ಪೊಲೀಸ್​ ಕೆಲಸ ಸುಲಭದ ಕೆಲಸವಲ್ಲ ! ಈ​ ಕೆಲಸದ ಸಹವಾಸವೇ ಬೇಡ ಅಂತ ಕಣ್ಮರೆಯಾದ ಪೊಲೀಸ್​ ಅಧಿಕಾರಿ!

ಕೊಟ್ಟಾಯಂ: ಪೊಲೀಸ್​ ಕೆಲಸ ಸುಲಭದ ಕೆಲಸವಲ್ಲ. ಸಾರ್ವಜನಿಕ ಸೇವೆ ಆಗಿರುವುದರಿಂದ ಎಷ್ಟು ಗೌರವವನ್ನು ಸಂಪಾದಿಸುತ್ತೇವೆಯೋ ಅಷ್ಟೇ ಒತ್ತಡಗಳನ್ನು ಈ ಕೆಲಸದಲ್ಲಿ ಎದುರಿಸಬೇಕಾಗುತ್ತದೆ. ಆದರೆ, ಕೆಲವೊಮ್ಮೆ ಮೇಲಾಧಿಕಾರಿಗಳ ದರ್ಪ ಕೆಳಹಂತದ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ.

ಇದರಿಂದ ಬೇಸತ್ತು ಕೆಲವರು ಸಾವಿನ ಹಾದಿಯನ್ನೂ ಹಿಡಿದಿದ್ದಾರೆ. ಕೆಲವರು ಸಮಸ್ಯೆಯನ್ನು ಎದುರಿಸಿದರೆ, ಇನ್ನು ಕೆಲವರು ಇದರ ಸಹವಾಸವೇ ಬೇಡ ಅಂತ ನಾಪತ್ತೆಯಾಗಿಬಿಡುತ್ತಾರೆ. ಇಂಥದ್ದೇ ಘಟನೆ ಕೇರಳದಲ್ಲಿ ನಡೆದಿದೆ.

ಕೆಲಸದ ಒತ್ತಡವನ್ನು ತಡೆಯಲಾರದೆ ಈ ಕೆಲಸವೇ ಬೇಡ ಅಂತ ಕೇರಳದ ಪೊಲೀಸ್​ ಅಧಿಕಾರಿಯೊಬ್ಬರು ಯಾರಿಗೂ ತಿಳಿಸಿದೇ ನಾಪತ್ತೆಯಾಗಿರುವ ಘಟನೆ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದೆ. ಕಣ್ಮರೆಯಾದ ಪೊಲೀಸ್​ ಅಧಿಕಾರಿಯನ್ನು ಕೊಟ್ಟಾಯಂ ಪೂರ್ವ ಪೊಲೀಸ್​ ಠಾಣೆಯ ಸಿವಿಲ್​ ಪೊಲೀಸ್​ ಅಧಿಕಾರಿ ಬಶೀರ್​ ಎಂದು ಗುರುತಿಸಲಾಗಿದೆ. ಅವರ ಫೋನ್​ ಮತ್ತು ಸಂಬಂಧಿತ ವಸ್ತುಗಳು ಪೊಲೀಸ್​ ಕ್ವಾಟ್ರಸ್​ನಲ್ಲಿ ಪತ್ತೆಯಾಗಿವೆ.

ಅತಿಯಾದ ಕೆಲಸದ ಹೊರೆ ಮತ್ತು ಕೆಲಸದ ಒತ್ತಡದಿಂದ ಬಶೀರ್ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ಮೇಲಾಧಿಕಾರಿಗಳ ನಿರಂತರ ಒತ್ತಡಿಂದ ಕುಗ್ಗಿ ಹೋಗಿದ್ದ ಬಶೀರ್​, ಈ ಕೆಲಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಶನಿವಾರ ಸಂಜೆ ಇದ್ದಕ್ಕಿದ್ದಂತೆ ದಿಢೀರ್​ ನಾಪತ್ತೆಯಾಗಿರುವ ಬಶೀರ್​, ತಮ್ಮ ಮನೆಯವರನ್ನು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ.

ನಾಪತ್ತೆ ಪ್ರಕರಣ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಬಶೀರ್​ ಕುಟುಂಬವನ್ನು ಸಂಪರ್ಕಿಸಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ತಮಿಳುನಾಡಿನ ಎರ್ವಾಡಿ ಚರ್ಚ್​ನಲ್ಲಿ ಇರುವುದಾಗಿ ಮತ್ತು ಇನ್ನು ಎರಡು ದಿನಗಳಲ್ಲಿ ವಾಪಸ್​ ಬರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರಿಂದ ಶೋಧ ಕಾರ್ಯ ಸದ್ಯಕ್ಕೆ ಮುಂದುವರಿದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರಕಾರಿ ಉದ್ಯೋಗಿಗಳಿಗೆ ವೇತನ ನೀಡಲು ಸಹ ಹಣವಿಲ್ಲ

Sun Feb 26 , 2023
ಇಸ್ಲಾಮಾಬಾದ್‌: ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರಕಾರಿ ಉದ್ಯೋಗಿಗಳಿಗೆ ವೇತನ ನೀಡಲು ಸಹ ಹಣವಿಲ್ಲದಂತಾಗಿದೆ. ಸರಕಾರಿ ನೌಕರರ ವೇತನ ಸೇರಿದಂತೆ ಎಲ್ಲ ಬಿಲ್‌ಗ‌ಳನ್ನು ತಡೆಹಿಡಿಯುವಂತೆ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್‌ ಸರಕಾರ ಸೂಚಿಸಿದೆ. ಇನ್ನೊಂದೆಡೆ ಮುಂದಿನ ಆದೇಶದವರೆಗೆ ಸಚಿವಾಲಯಗಳು, ಇಲಾಖೆ ಗಳು ಸಹಿತ ಎಲ್ಲ ವಿಭಾಗಗಳ ಬಿಲ್‌ಗ‌ಳನ್ನು ಅನು ಮೋದಿಸದಂತೆ ಪಾಕಿಸ್ಥಾನ ಕಂದಾಯ ಇಲಾಖೆಯ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್‌ ಹಣಕಾಸು ಮತ್ತು ಕಂದಾಯ ಸಚಿವಾಲಯ ಸೂಚನೆ ನೀಡಿದೆ. ಕೆಲವು ವಾರಗಳ ಹಿಂದೆ ಪಾಕಿಸ್ಥಾನದ ವಿದೇಶಿ […]

Advertisement

Wordpress Social Share Plugin powered by Ultimatelysocial