೀಯ ದೋಸೆ ದಿನದಲ್ಲಿ ಈ ಅದ್ಭುತವಾದ ದೋಸೆ ಪಾಕವಿಧಾನಗಳನ್ನು ಪ್ರಯತ್ನಿಸಿ

Fri Mar 25 , 2022
ನಮಗೆ ತಿಳಿದಿರುವಂತೆ ಇಂದು ಅಂತರರಾಷ್ಟ್ರೀಯ ದೋಸೆ ದಿನವಾಗಿದೆ ಮತ್ತು ನಾವೆಲ್ಲರೂ ದೋಸೆಗಳನ್ನು ಹೊಂದಲು ಇಷ್ಟಪಡುತ್ತೇವೆ, ವಿಶೇಷವಾಗಿ ಮಕ್ಕಳು. ಬಿಸಿ ಚಾಕೊಲೇಟ್ ಅಥವಾ ವೆನಿಲ್ಲಾ ಐಸ್ ಕ್ರೀಂನ ಸ್ಕೂಪ್ನೊಂದಿಗೆ ಸ್ವಲ್ಪ ಸ್ಟ್ರಾಬೆರಿ, ಅವು ನಿಮ್ಮ ಬಾಯಲ್ಲಿ ನೀರನ್ನು ತರುತ್ತವೆ. ಆದ್ದರಿಂದ, ಇಂದು ನಾವು ನಿಮ್ಮ ಮನೆಯಲ್ಲಿ ನೀವು ಆನಂದಿಸಬಹುದಾದ ಕೆಲವು ಉತ್ತಮ ಮತ್ತು ಸುಲಭವಾದ ದೋಸೆ ಪಾಕವಿಧಾನಗಳನ್ನು ಸಂಗ್ರಹಿಸಿದ್ದೇವೆ. ಸುಮ್ಮನೆ ಓದಿ! 2022 ರ ಅಂತರರಾಷ್ಟ್ರೀಯ ದೋಸೆ ದಿನದಂದು ಅದ್ಭುತವಾದ ದೋಸೆ […]

Advertisement

Wordpress Social Share Plugin powered by Ultimatelysocial